ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಚ್ಚಿದ ೨೪ ಫ್ರೇಮ್ …

blog-head.jpg

ಅಭಯ ಸಿಂಹ ಆರ್ಥಾತ್  ಅಭಯ. ಪೂನಾದ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಿರ್ದೇಶನ ಕಲಿತು ಬಂದ ಈತ ಈಗಾಗಲೇ ಗಾಂಧಿನಗರದಲ್ಲಿ ಹೆಜ್ಜೆ ಊರಿದ್ದಾನೆ. ‘ಗುಬ್ಬಚ್ಚಿಗಳು’ ಈತನ ನಿರ್ದೇಶನದ ಮೊದಲ ಚಿತ್ರ.

ಕಡಲ ದಂಡೆಯಿಂದ ಎದ್ದು ಬಂದ ಅಭಯ ಹಿಡಿದ ಪಟ್ಟು ಬಿಡುವ ಹುಡುಗನಲ್ಲ. ಥೇಟ್ ತಂದೆಯಂತೆ, ಅಥವಾ ಅಜ್ಜನಂತೆ. ಜಿ. ಟಿ. ನಾರಾಯಣರಾಯರ ಮೊಮ್ಮಗ, ಮಂಗಳೂರಿನ ಅತ್ರಿ ಬುಕ್ ಸೆಂಟರ್ ನ ಜಿ ಎನ್ ಅಶೋಕವರ್ಧನ -ದೇವಕಿಯವರ ಮಗ. ಇಬ್ಬರೂ ಈತನಲ್ಲಿ ಹುಟ್ಟು ಹಾಕಿದ ಈ ಗುಣವೇ ಈತನನ್ನು ಈಗ ಎತ್ತರಕ್ಕೆ ಕೊಂಡೊಯ್ದಿದೆ.

ಮಂಗಳೂರಿನಲ್ಲಿದ್ದಾಗಲೇ ಅವಳಿ, ತ್ರಿವಳಿ ಅದಕ್ಕೂ ಮೀರಿದವರ ಬಗ್ಗೆ ಸಾಕ್ಷಚಿತ್ರ ತಯಾರಿಸಿದಾತ. ನಂತರ ನೇರ ಪೂನಾಗೆ ತೆರಳಿದ. ಅಲ್ಲಿದ್ದಾಗಲೇ ಪುಟಾಣಿ ಚಿತ್ರ ತಯಾರಿಸಿದ. ಮಂಗಳೂರಿನ ಬಗ್ಗೆ ಸಾಕ್ಷಚಿತ್ರ ತಯಾರಿಸಿದ. ಈಗ ಬೆಂಗಳೂರು ಈತನ ತಾಣ. ಇಸ್ಮಾಯಿಲ್ ಹೇಳಿದ ಕಥೆಯ ಎಳೆಯನ್ನೇ ಹಿಡಿದು ಗುಬ್ಬಚ್ಚಿಗಳು ನಿರ್ದೆಶಿಸುತ್ತಿದ್ದಾನೆ. ಬಿ ಸುರೇಶ್ ನಿರ್ಮಿಸುತ್ತಿದ್ದಾರೆ.

ಅದು ಹೇಗಾದರೂ ಇರಲಿ ಅಭಯ ಇಂದು ಸಿನಿಮಾದ ಬಗ್ಗೆ ಅಧಿಕೃತವಾಗಿ ಮಾತಾಡಬಲ್ಲ  ಆತನಿಗೆ ಬದುಕು ಎಂಬುದು ೨೪ ಫ್ರೇಂಗಳ ಮೊತ್ತ. ಹಾಗಾಗಿಯೇ Shutterbug ಎಂಬ ಬ್ಲಾಗ್ ಮಾಡಿದ್ದಾನೆ. ಚೆನ್ನಾಗಿದೆ ಎನಿಸಿದೆ. ನಿಮಗೂ ಚೆನ್ನಾಗಿದೆ ಎನಿಸಿದಲ್ಲಿ abhayaftii@gmail ಮೈಲ್ ಮಾಡಿ. ಖುಷಿಯಾದಾನು. ಅಷ್ಟೇ ಅಲ್ಲ ಬಿಡುಗಡೆಯಾದಾಗ ಸಿನೆಮಾ ನೋಡಿ.

‍ಲೇಖಕರು avadhi

14 February, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading