ಕಂಬಾರ ವಾಚಿಕೆ ತುಂಬ ತುರ್ತಾಗಿ ಬರುತ್ತಿದೆ. ಇದನ್ನು ಬೇರೆ ಯಾರೂ ಮಾಡುವ ಮೊದಲು ನುಡಿ ಪುಸ್ತಕ ಮಾಡುತ್ತಿದೆ. ಸಂತೋಷ. ಇಂಥ ಸಂತೋಷವೇ ಈಚೆಗೆ ನಡೆಯುತ್ತಿರುವ ಸನ್ಮಾನ ಸಮಾರಂಭಗಳಿಂದಲೂ ದೊರೆಯುತ್ತಿದೆ. ನಿನ್ನೆ ಟೀವಿಯಲ್ಲಿ ಸನ್ಮಾನ ಸ್ವೀಕರಿಸುತ್ತಲಿರುವಾಗ ಕಂಬಾರರ ಕಣ್ಣು ತುಂಬಿದಂತಾಗಿದ್ದು ಗಮನಿಸಿದೆ. ನನಗೂ ಮನಸ್ಸು ತುಂಬಿ ಬಂತು.
ಜ್ಞಾನಪೀಠದಂತಹ ಪ್ರಶಸ್ತಿಗಳು ತಂದುಕೊಡುವ ಸಂತೋಷದ ಜೊತೆಗೇ ಅದಕ್ಕೆ ಕಾರಣವಾದ ಸೃಷ್ಟಿಯ ಕುರಿತು ವ್ಯಾಪಕವಾದ ಓದು, ಮಾತು-ಕತೆ ನಡೆಯಬೇಕು. ಅವರ ಪುಸ್ತಕಗಳು ಮನೆಮನೆ ತಲುಪಿ ಜನ ಅವನ್ನು ಕೈಲಿ ಹಿಡಿದು ಸಂತೋಷದಿಂದ ಓದಿ ನಲಿಯಬೇಕು. ಆ ಕೆಲಸ ಇನ್ನು ಇಪ್ಪತ್ತು ವರ್ಷವಾದ ಮೇಲೆ ನಡೆದರೆ ಪ್ರಯೋಜನವಿಲ್ಲ. ಅಪಾತ್ರ ಪುಸ್ತಕಗಳ ಕೊಂಡು ಯಾರೂ ತಲುಪದ ಗ್ರಂಥಾಲಯಗಳ ಶೆಲ್ಫುಗಳಲ್ಲಿ ತುಂಬಿಸಿಡುವ ಬದಲಿಗೆ ಆ ಉಳಿಸುವ ಹಣದಿಂದ ಇಂತಹ ಲೇಖಕರ ಆಯ್ದ ಕೃತಿಗಳನ್ನು ತಡಮಾಡದೆ ಪ್ರಕಟಿಸಿ ಕಡಿಮೆ ಕಾಸಿಗೆ ಮಾರಿದರೆ ತುಂಬ ಜನ ಕೊಂಡು ಓದುತ್ತಾರೆ. ಜ್ಞಾನಪ್ರಸಾರದ ಉದ್ದೇಶವೂ ನೆರವೇರುತ್ತದೆ.
ಇದರ ಜೊತೆಗೆ ಜ್ಞಾನಪೀಠದಂತಹ, ಸರಸ್ವತೀ ಸಮ್ಮಾನದಂತಹ ಮನ್ನಣೆ ಗಳಿಸಿದ ಲೇಖಕರ ಕೃತಿ-ವಿಚಾರಗಳ ಕುರಿತು ಸರ್ಕಾರ ಒಳ್ಳೆಯ ಸಂವಾದ ಕಾರ್ಯಕ್ರಮಗಳನ್ನು ಬಹಳ ಕಡೆ ನಡೆಸಬೇಕು. ಇದೇನೂ ಹೊಸ ಬೇಡಿಕೆಯಲ್ಲ, ಆದರೆ ಪ್ರತಿ ಬಾರಿ ಇಂತಹ ಚರಿತ್ರಾರ್ಹ ಸಂಗತಿಗಳು ನಡೆದಾಗ ಸರಕಾರವನ್ನು ಎಚ್ಚರಿಸಲು ಅಗತ್ಯವಾದ ಬೇಡಿಕೆ.
ಇನ್ನೊಂದು ಮಾತು ಹೇಳಬೇಕು. ಇಷ್ಟೇ ಘನವಾದ ಪ್ರಶಸ್ತಿಗಳನ್ನು ಅನ್ಯ ಕ್ಷೇತ್ರಗಳಲ್ಲಿ ಗಳಿಸುವ ಮಹಾನ್ ವ್ಯಕ್ತಿಗಳೂ ನಮ್ಮಲ್ಲಿ ಇದ್ದಾರೆ. ಅವರಿಗೂ ಸಹ ಈ ಬಗೆಯ ಮನ್ನಣೆ ದೊರೆಯುವುದು ಅವಶ್ಯ.

ಆರ್. ವಿಜಯರಾಘವನ್
viji56@gmail.com
Thumbaa sooktavaada maatu helidiri Vijayaraghavan avare
kambarara e prasastigalu tumba chennagede
I LIKE CHANDRASHEKAR KAMBAR VERY MUCH
LONG LIVE
REGARDS