ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಓದುಬಜಾರ್’ನಲ್ಲಿ ಹೊಸ ಮಾಲಿಕೆ

img_18851‘ಓದು ಬಜಾರ್’ ನ ಹೊಸ ಮಾಲಿಕೆ ಇದು. ಬರಹಗಾರರು ರೂಪುಗೊಂಡ ಮೆಟ್ಟಲುಗಳನ್ನು ಗುರುತಿಸುವ ಕೆಲಸ. ನೂರೆಂಟು ಪುಸ್ತಕ ಬರೆದಿರಬೇಕಿಲ್ಲ. ಮನಸ್ಸಿಗೆ ಖುಷಿ ಕೊಟ್ಟ ಒಂದು ಕಥೆ, ಕವಿತೆ ಬರೆದವರೂ ತಾವು ಎದ್ದು ಬಂದ ಬಗೆಯನ್ನು ಹುಡುಕಲಿ ಎಂಬುದು ನಮ್ಮ ಆಶಯ.

ಎಲ್ಲಕ್ಕಿಂತ ಮಿಗಿಲಾಗಿ ತೆರೆಯ ಹಿಂದಿರುವ, ನಾನು ಬರೆಯಬಲ್ಲೆನೆ? ಎಂದು ಮಿಡುಕುತ್ತಿರುವ ಹಲವರಿಗೆ ಇದು ಹುಮ್ಮಸ್ಸು ನೀಡಲಿ ಎಂಬ ಕಾರಣಕ್ಕೆ ಈ ಸರಮಾಲೆ. ನೀವೂ ಬರೆಯಿರಿ…

ನಿಮ್ಮ ಬರಹ mayflowermh@gmail.com ಗೆ ಮೇಲ್ ಮಾಡಿ. ಪೋಸ್ಟ್ ಮಾಡುವುದಾದರೆ ವಿಳಾಸ ‘ಮೇಫ್ಲವರ್ ಮೀಡಿಯಾ ಹೌಸ್, 1, ಮಹಡಿ, ಯುನಿಟ್  5, ಯಮುನಾಬಾಯಿ ರಸ್ತೆ, ಮಾಧವನಗರ, ಬೆಂಗಳೂರು- 560 001

 …..ಅಪ್ಪ ಅಮ್ಮ ದುಡಿಯೋದು, ಬೆವರೋದು, ಪರಸ್ಪರ ಜಗಳಾಡೋದು ನಮಗೆ ಗೊತ್ತಿತ್ತು ಆದರೆ ನಾನು ಓದುತಿದ್ದ ಬರಹದಲ್ಲಿ ಬರ್ತಿದ್ದರಲ್ಲ ಆದರ್ಶ ಪ್ರೇಮಿಗಳು, ದಂಪತಿಗಳು ಆ ರೀತಿ ಒಂದು ದಿನವೂ ಪ್ರೀತಿ ಮಾಡಿದ್ದು ನಮ್ಮ ಗಮನಕ್ಕೆ ಬರ್ತಿರಲಿಲ್ಲ. ನಮ್ಮ ಅಪ್ಪ ಅಮ್ಮನದು ಅಂತರ್ ಜಾತಿ ಪ್ರೇಮದ ಮದುವೆ ಆಗಿದ್ದರೂ ಅವರು ಕಾದಂಬರಿಯ ಪ್ರೇಮಿಗಳ ರೀತಿ ಯಾವತ್ತೂ ನಡೆದುಕೊಳ್ಳದೆ, ಜೊತೆಗೆ ನಮ್ಮಮ್ಮ ಹಂಸ ಬಿಳುಪಿನ ಅಪೂರ್ವ ಸುಂದರಿಯು ಆಗಿರದೇ ಎಲ್ಲರ ಅಪ್ಪ ಅಮ್ಮ ಹ್ಯಾಗಿರ್ತಾರೋ ಹಾಗೆ ಇದ್ದರು. ಒಂಚೂರು ಓದವ್ರು, ನಮಗೆ ಗಾಂಧಿ, ಪರಮಹಂಸರು, ವಿವೇಕಾನಂದರ ಬಗ್ಗೆ ಎಲ್ಲ ಹೇಳವ್ರು ಅಷ್ಟೆ ವ್ಯತ್ಯಾಸ.

ಇನ್ನು ನಮ್ಮಜ್ಜಿ ಇವ್ರ ಮದುವೆಗೆ ವಿರೋಧ ಮಾಡಿ ನಮ್ಮನೆಗೆ ಬರದೇ ಹೋದ್ರು ನಾವೆಲ್ಲಾರೂ ಕಂಡ್ರೆ ಮಾತಾಡಿಸೋರು, ಏನಾದ್ರೂ ಅಂಗಡಿಯಿಂದ ತನ್ಕೊಡಕ್ಕೆ ಹೇಳಿ, ತನ್ಕೊಟ್ಟ ಮೇಲೆ ಉಳಿದ ಕಾಸನ್ನು ನಮಗೆ ಕೊಟ್ಟು ಬಿಸ್ಕತ್ ತಗಳಕೆ ಹೇಳೋಳು. ಆದ್ದರಿಂದ ಕಥೆಯಲ್ಲಿ ಬರುವ ಅತಿ ರಂಜಿತ ಘಟವಾಣಿ ಅತ್ತೆಯನ್ನು ನಮ್ಮಜ್ಜಿಯಲ್ಲಿ ನೋಡುವ ಸೌಭಾಗ್ಯದಿಂದಲೂ ವಂಚಿತರಾಗಿದ್ವಿ.

ನಮ್ಮೂರ ಜನ, ನಮ್ಮ ಚಿಕ್ಕಪ್ಪ- ದೊಡ್ಡಪ್ಪ, ಬಡವರು, ಶ್ರೀಮಂತರು, ನನ್ನ ಕ್ಲಾಸ್ ಮೇಟ್ ಹುಡುಗ ಹುಡುಗಿಯರು ಯಾರನ್ನ ಗಮನಿಸಿದರೂ ಅವರುಗಳಿಗೂ ನಾನು ಓದ್ತಿರೊ ಬರವಣಿಗೆಯ ಪಾತ್ರಗಳಿಗೆ ಎಳ್ಳಷ್ಟು ಸಾಮ್ಯತೆ ಕಾಣಿಸ್ತಾ ಇರಲಿಲ್ಲ…..

ಸಂಪೂರ್ಣ ಓದಿಗೆ ಭೇಟಿ ಕೊಡಿ –ಓದುಬಜಾರ್

‍ಲೇಖಕರು avadhi

14 February, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading