ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದಿ ಎಂದು ದುಂಬಾಲು ಬೀಳಲಾರೆ…

ಸದಾಶಿವ ಸೊರಟೂರು

ದಯವಿಟ್ಟು ಈ ಕವನಗಳನ್ನು ಓದಿ ಪ್ರತಿಕ್ರಿಯಿಸಿ ಅಂತ ದುಂಬಾಲು ಬೀಳಲೇ? ದಯವಿಟ್ಟು ಓದಬೇಡಿ ಅಂತ ಮಾತಿನಲ್ಲೇ ಚಮಕ್ ಮಾಡಿ ಪರೋಕ್ಷವಾಗಿ ಬುಕ್ ನ್ನು ಕೈಗೆ ಎತ್ತಿಕೊಳ್ಳುವಂತೆ ಮೋಡಿ ಮಾಡಲೇ? ‘ನಿಮಿಷ್ಟ ಸ್ವಾಮಿ ಸಾಧ್ಯವಾದರೆ ಓದಿ. ಓದಿದರೆ ಸಂತೋಷ; ಓದದಿದ್ದರೂ ಸಂತೋಷವೇ..! ಅಂತ ದೊಡ್ಡತನ ತೋರಲೆ?’ ಹೋಗಲಿ ಇಲ್ಲಿರುವವೆಲ್ಲವೂ ಕವನಗಳಾ? ಕೆಲವು ಮಾತ್ರ ಕವನಗಳಾ? ಉಳಿದವು ಬರೀ ವಾರ್ತೆಗಳಾ? ಕವನಗಳೇ ಇಲ್ಲ ಇಲ್ಲಿ, ಬರೀ ಒಂದಷ್ಟು ಪದಗಳ ರಾಶಿ ಇದೆ ಅಂದುಕೊಳ್ಳಲಾ? ಸಾಹಿತ್ಯದ ವಿಷಯದಲ್ಲಿ ಅದರಲ್ಲೂ ಕವನಗಳ ವಿಷಯದಲ್ಲಿ ನಾನಿನ್ನು ತುಂಬಾ ಎಳಸು. ಒಂದಷ್ಟು ಒಳ್ಳೆಯ ಕವನಗಳನ್ನು ಬರೆದಿದ್ದೇನೆ ಅಂತ ನನ್ನಷ್ಟಕ್ಕೆ ನಾನೇ ಅಂದುಕೊಂಡಿದ್ದೇನೆ. ಅಂದುಕೊಂಡಿದ್ದು ಸರಿಯೊ ತಪ್ಪೊ ಅನ್ನುವುದನ್ನು ಕೂಡ ನೀವೇ ಹೇಳಬೇಕು.

ಬರೆದ ಕವನಗಳೆಲ್ಲಾ ಪತ್ರಿಕೆಗಳಿಗೆ ಕಳುಹಿಸಲ್ಪಟ್ಟಿದ್ದವು. ಕೆಲವು ಪ್ರಕಟವಾದವು, ಇನ್ನೂ ಕೆಲವು ಕಳುಹಿಸಿದ ರೀತಿಯಲ್ಲಿಯೇ ವಾಪಸ್ಸು ಬಂದವು. ಪ್ರಕಟವಾದವಷ್ಟೇ  ಕವಿತೆಗಳು ಎಂದು ನಾನು ಭಾವಿಸತೊಡಗಿದೆ. ಖುಷಿ ಪಟ್ಟೆ. ಅಂತಹ ಕವನಗಳನ್ನು ಒಂದು ಕಡೆ ಕೂಡಿ ಹಾಕಿ ಅವುಗಳನ್ನು ಒಂದು ಪುಸ್ತಕದ ರೂಪದಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ. ಹೀಗೆ ಕವನಗಳನ್ನು ಪ್ರಕಟಿಸಿದ್ದರಲ್ಲಿ ಅವಧಿ ಆನ್ಲೈನ್ ಜಾಲತಾಣದ್ದೆ ಸಿಂಹಪಾಲು. ಉಳಿದಂತೆ ರಾಜ್ಯದ ಪ್ರಮುಖ ದಿನಪತ್ರಿಕೆಗಳ ಪಾಲೂ ಇದೆ.  ಬರೀ ಪ್ರಕಟಣೆಯೊಂದೇ ಕವಿತೆಯೊಂದನ್ನು ಅಳೆಯುವ ಮಾನದಂಡವಲ್ಲ ಅಂತ ತಿಳಿಯೋಕೆ ತುಂಬಾ ದಿನಗಳು ಬೇಕಾದವು!. ಇರಲಿ,

ಆ ಕವನಗಳಲ್ಲೆವೂ ಈಗ ಪುಸ್ತಕವಾಗಿ ಈಗ ನಿಮ್ಮ ಕೈಯಲ್ಲಿದೆ. ಸನ್ ಸ್ಟಾರ್ ಪ್ರಕಾಶನ ಪ್ರಕಟಿಸಿದೆ. ಆಶಾ  ಜಗದೀಶ್ ಮುನ್ನುಡಿ ಬರೆದಿದ್ದಾರೆ.

ಪುಸ್ತಕ ಈಗ ಮಾರುಕಟ್ಟೆಯಲ್ಲಿ ಲಭ್ಯ.

ಬೆಲೆ : 85 ರೂ.
ಪುಸ್ತಕಕ್ಕೆ 94488 98699 ನಂಬರ್ ಸಂಪರ್ಕಿಸಬಹುದು.

‍ಲೇಖಕರು avadhi

27 January, 2020

1 Comment

  1. T S SHRAVANA KUMARI

    ಶುಭಾಶಯಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading