ಒಲುಮೆ ಹನಿಗಳು

ನಂದಿನಿ ಹೆದ್ದುರ್ಗ

ಕೆಲವು ಕಾಲಗಳೇ ಹಾಗೆ
ಸೋತು ಬೀಗುತ್ತವೆ
….
‘ನಾನು ಮಾತ್ರವಲ್ಲ.
ಬೆಸೆದ ನಮ್ಮ ಆತ್ಮವನ್ನೂ ಬಿಂಬಿಸುತ್ತಿವೆ
ನಿನ್ನ ಕಣ್ಣು…
ಇಂತಹ ಅದ್ಭುತವ ಕಂಡಿರಲಿಲ್ಲ
ನಾನೆಂದೂ ಹಿಂದೆ..’

ಉದ್ಗರಿಸಿದವನೆದೆಯೊಳಗೆ
ಹುದುಗಿ ಹೋದೆ.
ಅವೆಲ್ಲಾ ಅರಿವಿಲ್ಲದೇ ಆಗುವುದು.!!
ಹೇಳುವುದು ಹೇಗೆ?

….
ಪದ್ಯವಾಗುವುದೆಂದರೆ
ಸಮಯಕ್ಕೂ ಸಂಭ್ರಮ
…..
ನನ್ನ ಹಕ್ಕಿದ್ದೂ
ಮಿಕ್ಕುಳಿಯುತ್ತವೆ
ಕೆಲವು
ಗುಕ್ಕುಗಳು.
ನನ್ನ ಸಾಲುಗಳೆಲ್ಲವೂ
ನನ್ನವಲ್ಲ.

ನೀ ಒಲುಮೆ ತುಂಬಿ
ಆಡಿದೀಯೆಂಬ ಮಾತುಗಳನು
ನನ್ನ ಸಂದೇಹ ತಕ್ಕಡಿಯಲಿ
ತೂಗಿ
ತುಂಬಿದ ತೊಟ್ಟಿಯಲಿ
ಅದ್ದಿಬಿಡುತ್ತೇನೆ
ಯುರೇಕಾ..!!!
ಚೆಲ್ಲಿದ್ದು ನಿಷ್ಠೆ
ಉಳಿದದ್ದು ಚೇಷ್ಟೆ…

ಎಂದೋ ದಕ್ಕಿದ
ಮುತ್ತೊಂದರ ಹೊಳಪಲ್ಲಿ
ಸಿಕ್ಕ ತೆಕ್ಕೆಗಳೆಲ್ಲವೂ
ತೂಗು ಬಟ್ಟಿಟ್ಟು
ತೂಗಿಕೊಳ್ಳುತ್ತವೆ.
ಅಸಹಾಯಕ ಸುಖವೊಂದು
ತನ್ನ ತಾನೇ
ಉಪಚರಿಸಿಕ್ಕೊಳ್ಳುತ್ತಿದೆ
….
ಶುಕ್ರ ಕಂತುವ
ಕಾಲದಲ್ಲಿ
ಇವರಿಬ್ಬರ ನಡುವೆ
ಅವರು ಬಂದು
ಸಂಭವಿಸಿತ್ತು
ಸೊಗದ ಗ್ರಹಣ
ಮಾಗಿದ ಮೇಲೇನೊ
ಎಂತೋ ಎಂಬ ದಿಗಿಲಿತ್ತು
ಚಂದ್ರಕ್ಕೆ.
ಪದ್ಯ ಹೊಳೆಯುತ್ತಿವೆ
ಮುಂದಿನದು ಕಾಂಬವರ
ಊಹೆ..
….
ಬಟ್ಟೆಗಳು‌ ಭಾರವೆನಿಸುತ್ತವೆ
ಹೊದಿಕೆಗೆ ನೀನೊದಗುವಾಗ..

ಹಂಗಿನಂಗಳದಲ್ಲಿ
ಕಳಕೊಂಡು
ಕಂಗಾಲಾದಂತೆ
ಈ ಒಲುಮೆ
ನಿಭಾವಣೆ.

ಕರೆಯಲೇ ಬೇಕೆನಿಸುತದೆ
ದಿನದಲಿ ಒಮ್ಮೆಯಾದರೂ
ಗಾಢವಾಗಿ ಕಾಡುವಾಗೆಲ್ಲಾ
ಏನು ಮಾಡಬಹುದು
ನೀನೇ ಹೇಳು.

ಸುಖದ ಸೋನೆಯಂತ ವಿರಹ.
ನಿನ್ನ ಹಚ್ಚಿಕೊಂಡಿದ್ದಕ್ಕೆ
ಮುನಿಸಿಕೊಂಡಿದೆ ಬರಹ.


ಅವಳು ಕೇಳುತ್ತಾಳೆ..
ಹೆಸರಾದರೂ ಹೇಳೇ.
ಗರಿಕೆ ತುದಿಯಲಿ ಕುಳಿತ
ಹನಿಯೊಂದ ತೋರಿ
ಮಳ್ಳ‌ನಗು ನಗುತ್ತೇನೆ.
ನೀನಲ್ಲಿ ಹಿತವಾಗಿ ಅರೆಗಣ್ಣಾಗುವುದು
ಎದೆಯಲ್ಲಿ ಮೂಡುತ್ತದೆ.

ಮುಂದೊತ್ತಿದ ತುಟಿಯ
ನಡುಗೆರೆಯಲ್ಲಿ
ಶುದ್ಧ ಹಸುವಿನ ತುಪ್ಪವಿದೆ
ಕಿನಾರೆಯಲ್ಲಿ ಬೆಳಕು,
ಕೊನೆಯಲ್ಲಿ ಕನಸು
ನಡು ಮಧ್ಯೆ ಆಗಷ್ಟೇ
ಹಿಂಡಿದ
ತಾಜಾ ಜೇನು
ಒಳಗೆ ಅಮೃತದ ಕುಂಭ
ಅಥವಾ
ಹಾದಿ ತಪ್ಪಿಸುವ ಘನವಾದ
ಕಾನು
ದುಡಿಮೆಗೆ ತಕ್ಕ
ಫಲ.
ವ್ಯವಸಾಯದಲ್ಲಿ
ನಷ್ಟವೆಂಬುದೇ ಇಲ್ಲ.
ನಾ ವಿಜ್ಞಾನ
ವಿದ್ಯಾರ್ಥಿ.
ಭೂಗೋಳ
ಆಸಕ್ತಿ.

‍ಲೇಖಕರು Avadhi

October 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Smitha Amrithraj.

    ಪದ್ಯವಾಗುವುದೆಂದರೆ ಸಮಯಕ್ಕೂ ಸಂಭ್ರಮ…ಚೆನ್ನಾಗಿದೆ ಕವಿತೆ ನಂದಿನಿ

    ಪ್ರತಿಕ್ರಿಯೆ
  2. ಎಂ. ಭಾರತಿ

    ಭಾವಗಳು ಹಸಿಯಾದರೂ
    ಹುಸಿಯಲ್ಲವೆಂಬ ಅಹಂಭಾವ.
    ತನು-ಮನವ ಬೆಸೆವ
    ಪದಗಳ ನವಿರು ಉಸಿರು.
    ಮುತ್ತಿನ ಮಣಿಗಳಂದದಿ
    ಬೆವರ ಹನಿಗಳ ಎಣಿಸುವ ಆವಿಭಾ೯ವ.

    ಪ್ರತಿಕ್ರಿಯೆ
  3. ವಿಜಯ ಅಮೃತರಾಜ್ ಕೊಪ್ಪಳ

    ಇವು ಒಲುಮೆಯ ಹನಿಗಳಂತೆ ಅಲ್ಲ, ಜೇನಿನ ಸಿಹಿ ಜೇನಿನ ಹನಿಗಳು ….

    ಕಲಾವಿದರ ಚಿತ್ರಗಳು ಕೂಡ ಪೂರಕವಾಗಿದೆ ಅವರಿಗೂ ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: