ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಒಮ್ಮೆ ನೋಡಲೇಬೇಕಾದ ನಾಟಕ ಇದು…’

ದತ್ತರಾಜ್

ಕನ್ನಡದ ಹೆಮ್ಮೆಯ ಕಥೆಗಾರ ವಸುಧೇಂದ್ರ ಅವರು ಅತ್ಯಂತ ಜನಪ್ರಿಯ ನಮ್ಮಮ್ಮ ಅಂದ್ರೆ ನಂಗಿಷ್ಟ ಸಂಕಲದೊಳಗಿನ ”ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳು” ಹಾಗೂ ಶ್ರೀನಿವಾಸ ವೈದ್ಯರ ”ಶ್ರಾದ್ಧ” ಎಂಬೆರಡು ಕಥಗಳನ್ನು ಸಂಯುಕ್ತವಾಗಿ ತೆರೆಯಮೇಲೆ ತಂದಿರುವ, ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿರುವ ವಟಿಕುಟೀರದ ಕಿರಣ್ ನಾಟಕ ನೋಡಲು ಬಾ ಅಂತ ನನ್ನನ್ನ ಕರೆದಾಗ, ಈಗಾಗಲೇ ಓದಿರುವ ಕಥೆಗಳೇ ಅಲ್ಲವೇ.. ಅವುಗಳನ್ನು ರಂಗದಮೇಲೆ ನೊಡುವುದರಲ್ಲಿ ಮಜಾ ಏನಿರುವುದಿಲ್ಲ ಅಂತನ್ನಿಸಿತ್ತು. ಆದರೆ ವಸುಧೇಂದ್ರ ರವರು ನಾಟಕ ನೋಡ್ಲಿಕ್ಕೆ ನಾನೂ ಹೊಂಟೇನಿ ನೀನೂ ಬಾ ಅಂತ ಅಂತ ಕರೆದಾಗ ಹೋಗದೇ ಇರಲು ಮನಸ್ಸು ಬರಲಿಲ್ಲ. ರಂಗಶಂಕಕ್ಕೆ ಹೋಗಿಪ್ರದರ್ಶನವನ್ನು ನೋಡಿದಮೇಲೆ ಕಿರಣ್ ಮತ್ತವರ ತಂಡದವರ ಅದ್ಭುತ ಪ್ರಯತ್ನಕ್ಕೆ ಬೆರಗಾಗದೇ ಇರಲು ಸಾಧ್ಯವಾಗಲಿಲ್ಲ.
ಉತ್ತಮ ಹಿನ್ನೆಲೆ ಸಂಗೀತದ ಸಹಕಾರದಲ್ಲಿ ನಟರುಗಳು ನಿಜಪಾತ್ರಗಳನ್ನೇ ನಮ್ಮ ಮುಂದೆ ತಂದು ನಿಲ್ಲಿಸುತ್ತಾರೆ. ಕೆಲವೊಂದು ದೃಶ್ಯಗಳಂತೂ ಕಣ್ಣನ್ನು ತೇವಗೊಳಿಸುವಷ್ಟು ಪ್ರಭಾವಶಾಲಿಯಾಗಿವೆ. ನಾಟಕ ಮುಗಿದಮೇಲೆ ಅನೇಕ ಪ್ರೇಕ್ಷಕರು ವೇದಿಕೆಗೆ ನುಗ್ಗಿ ಪಾತ್ರಧಾರಿಗಳನ್ನು ಹಾಗೂ ಕಥೆ ಬರೆದವರನ್ನು ತಬ್ಬಿಕೊಂಡು ಅಭಿನಂದಿಸಿದ ದೃಶ್ಯ ನಿರ್ದೇಶಕರ ಸಫಲತೆಗೆ ಸಾಕ್ಷಿಯಾಗಿತ್ತು.

ಎರಡು-ಮೂರು ದಶಕಗಳ ಹಿಂದಿನ, ಹಾಗೂ ಬಯಲುಸೀಮೆಯ ಕೆಳಮಧ್ಯಮವರ್ಗದ ಮಾಧ್ವಬ್ರಾಮ್ಹಣ ಕುಟುಂಬಗಳಲ್ಲಿನ ವಿಶಿಷ್ಟವಾದ ಭಾಷೆ, ಶಿಷ್ಟಾಚಾರಗಳು, ಕೌಟುಂಬಿಕ ವಾತಾವರಣ, ಅಲ್ಲಿ ತಂದೆ-ತಾಯಿ ಮತ್ತು ಮಕ್ಕಳ ನಡುವಣ ಸಂಬಂಧಗಳು ಮುಂತಾದವುಗಳು ಎರಡೂ ಕಥಗಳಲ್ಲಿನ ವಿಶೇಷತೆಗಳು. ”ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳು” ಒಬ್ಬ ಮಗನ ದೃಷ್ಟಿಕೋಣದ ಮುಖಾಂತರ ಮುಗ್ಧ ಅಮ್ಮನ ಸ್ಟೀಲ್ ಪಾತ್ರಗಳ ಬಗೆಗಿನ ವ್ಯಾಮೋಹವನ್ನು ಹಾಗೂ ಅದಕ್ಕೆ ಕಾರಣವಾದ ಹಿನ್ನೆಲೆಯನ್ನು ನೋಡುವ ಪ್ರಯತ್ನವಾದರೆ, ”ಶ್ರಾದ್ಧ” ಎಂಬುದು ಮುಂಬಯಿಯಲ್ಲಿ ಕೆಲಸದಲ್ಲಿರುವ, ಧಾರವಾಡದ ಹಿನ್ನೆಲೆಯ ಒಬ್ಬ ಪ್ರೌಢವಯಸ್ಕ ಮಗನೊಬ್ಬನ ಮನಸಿನಲ್ಲಿ ಅಚ್ಚಾಗಿ ಉಳಿದ ತಂದೆಯ ಚಿತ್ರವನ್ನು ನಮ್ಮ ಮುಂದೆ ಬಿಡಿಸುವ ಭಾವೋದ್ರೇಕದ ಕಥೆ.
ಈ ಎರಡೂ ಕಥೆಗಳ ಸೂತ್ರಧಾರರು ಗಂಡು ಮಕ್ಕಳೇ ಆದರೂ ಕೂಡ ಒಂದರ ಕೇಂದ್ರಬಿಂದು ತಾಯಿ, ಇನ್ನೊಂದಕ್ಕೆ ತಂದೆ.
ಈ ನಾಟಕದ ಪ್ರದರ್ಶನ ಮತ್ತೆ ನಾಳೆ ಅಂದರೆ ಸೆಪ್ಟೆಂಬರ್ 12 ಗುರುವಾರ ಸಂಜೆ ಕೂಡ ರಂಗಶಂಕರದಲ್ಲಿಯೇ ಇದೆ. ನಿಮ್ಮ ಅಮ್ಮ-ಅಪ್ಪ ಅಥವಾ ನಿಮ್ಮ ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋಗಿ ಒಮ್ಮೆ ನೋಡಲೇಬೇಕಾದ ನಾಟಕ ಇದು. ಅವಕಾಶ ಕಳೆದುಕೊಳ್ಳಬೇಡಿ.
 

‍ಲೇಖಕರು G

12 September, 2013

1 Comment

  1. malini guruprasanna

    Ninne naanoo Rangashankarakke hogidde. nanna gelatiyaru kutummba sameta bandiddaru. Obbalantoo modale heliddalu ” NATAKA CHENNAGILLA ANDRE NINNA KOLE MAADTINI” anta. nanage manege vaapas baruva bagge khandita bharavase ittu. Nanna Shifarassu sullagalilla. nanna jote banda 13 janaroo tuti eradu maadade nataka nodidru. Kole maaduva bedarike oddidda nanna gelati 3-4 baari kannu oresikondiddu natakada vimarsheyaagittu. TUMBA..TUMBA CHENNAGIDE. NIMAGE 60-70RA VAYASSINA TANDE TAAYI IDDARE JOTEYALLE KAREDUKONDU HOGI, AA ADBHUTA ANUBHAVAVANNU ANUBHAVISI. YAARIGE GOTTU, AVU NIMMA MANEYA KATEGALLO AAGIRABAHUDU. INDU SANJE 7.30KKE NEEVELLAROO RANGASHANKARADALLI IRUTTEERENDU AASHISALE.. 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading