ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಒಬ್ಬ ಪ್ರೊಫೆಸರ್ ಆಗುವ ಯೋಗ್ಯತೆ ಈ ಬಾಲಗಂಗಾಧರ್ ಗೆ ಇಲ್ಲ' ಅಂತಾರೆ ಕೆ ವಿ ತಿರುಮಲೇಶ್

ಪ್ರೊ. ಬಾಲಗಂಗಾಧರ ಹೈದರಾಬಾದಿನ ಇ.ಎಫ್.ಎಲ್.ಯು.(ಇಂಗ್ಲಿಷ್ ಮತ್ತು ವಿದೇಶೀ ಭಾಷೆಗಳ ವಿ.ವಿ.)ದಲ್ಲಿ ನವೆಂಬರ್ 2-4, 2015 ರಲ್ಲಿ ನಡೆದ ಅಂತರ್ರಾಷ್ಟ್ರೀಯ ಸಮ್ಮೇಳನದಲ್ಲಿ ಮತ್ತು ಆ ನಂತರ ವೆಬ್ ಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ಡಾ. ಕಲಬುರ್ಗಿ, ಡಾ. ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ, ಕೀಳು ಅಭಿರುಚಿಯ ಟೀಕೆಗಳನ್ನ ಮಾಡಿದ್ದಾರೆ.  ದಲಿತರ, ಮುಸ್ಲಿಮರ, ಕ್ರಿಶ್ಚಿಯನ್ನರ ವಿರುದ್ಧ ದ್ವೇಷಕಾರಿ ಹೇಳಿಕೆಯನ್ನು ಕೊಟ್ಟಿದ್ದಾರೆ ಎಂದು ವರದಿಯಾಗಿದೆ. 

ಜನಶಕ್ತಿ ನಡೆಸಿದ ಉತ್ಸವ ಮತ್ತು ಸಮಾವೇಶದಲ್ಲಿನ ಆಗ್ರಹದ ಪ್ರತಿಯಿಂದ ಹೆಕ್ಕಿ ವಿವರವನ್ನು ನೀಡಲಾಗಿತ್ತು. ಅದು ಇಲ್ಲಿದೆ.

ಆ ಲೇಖನಕ್ಕೆ ಕೆ ವಿ ತಿರುಮಲೇಶ್ ಪ್ರತಿಕ್ರಿಯಿಸಿದ್ದು ಹೀಗೆ 

ಕೆ.ವಿ. ತಿರುಮಲೇಶ್

ಒಬ್ಬ ಪ್ರೊಫೆಸರ್ ಆಗುವ ಯೋಗ್ಯತೆ ಈ ಬಾಲಗಂಗಾಧರ್-ಗೆ ಇಲ್ಲ . ಇವರಿಗೆ ಪ್ರೊಫೆಸರ್ ಹುದ್ದೆ ನೀಡಿದ ವಿಶ್ವವಿದ್ಯಾಲಯಕ್ಕೇ ಇವರು ದೊಡ್ಡ ಅವಮಾನ.

ಘಂಟ್ ವಿಶ್ವವಿದ್ಯಾಲಯಕ್ಕೆ ಬಹುಶಃ ಈ ವ್ಯಕ್ತಿ ಏನು ಮಾಡುತ್ತಿದ್ದಾರೆ ಎನ್ನುವುದು ಅರಿವಿಲ್ಲ! ಅದು ಹೇಗೋ ಭಾರತದ ಹೆಸರು ಹೇಳಿ ಅಲ್ಲಿ ನುಸುಳಿಕೊಂಡಿದ್ದಾರೆ. ಇವರಿಂದ ಭಾರತಕ್ಕೂ ಕಳಂಕವೆಂದು ಬೇರೆ ಹೇಳಬೇಕಿಲ್ಲ.

ಬಾಲಗಂಗಾಧರ್ ಅವರೇ, ಒಬ್ಬ ಪ್ರೊಫೆಸರ್ ಹೀಗೆ ಕೆಟ್ಟ ಭಾಷೆಯಲ್ಲಿ ಮಾತಾಡುತ್ತಾರೇನ್ರಿ? ಇತರರನ್ನು ಹಳಿಯುವವರು ತಮ್ಮನ್ನು ತಾವೇ ಬಿಟ್ಟುಕೊಟ್ಟಂತೆ. ಮೊದಲು ತಿದ್ದಿಕೊಳ್ಳಿ. ವಿರೋಧ ಸ್ವಾಗತಾರ್ಹ, ಆದರೆ ನಿಂದನೆಯಲ್ಲ.

ಘೆಂಟ್-ನಲ್ಲಿ ನೀವು ಇಷ್ಟನ್ನಾದರೂ ಕಲಿತುಕೊಳ್ಳಬೇಕಿತ್ತು. ಕಲಿತುಕೊಳ್ಳದೆ ಇರುವುದು ನಿಮ್ಮ ದುರ್ದೈವ.snbalagangadhara_rao_112715064649

‍ಲೇಖಕರು admin

16 December, 2015

4 Comments

  1. Suresha

    ಬಾಲಗಂಗಾಧರ ಒಂದು ಶಬ್ಧದಲ್ಲಿ ಹೇಳಿದ್ದನ್ನು ತಿರುಮಲೇಶರು ಹತ್ತು- ಹನ್ನೆರಡು ವಾಕ್ಯಗಳಲ್ಲಿ ಹೇಳಿದ್ದಾರೆ!

  2. prathibha nandakumar

    ಬಾಲ ಹೇಳಿದ್ದಕ್ಕೂ ತಿರುಮಲೇಶ್ ಹೇಳಿದ್ದಕ್ಕೂ ವ್ಯತ್ಯಾಸ ಗೊತ್ತಿಲ್ಲದ ನೀವು ಬಾಲವೇ ಇರಬೇಕು…

  3. Gn Nagaraj

    ತಿರುಮಲೇಶರು ಸ್ವತಃ ಪ್ರಾಧ್ಯಾಪಕರಾಗಿದ್ದದರಿಂದ ಅದರ ಘನತೆಯನ್ನು ಎತ್ತಿಹಿಡಿದು ಮತ್ತು ಅದರ ಮೌಲ್ಯದ ಅವಹೇಳನವನ್ನು ಕಂಡು ಉದ್ವಿಗ್ನರಾಗಿ ಹೇಳಿದ ಮಾತು ಸರಿಯಾದದ್ದೇ. ಅಧ್ಯಯನ ಮತ್ತು ಸಂಶೋಧನೆಯ ಮಾರ್ಗಗಳನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಮೂಗಿನ ನೇರದ ತೀರ್ಮಾನಗಳನ್ನು ಹೊರಡಿಸುತ್ತಿದ್ದ , ಇದೇ ನಿಜವಾದ ಸಂಶೋಧನೆ ಎಂಬ ಭ್ರಮೆ ಮೂಡಿಸಿ ಕೆಲ ವಿದ್ವಾಂಸರುಗಳನ್ನು ತಪ್ಪು ದಾರಿಗೆಳೆದಿದ್ದ ಈ ಮನುಷ್ಯ ಹೈದರಾಬಾದ್ ನಲ್ಲಿ ತನ್ನ ಮಾತು ಮತ್ತು ಅದನ್ನು ಸಮರ್ಥಿಸಿದ ಲೇಖನಗಳಿಂದ ಪೂರ್ಣವಾಗಿ ನಗ್ನವಾಗಿದ್ದಾನೆ. ತನ್ನ ಚಿಂತನೆಗಳ ನಿಜ ಕುರೂಪವನ್ನು ಬಿಚ್ಚಿಟ್ಟಿದ್ದಾನೆ. ಅಂಬೇಡ್ಕರ್ರವರ ವಿಚಾರಗಳ ಬಗ್ಗೆ ಈತನಿಗೆ ಏನು ವಿರೋಧವಿದ್ದರೂ ಅದನ್ನು ತನ್ನ ಅಧ್ಯಯನಗಳಿಂದ ಸಾಧಾರವಾಗಿ ಮಂಡಿಸುವುದು ಯಾರಾದರೂ ಒಬ್ಬ ವಿದ್ವಾಂಸನಿಂದ ( ಪ್ರಾಧ್ಯಾಪಕನಿಂದಲೂ ) ನಿರೀಕ್ಷಿಸುವ ಸಂಗತಿ. ಆದರೆ ಈ ಮನುಷ್ಯ ಆಡಿರುವ ಮಾತುಗಳು ಬೀದಿ ಜಗಳದ ಹಲ್ಕಾ ಭಾಷೆ. ಇದೇ ಮಾತನ್ನು ಆತನೇ ತನ್ನ ಸಮರ್ಥನೆಯಲ್ಲಿ ಹೇಳಿದ್ದಾನೆ. ಜೊತೆಗೆ ಕಲುಬುರ್ಗಿಯವರು ವಿಗ್ರಹ ಪೂಜೆಗಳ ಬಗ್ಗೆ ವಿವಿಧ ಸಂದರ್ಭದಲ್ಲಿ ಆಡಿರುವ ಮಾತುಗಳು ಅಸಹನೆಯಂತೆ. ಹಾಗಾದರೆ ಭಾರತದ ವಚನ ಚಳುವಳಿ, ಸಿಖ್ ಧರ್ಮ, ಭಕ್ತಿ ಪಂಥ ಿವೆಲ್ಲವೂ ಅಸಹನೆಯಿಂದ ತುಂಬಿ ತುಳುಕುತ್ತಿವೆ ಎಂದಾಯಿತು. ವೈದಿಕ,ಪೌರಾಣಿಕ ಕಂದಾಚಾರ ಮಾತ್ರ ಸಹನಾಭರಿತ ಅವುಗಳನ್ನು ವಿರೋಧಿಸುವವರೆಲ್ಲ ಅಸಹನೆಯುಳ್ಳವರು ಎಂದಾಯಿತು. ಅದಕ್ಕಿಂತಲೂ ಘೋರವೆಂದರೆ ಆದ್ದರಿಂದ ಕಲುಬುರ್ಗಿಯವರನ್ನು ಕೊಲ್ಲುವುದು ಸಮರ್ಥನೀಯ. ಅವನ ಮಾತು ನೋಡಿ ‘ಇಂತಹ ಅಸಹನೆಯುಳ್ಳವರನ್ನು ಕೊಲ್ಲದೆ ಸಹನೆಯುಳ್ಳವರನ್ನು ಕೊಲ್ಲಬೇಕೆ ? ‘ ಎನ್ನುತ್ತಾನೆ. ಹಾಗಾದರೆ ಬಸವಣ್ಣ ಮೊದಲಾದ ಶರಣರು ಮತ್ತಿತರರು, ಅಂಬೇಡ್ಕರ್ ರವರು ಎಲ್ಲರೂ ಇವನ ಪ್ರಕಾರ ಕೊಲೆಗೆ ಅರ್ಹರು.
    ಇನ್ನು ಮೀಸಲಾತಿಯ ಬಗ್ಗೆ ಅದರ ಪ್ರಯೋಜನ ಪಡೆದವರ ಬಗ್ಗೆ ಇವನು ಆಡಿದ ಮಾತುಗಳು ಸಾವಿರಾರು ವರ್ಷಗಳಿಂದ ಪುರೋಹಿತಶಾಹಿ ಉಗುಳುತ್ತಿರುವ ಅಸಹ್ಯವಲ್ಲದೆ ಮತ್ತೇನು ?
    ಆ ಮೂಲಕ ಈತನ ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ ಅದು ಕೇವಲ ಬ್ರಿಟಿಷರ ಸೃಷ್ಠಿ ಎಂಬ ಸಂಶೋಧನೆ ಮತ್ತು ಅದರ ವಿವಿಧ ಸಮರ್ಥನೆ, ಅದೇ ದಾರಿಯಲ್ಲಿ ಅವನ ಶಿಷ್ಯರ ವಚನ ಚಳುವಳಿ ಜಾತಿ ವ್ಯವಸ್ಥೆಯ ವಿರೋಧವಲ್ಲ ೆಂಬಂತಹ ತೀರ್ಮಾನಗಳು ಇವೆಲ್ಲ ಮೀಸಲಾತಿಯಿಂದ ಉಂಟಾದ ಹೊಟ್ಟಿಯುರಿಗೆ ಸಂಶೋಧನೆ ಎಂಬ ರೂಪಕೊಟ್ಟು ಹೊರಹಾಕಿದ್ದಷ್ಟೆ ಎಂಬುದನ್ನು ಬಹಿರಂಗಪಡಿಸಿದ್ದಾನೆ. ತನ್ನೆಲ್ಲ ಸಂಶೋಧನೆಯ ಕುರೂಪವನ್ನು ಬಿಚ್ಚಿಟ್ಟಿದ್ದಾನೆ.
    ಈ ಮನುಷ್ಯನ ಮಾತಂತಿರಲಿ ಕರ್ನಾಟಕದಲ್ಲಿರುವ ಈತನ ಜೊತೆಗಾರರು, ಶಿಷ್ಯರು ಈ ಮನುಷ್ಯನ ಮಾತುಗಳಿಗೆ ದನಿಗೂಡಿಸುವವರೇ? ಒಪ್ಪುವವರೇ? ಅಥವಾ ಭಿನ್ನಾಭಿಪ್ರಾಯವಿದೆಯೇ ? ಯಾವ ವಿಷಯಕ್ಕೆ, ಎಂಬುದನ್ನು ಸ್ಪಷ್ಟಪಡಿಸಬೇಕಾದ ಹೊಣೆ ಅವರ ಮೇಲಿದೆ.

  4. b m basheer

    ಬಾಲ ಗಂಗಾಧರ್ ಹೇಳಿರೋದು ಕೇಳಿದ ಮೇಲೆ ನನಗೆ ಅನ್ನಿಸಿದ್ದು, ಈತ ಮನುಷ್ಯ ಎಂದು ಕರೆಸಿ ಕೊಳ್ಳೋದಕ್ಕೂ ಯೋಗ್ಯನಲ್ಲ
    ಬಿ. ಎಂ. ಬಶೀರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading