ಹಿರಿಯ ಗಮನಾರ್ಹ ಕವಿ ಆರ್ ವಿಜಯರಾಘವನ್ ಅವರ ಹೊಸ ಕವಿತಾ ಸಂಕಲನ ಬಂದಿದೆ. ‘ಹಳದಿ ಚಿಟ್ಟೆ’ ಎಂಬ ಹೆಸರು ಹೊತ್ತು ಬಂದಿರುವ ಈ ಕೃತಿ ನಿಮ್ಮ ಕಪಾಟಿನಲ್ಲಿರಲಿ
ಇದರೊಂದಿಗೆ ‘ಅವಧಿ’ ಇಂದಿನಿಂದ ‘ಡೈಲಿ ಬುಕ್’ ಎನ್ನುವ ಸರಣಿ ಆರಂಭಿಸುತ್ತಿದೆ.
ಪ್ರತಿ ದಿನವೂ ಒಂದು ಹೊಸ ಕೃತಿ ನಿಮ್ಮ ಮುಂದೆ ಬರಲಿದೆ. ಅವಧಿಯಲ್ಲಿ ಪ್ರಕಟಣೆಗಾಗಿ ಕೃತಿಗಳನ್ನು ನೀವೂ ಕಳಿಸಬಹುದು. ವಿಳಾಸ ಈ ರೀತಿ ಇದೆ
ಅವಧಿ
೧೪೨, ೬೯ನೆ ಕ್ರಾಸ್, ೫ನೆ ಬ್ಲಾಕ್, ರಾಜಾಜಿನಗರ, ಬೆಂಗಳೂರು -೫೬೦೦೧೦
ಹಳದಿ ಚಿಟ್ಟೆ ತನ್ನಷ್ಟಕ್ಕೆ ತುಂಬ ವಿಶಿಷ್ಟವಾದ ಕೃತಿ. ಇಲ್ಲಿನ ಕವಿತೆಗಳನ್ನು ಯಾವ ಸ್ವೀಕೃತ ನಂಬಿಕೆಯ ಪ್ರಕಾರದಲ್ಲಿ ಇರಿಸಿ ನೋಡುವುದು ಸರಿಯಾಗಲಾರದು. ಈ ಕಾವ್ಯದ ಹರವು ವಿಸ್ತಾರವಾದದ್ದು. ಮೆಟಫಿಸಿಕಲ್ ಆದ ಕುತೂಹಲಗಳನ್ನು ಒಡಲಲ್ಲಿ ಇರಿಸಿಕೊಂಡಿರುವಂತೆಯೇ ಅನುದಿನದ ಬದುಕಿನ ಸಂಭ್ರಮ ಯಾತನೆಗಳನ್ನು, ಅದು ಎತ್ತುವ ಹಲವು ಬಗೆ ಸಮಾಜಮುಖಿ ಪ್ರಶ್ನೆಗಳನ್ನು ಇಲ್ಲಿನ ಕಾವ್ಯ ಕೇಳಿಕೊಂಡಿದೆ.
ನವ್ಯದ ಹೊರಮೈ ಹೊದ್ದರೂ ಅಲ್ಲಿನ ಸಂಕೋಚ ಮೀರಿ ಅನಂತದ ಗ್ರಹಿಕೆಯ ಆಶಯವನ್ನು ಗುರಿಯಾಗಿ ಇರಿಸಿಕೊಂಡಿದೆ. ಮುಖ್ಯಧಾರೆಗಳಾಗಿ ನಾವಿಲ್ಲಿ ನವವಸಾಹತುಶಾಹಿಯ ಹಿಂಸೆಯ ಕುರಿತ ಎಚ್ಚರವನ್ನು, ತಾವೋ, ಸೂಫಿ, ಬೌದ್ಧವೂ ಕೂಡಿದ ಪೌರಾತ್ಯ ವಿವೇಕದ ಪ್ರೀತಿಯನ್ನು, ಸಕಲ ಜೀವಪರ ನಿಲುವನ್ನು, ಇವೆಲ್ಲ ಬೆರೆತ ಒಂದು ವಿಶಿಷ್ಟ ನವಧಾರ್ಮಿಕತೆಯನ್ನು ಸೋಗಿಲ್ಲದ ಪ್ರಾಮಾಣಿಕ ಅಭಿವ್ಯಕ್ತಿಯಾಗಿ ಕಾಣಬಹುದು. ಹಾಗಾಗಿ ಹುಡುಕಾಟದ ಬೇರು ಅಂತಹ ಕೃತಿಗಳು ತಲ್ಲಣ ತುಂಬಿದ ಜಗತ್ತಿನ ಪ್ರತಿದಿನದ ಇವತ್ತಿಗೆ ತುಂಬ ಅಗತ್ಯವೂ ಆಗಿವೆ.







0 Comments