ಕುವೆಂಪು
ಸಂ: ಕೆ.ಸಿ.ಶಿವಾರೆಡ್ಡಿ
ಪ್ರ: ವಿಹಾ ಪ್ರಕಾಶನ, “ತಪೋನಂದನ” ಕುಪ್ಪಳ್ಳಿ, ಹಿರೇಕೂಡಿಗೆ ಪೋಸ್ಟ್ 577126, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ, ಬೆಲೆ: 50 ರೂ.
*

ಕುವೆಂಪು ಮನೆ, ಆ ಪರಿಸರದ ಫೋಟೋಗಳು, ಅಪರೂಪದ ಕುವೆಂಪು ಫೋಟೋಗಳು ಕಾಗೂ ಕವಿಮನೆ, ಕವಿಶೈಲಗಳ ವರ್ಣನೆಯೊಂದಿಗೆ ಈ “ಕರತಲ” ಪುಸ್ತಕ ಶುರುವಾಗುತ್ತದೆ. ಕುವೆಂಪು ಕುಳಿತು ಪದ್ಯ ಬರೆದ ಸ್ಥಳಗಳು ಕುವೆಂಪು ಹುಟ್ಟಿದ ಹಿರೇಕೂಡಿಗೆ, ನವಿಲು ಕಲ್ಲು, ನವಿಲು ಕಲ್ಲಿನ ಸೂರ್ಯೋದಯದ ಫೋಟೋದ ಪಕ್ಕದಲ್ಲೇ ಕುವೆಂಪು ಬರೆದ “ನವಿಲು ಕಲ್ಲಿನಲ್ಲಿ ಸೂರ್ಯೋದಯ” ಪದ್ಯ, ಸಿಬ್ಬಲು ಗುಡ್ಡ ಅದೆಲ್ಲದರ ನಡುವೆ ಕುವೆಂಪು ಹಾಗೂ ಅವರ ಪರಿಸರ ಕುರಿತ ಪರಿಚಯಾತ್ಮಕ ಬರಹಗಳು ಈ ಪುಸ್ತಕದ ಮೊದಲ ೩೨ ವರ್ಣಪುಟಗಳಲ್ಲಿವೆ.
ಅಲ್ಲಿಂದಾಚೆಗೆ, ಕಿ.ರಂ.ನಾಗರಾಜರ ಸಲಹೆಗಳನ್ನು ಪಡೆದು, ಅದರ ಜೊತೆಗೆ ತಾವೇ ಸಂಪಾದಿಸಿರುವ ಸಾವಿರಾರು ಪುಟಗಳ ಕುವೆಂಪು ಸಾಹಿತ್ಯದಿಂದ ಶಿವಾರೆಡ್ಡಿ ಹೆಕ್ಕಿತೆಗೆದ ಸಾಲುಗಳು, ಪದ್ಯಗಳು, ವಿಮರ್ಶೆ, ವಿಚಾರಗಳ ಸುಮಾರು ೨೦೦ಕ್ಕೂ ಹೆಚ್ಚು ಕುವೆಂಪು ನುಡಿಗಳು ಇಲ್ಲಿವೆ. ಪುಸ್ತಕದ ಕೊನೆಯ ಭಾಗದಲ್ಲಿ ವಿಶ್ವಮಾನವ ಸಂದೇಶ, ಮಂತ್ರ ಮಾಂಗಲ್ಯ, ಕುವೆಂಪು ವಂಶವೃಕ್ಷ, ಕುವೆಂಪು ಜೀವನದ ಮುಖ್ಯ ವರ್ಷಗಳು, ಕುವೆಂಪು ಅವರ ಎಲ್ಲ ಕೃತಿಗಳ ವಿವರಗಳಿವೆ. ಕೊನೆಗೆ ನಾಡಗೀತೆ. ಎಲ್ಲ ಕನ್ನಡಿಗರ ಕೈ ಹಿಡಿಯಲೇ ಬೇಕಾದ ಈ ೧೧೨ ಪುಟದ ಪುಸ್ತಕದ ಬೆಲೆ ರೂ.೫೦ ಮಾತ್ರ.
ನೀವು ೬೦ ರೂ. ಎಂ.ಒ ಅಥವಾ ಡಿ.ಡಿಯನ್ನು ವಿಹಾ ಪುಸ್ತಕ, ತಪೋನಂದನ, ಕುಪ್ಪಳ್ಳಿ, ತೀರ್ಥಹಳ್ಳಿ ತಾಲೂಕು, ಹಿರೇಕೂಡಿಗೆ ಪೋಸ್ಟ್-೫೭೭೧೨೬, ಶಿವಮೊಗ್ಗ ಇಲ್ಲಿಗೆ ಕಳಿಸಿದರೆ ಸಾಕು, ಕೊರಿಯರ್ ಮೂಲಕ ನಿಮ್ಮ ಮನೆಗೆ ಈ ಪುಸ್ತಕ ತಲುಪಲಿದೆ.





0 Comments