ಪ್ರೊ. ಚಿ ಶ್ರೀನಿವಾಸರಾಜು. ಯಾವತ್ತೂ ಸುಮ್ಮನೆ ಕೂತವರಾಗಿರಲಿಲ್ಲ ಮೇಷ್ಟ್ರು. ಬೆಂಗಳೂರು ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘವನ್ನು ಎಷ್ಟು ಎತ್ತರಕ್ಕೆ ಬೆಳೆಸಿದರೆಂದರೆ, ಅದರ ಮೂಲಕ ಪ್ರತಿಭಾವಂತ ಬರಹಗಾರರ ತಲೆಮಾರುಗಳನ್ನೇ ಕಟ್ಟುವುದು ಅವರಿಗೆ ಸಾಧ್ಯವಾಗಿತ್ತು. ಕ್ರೈಸ್ಟ್ ಕಾಲೇಜಿನಿಂದ ನಿವೃತ್ತರಾದರೂ ಕಿರಿಯ ಪೀಳಿಗೆಯ ಲೇಖಕರ ಬಗೆಗಿನ ಅವರ ಕಾಳಜಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಸದಾ ಚಟುವಟಿಕೆಯಿಂದಿರುತ್ತಿದ್ದ ಮೇಷ್ಟ್ರು ನಿನ್ನೆ ಕೂಡ ತೀರ್ಥಹಳ್ಳಿಗೆ ಹೊರಟಿದ್ದರು, ಇಂದು ಕುಪ್ಪಳ್ಳಿಯಲ್ಲಿ ನಡೆಯಬೇಕಿದ್ದ ಸಾಹಿತ್ಯಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವುದಕ್ಕಾಗಿ. ಆದರೆ ತೀರ್ಥಹಳ್ಳಿಯಲ್ಲಿ ಹೃದಯಾಘಾತಕ್ಕೊಳಗಾಗಿ ಅವರು ಕೊನೆಯುಸಿರೆಳೆದಿದ್ದಾರೆ. ಸಾಂಸ್ಕೃತಿಕ ಲೋಕದಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡಿದ್ದ ದೊಡ್ಡ ಚೇತನವೊಂದು ಹೀಗೆ ಇಲ್ಲವಾಗಿದೆ. ಮೇಷ್ಟ್ರು ನಿಜವಾಗಿಯೂ ಈಗ ನಿವೃತ್ತರಾಗಿದ್ದಾರೆ ಎಂದು ಹೇಳುವಾಗ ಸಂಕಟವಾಗುತ್ತಿದೆ. ಅವರಿಂದ ಋಣ ಪಡೆದ ಪೀಳಿಗೆ ಕಣ್ಣೀರಾಗಿದೆ.
ಮನೆಯ ಹಿರಿಯನೊಬ್ಬ ಇಲ್ಲವಾದರೆಂಬ ದುಃಖ ಕಾಡುತ್ತಿದೆ -ಆನಂದ್ ಋಗ್ವೇದಿ
ಮಾತೇ ಬರುತ್ತಿಲ್ಲ -ಕಿರಣ್ ಕುಮಾರ್
ಕೈಹಿಡಿದು ನಡೆಸುತ್ತಿದ್ದವರು ಇಲ್ಲವಾಗಿದ್ದಾರೆ -ವೆಂಕಟ್ರಮಣ ಗೌಡ





ಹೋದರೆಲ್ಲಾ ಹಿರಿಯರು…. ಒಳ್ಳೆಯವರು… ಎಂಬುದೊಂದೇ ಈಗ ಉಳಿದಿರುವ ಮಾತು!! ಮೇಷ್ಟ್ರು ಜೊತೆಗೆ ಮೊನ್ನೆ ತಾನೇ ಸಾಹಿತ್ಯ ಸಮ್ಮೇಳನದಲ್ಲಿ ‘ನಿಜವಾದ ಕವಿಗೋಷ್ಠಿ’ ನಡೆಸಿದ್ದೆವು. ಅವತ್ತು ತುಂಬಾ ಹೊತ್ತು ಮಾತನಾಡಿದ್ದರು. ಮತ್ತೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುವ ಆಸೆ ಈಗ ಹಾಗೇ ಉಳಿದಿದೆ………
-ಶಶಿ ಸಂಪಳ್ಳಿ
a meaningful tribute to our beloved raju sir .thanks