ಒಂದು ಕಾಕತಾಳೀಯ….
ಹರ್ಷ ಕುಗ್ವೆ
ಡೋರ್ ನಂ 142ರ ಬಗ್ಗೆ ಬರೆದ ಈ ಬರೆಹವು ಸಂಡೆ ಇಂಡಿಯನ್ ಪತ್ರಿಕೆಯ ಈ ಹೊತ್ತಗೆ ಕಾಲಂನಲ್ಲಿ ಪ್ರಕಟ ಆದ ಮೇಲೆ ಒಂದು ತಮಾಷೆ ನಡೆಯಿತು. ಆಮೇಲೆ ನನಗೆ ತಿಳಿದಿದ್ದೇನೆಂದರೆ ಈಗ 15 ವರ್ಷಗಳ ಹಿಂದೆ ನಾನೂ ಕೂಡಾ ಇದೇ ಡೋರ್. ನಂಬರ್ ೧೪೨ರ ಸದಸ್ಯನಾಗಿದ್ದೆ!! ಈ ಕೃತಿಯ ಅಮ್ಮನೊಂದಿಗೆ ಐದಾರು ತಿಂಗಳು ಕಳೆದಿದ್ದೆ!. ನಾನು ಇದನ್ನು ಓದಿ ಬರೆಯುವವರೆಗೂ ಈ ವಿಷಯ ಹೊಳೆದೇ ಇರಲಿಲ್ಲ. ಯಾವಾಗ ಈ ಪತ್ರಿಕೆಯನ್ನು ಕಳುಹಿಸಲು ಮೋಹನ್ ಸರ್ ಅಡ್ರೆಸ್ ಕಳುಹಿಸಿದರೋ ಆಗಲೇ ನನಗೆ ಫ್ಲಾಷ್ ಆದದ್ದು. ಅರೆ ಈ ಅಡ್ರೆಸ್ ನಂಗೆ ತುಂಬಾ ಫೆಮಿಲಿಯರ್ ಇದೆಯಲ್ಲಾ ಅಂತ…
ನಾನು ಏಳನೇ ತರಗತಿ ಇದ್ದಾಗ ಜಿ.ಎನ್.ಮೋಹನ್ರ ಅಣ್ಣ ಎಸ್.ಎಲ್.ಎನ್ ಸ್ವಾಮಿ ಹಾಗೂ ಅವರ ಪತ್ನಿ ನೊಮಿಟೋ ಮೇಡಂ ನಮ್ಮ ಮನೆಗೆ ಆಗಾಗ ಬರ್ತಾ ಇದ್ರು. ಆಗ ಬೇಸಿಗೆ ರಜೆ ಬಂದಿತ್ತು. ಸರಿ ಬೆಂಗಳೂರು ನೋಡುವಂತೆ ಬಾ ಎಂದು ನನ್ನನ್ನು ಅವರ ವ್ಯಾನ್ನಲ್ಲಿ ಎತ್ತಿ ಹಾಕ್ಕೊಂಡು ಹೋದರು. ಅಲ್ಲಿಂದ ಮಂಗಳೂರಿನಲ್ಲಿದ್ದ ಮೋಹನ್ ಸರ್ ಅವರ ಮನಗೆ, ನಂತರ ಬೆಂಗಳೂರಿನ ಈ ಡೋರ್ ನಂಬರ್ ೧೪೨ರಲ್ಲಿ ನನ್ನನ್ನು ಬಿಟ್ಟರು. ನಾನು ಒಂದು ಮನೆಯಲ್ಲಿ ರಾಶಿ ರಾಶಿ ಪುಸ್ತಕಗಳ ಸಂಗ್ರಹ ನೋಡಿದ್ದು ಅಂದು ಮೋಹನ್ ಸರ್ ಮನೆಯಲ್ಲೇ . ಮರುದಿನ ಬಂಗಳೂರಿಗೆ ಕರೆದುಕೊಂಡು ಹೋದರು. ಅದು ನನ್ನ ಮೊತ್ತ ಮೊದಲ ಬೆಂಗಳೂರು ಭೇಟಿ. ಕುಗ್ವೆಯಿಂದ ಸೀದಾ ಬೆಂಗಳೂರಿಗೆ ಬಂದು ಬಿದ್ದಿದ್ದೆ.
ಮರುದಿನವೇ ಒಂದು ಸೈಕಲ್ನ್ನೂ ಕೊಟ್ಟು “ನಡಿ ಬೆಂಗಳುರು ತಿರುಗು” ಎಂದಿದ್ರು. ನಾನು ಸೈಕಲ್ ಹೊಡೆಯೋಕೆ ಬರುತ್ತಿತ್ತಾದರೂ ಬೆಂಗಳೂರಿನ ರಸ್ತೆಯಲ್ಲಾ…. ಅಬ್ಬಬ್ಬಾ.. ಭಾರೀ ಹೆದರಿಕೆ ಆಗಿತ್ತು. ಆದರೆ ಕೊನೆಗೆ ನೋಡೇ ಬಿಡಾನ ಒಂದು ಕೈ ಅಂತ ಹೇಳಿ ಸೈಕಲ್ ಹತ್ತಿದ್ದೆ. ನಿಜ ಎಂದರೆ ನಾನು ಈ ಮನೆಯಿಂದ ರಾಜಾಜಿ ನಗರ ಮುಖ್ಯ ಅಂಚೆ ಕಛೇರಿಯ ನಡುವಿನ ರಸ್ತೆಯಲ್ಲಿ ಯಾವಾಗ ಸೈಕಲ್ ಹೊಡೆಯೋಕೆ ಶುರು ಮಾಡಿದ್ನೋ ಆಮೇಲೇನೆ ಸೈಕಲ್ ಹೊಡೆಯೋದರಲ್ಲಿ ಪಕ್ಕಾ ಆದದ್ದು. ನಂತರದಲ್ಲಿ ಜೀವನ ನನಗೆ ಬಹಳಾನೇ ‘ಸೈಕಲ್’ ಹೊಡೆಸಿದೆಯಾದರೂ ಇಲ್ಲಿ ಸೈಕಲ್ ಹೊಡೆದ ಗಳಿಗೆ ಮರೆಯುವಮತಿಲ್ಲ. ಬೆಂಗಳೂರಿನ ಆ ಮೊದಲ ಭೇಟಿ, ಹಾಗೂ ಡೋರ್ ನಂಬರ್ 142 ರ ಅನುಭವಗಳು ಮರೆಯಲಾಗದ್ದು.
ಆಮೇಲೆ ಒಂದು ವರ್ಷದ ನಂತರ ಸ್ವಾಮಿ, ನೊಮಿಟೋ, ಲೀಸಾ ಗಾರ್ಫಿಂಕಲ್, ವೆಂಕಿ ಮುಂತಾದವರು ಸೇರಿ ಹುಟ್ಟು ಹಾಕಿದ್ದ ಅಡ್ವೆಂಚರರ್ಸ್ ಸಂಸ್ಥೆ ಹೊನ್ನೆಮರಡುವಿನಲ್ಲಿ ತನ್ನ ಜಲ ಸಾಹಸ ಚಟುವಟಿಕೆಗಳನ್ನು ಜೋರಾಗಿ ನಡೆಸುತ್ತಿದ್ದ ಸಂದರ್ಭದಲ್ಲಿ ಅವರೆಲ್ಲರೊಂದಿಗೆ ನಿಕಟ ಸಂಪರ್ಕ ಇತ್ತು. ನನ್ನಪ್ಪ ಕೂಡಾ ಅದರ ಭಾಗವಾಗಿ ಸಕ್ರಿಯವಾಗಿದ್ದರು. ಅಲ್ಲಿ ಶುರುವಾಗಿದ್ದ ’ನೇಚರ್ ಸ್ಕೂಲ್’ ಎಂಬು ’ಶಾಂತಿನಿಕೇತನ’ ಶಾಲೆಯ ಮೊದಲ ಹಾಗೂ ಕೊನೆಯ ತಂಡದಲ್ಲಿ ನಾನೂ ಇದ್ದೆ. ಅಗ ಬೆಂಗಳೂರಿನ ಡೋರ್ ನಂಬರ್ 142 ರಲ್ಲಿ ನಾಲ್ಕು ತಿಂಗಳು ಇದ್ದೆ.
ಆದರೆ ಆ ಹೊತ್ತಿಗೆ ಮೋಹನ್ ಸರ್ ಬೇರಡ ಕಡೆ ಇದ್ದಿದ್ದರಿಂದ ಅಲ್ಲಿ ನಮಗೆ ಎಂದೂ ಅವರ ದರ್ಶನ ಆಗಿರಲಿಲ್ಲ.
ಹೀಗೆ ನಾನು ಆ ಮನೆಯಲ್ಲಿ ಇದ್ದಿದ್ದು, ಅದರ ಬಗ್ಗೆ ಮೋಹನ್ ಸರ್ ಬರೆದದ್ದು, ಅದರ ಬಗ್ಗೆ ನಾನು ನನಗರಿವಿಲ್ಲದೇ ವಿಮರ್ಷೆ ಬರೆದಿದ್ದು…….
ಎಂತಹಾ ತಮಾಷೆಯ ಕೊ ಇನ್ಸಿಡೆನ್ಸ್ ಅಲ್ವಾ…..????







ಈ ಪುಸ್ತಕ ನಾನು ಓದಿದ ನಂತರ ಖಂಡಿತ ಇಲ್ಲೇ ಇನ್ನೊಮ್ಮೆ ಕಮೆಂಟ್ ಹಾಕುತ್ತೇನೆ.