ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಪತ್ರಿಕೆಯ ಶಕ್ತಿಯನ್ನು ನೆನೆಯುತ್ತ…

lankeshcolour.jpgನಿರ್ಭೀತಿ, ನಿಷ್ಠುರತೆ ಮತ್ತು ಅದರ ಬಲದಿಂದಲೇ ಒಳ್ಳೆಯದನ್ನು ಗುರುತಿಸುವ ಆತ್ಮಸಾಕ್ಷಿ. ಇವತ್ತು ಇವೆಲ್ಲ ಇಲ್ಲವೇ ಇಲ್ಲ ಎಂಬಂತಾಗಿರುವ ಹೊತ್ತಲ್ಲಿ ಲಂಕೇಶ್ ಪತ್ರಿಕೆ ನೆನಪಾಗುತ್ತಿದೆ. ಇವಿಷ್ಟರಿಂದಲೇ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ವಿಶಿಷ್ಟ ಸಾಧ್ಯತೆಯನ್ನು ಅದು ತೆರೆದಿತ್ತು. ಜೀವಂತಿಕೆಗೆ ಬೇಕಾದ ವಾತಾವರಣವನ್ನು ಕಟ್ಟಿತ್ತು. ಅದಕ್ಕಾಗಿ ಲಂಕೇಶ್ ಪತ್ರಿಕೆಗೆ, ಲಂಕೇಶರಿಗೆ ಇವತ್ತಿಗೂ ಸಲ್ಲುತ್ತಿರುವ ಕೃತಜ್ಞತೆ ಅಮೂಲ್ಯವಾದುದು. ಆ ಕೃತಜ್ಞತೆಯ ಒಳ ತಂತುಗಳಿಗೆ ಮೆತ್ತಿಕೊಂಡಿರುವ ವಿನೀತ ಭಾವದ ಕಂಪನ ಮತ್ತು ತೇವವೇ ಹೇಳುತ್ತದೆ, ಲಂಕೇಶ್ ಪತ್ರಿಕೆ ಮಾಡಿದ ಕೆಲಸ ಎಷ್ಟು ದೊಡ್ಡದು ಎಂಬುದನ್ನು.

ಲಂಕೇಶ್ ಪತ್ರಿಕೆಯಲ್ಲಿ ಬರವಣಿಗೆ ಆರಂಭಿಸಿ, ಇವತ್ತು ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಪ್ರಮುಖರೆನ್ನಿಸಿಕೊಂಡಿರುವ ಇಬ್ಬರು ಲೇಖಕಿಯರು ಲಂಕೇಶರನ್ನು, ಲಂಕೇಶ್ ಪತ್ರಿಕೆಯನ್ನು ನೆನಪಿಸಿಕೊಳ್ಳುತ್ತ, ತಾವು ಅಕ್ಷರದ ದಾರಿ ನಡೆಯಲು ಸಾಧ್ಯವಾದ ಕಥೆ ಹೇಳುತ್ತಿದ್ದಾರೆ. ಒಬ್ಬರು ವೈದೇಹಿ, ಮತ್ತೊಬ್ಬರು ಸಾರಾ ಅಬೂಬಕ್ಕರ್.

ಅವರ ನೆನಪುಗಳಿಂದ ಚಿಕ್ಕ ಭಾಗವನ್ನು ಇಲ್ಲಿ ಹೆಕ್ಕಿ ಇಟ್ಟಿದ್ದೇವೆ.

‍ಲೇಖಕರು avadhi

14 August, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading