ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ…

ಬುದ್ಧಭೂಮಿ ಬಳಗ ಮತ್ತು ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ

ಸಹಯೋಗದೊಂದಿಗೆ

ಕನ್ನಡ ಸಂಸ್ಕೃತಿ: ಪರಂಪರೆ ಮತ್ತು ಆಧುನಿಕತೆಯ ಅನುಸಂಧಾನ ಕುರಿತು

ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಆಹ್ವಾನ

ಪ್ರೊ.ರಾಜಪ್ಪ ದಳವಾಯಿಯವರ ಪರಿಕಲ್ಪನೆಯಲ್ಲಿ ಕನ್ನಡದ ಪ್ರಜ್ಞಾವಂತ ಯುವ ಸಮೂಹದ ನಿರ್ದೇಶನದ ಮೇರೆಗೆ ಇದೇ ಅಕ್ಟೋಬರ್ 23ರಂದು ಮೈಸೂರಿನ ಬುದ್ಧಭೂಮಿ ಬಳಗ ಮತ್ತು ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಈ ವಿಚಾರ ಸಂಕಿರಣದಲ್ಲಿ ನಾಡಿನ ಸಂಸ್ಕೃತಿ ಚಿಂತಕರು, ಸಾಹಿತಿಗಳು ಭಾಗವಹಿಸಲಿದ್ದಾರೆ.

ವಿಚಾರ ಸಂಕಿರಣದಲ್ಲಿ ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಅಧ್ಯಯನಶೀಲ ಪ್ರಬಂಧಗಳನ್ನು ಮಂಡಿಸಲು ಸ್ನಾತಕ ವಿದ್ಯಾರ್ಥಿಗಳು, ಪದವೀಧರರು, ಅಧ್ಯಾಪಕರು ಹಾಗೂ ಸಂಶೋಧಕರಿಗೆ ಮುಕ್ತ ಅವಕಾಶವಿದೆ. ಈ ವಿಚಾರ ಸಂಕಿರಣದ ಪ್ರಬಂಧಗಳು ಪುಸ್ತಕ ರೂಪದಲ್ಲಿ ಪ್ರಕಟಣೆ ಆಗಲಿದೆ. ಆದ್ದರಿಂದ ಸಮಾವೇಶದಲ್ಲಿ ಮಂಡಿಸುವ ಪ್ರಬಂಧವನ್ನು ಬರಹ ರೂಪದಲ್ಲಿ ಕಡ್ಡಾಯವಾಗಿ ನೀಡಬೇಕು. ಪ್ರಬಂಧವನ್ನು ಆಧರಿಸಿ ಮಾತಾಡಬೇಕೇ ಹೊರತು, ಓದುವಂತಿಲ್ಲ. ಪ್ರಬಂಧದ ವಿಷಯಗಳನ್ನಾಧರಿಸಿ ಸಂವಾದಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು.
ಪ್ರಬಂಧ ಮಂಡಿಸುವ ಪ್ರತಿನಿಧಿಗಳು ಪ್ರತಿನಿಧಿ ಶುಲ್ಕವಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳು 100=00, ಸಂಶೋಧಕರು 200=00, ಅಧ್ಯಾಪಕರು 300=00ರೂಪಾಯಿಗಳನ್ನು ನೀಡಿ, ಭಾಗವಹಿಸುವ ಸ್ಥಳದ ಮಾಹಿತಿಯೊಂದಿಗೆ ಸಂಘಟಕರಿಗೆ ಇದೇ ದಿ.20/10/2013 ರೊಳಗಾಗಿ ಹೆಸರು ನೋಂದಾಯಿಸಬಹುದಾಗಿದೆ. 100 ಪದಗಳ ಸಾರಲೇಖವನ್ನು ದಿ.20/10/2013ರೊಳಗೆ ಮತ್ತು ಪೂರ್ಣ ಪ್ರಬಂಧವನ್ನು ದಿ.23/10/2013ರೊಳಗೆ ಸಲ್ಲಿಸಬೇಕು. ಪ್ರಮಾಣ ಪತ್ರ ನೀಡಲಾಗುವುದು.
ವಿಷಯಗಳು:
1.ಪ್ರಚಲಿತ ವಿದ್ಯಮಾನಗಳು 2.ಕನ್ನಡದ ಮುಂದಿನ ಸವಾಲುಗಳು 3.ಸಂಶೋಧನೆ 4.ವಿಮರ್ಶೆ 5.ಜಾನಪದ ಮತ್ತು ಸಂಸ್ಕೃತಿ ಅಧ್ಯಯನ 6.ಸಾಹಿತ್ಯ ಮತ್ತು ಚಳವಳಿ 7.ಮೀಸಲಾತಿ 8.ಸಮೂಹ ಮಾಧ್ಯಮಗಳ ಜವಾಬ್ದಾರಿ 9.ಅಂತರ್ಜಾತೀಯ ವಿವಾಹ 10.ಜಾತಿ ಪದ್ಧತಿ, ಜಾತೀಯತೆ 11.ಪ್ರಜಾಪ್ರಭುತ್ವ 12. ಮತೀಯವಾದ 13.ಹಿಂದುಳಿದ ವರ್ಗ ಹಾಗೂ ದಲಿತರು 14.ಗಾಂಧಿ, ಅಂಬೇಡ್ಕರ್, ಲೋಹಿಯಾ ಚಿಂತನೆಗಳು 15.ಸಾಹಿತ್ಯ ಮೀಮಾಂಸೆ 16.ಬುದ್ಧ-ಬಸವ-ಅಂಬೇಡ್ಕರ್ ಚಿಂತನೆಗಳು 17.ಪಠ್ಯಪುಸ್ತಕಗಳು 18.ಕನ್ನಡ ಅಧ್ಯಾಪನ 19.ಹಳಗನ್ನಡ ಸಾಹಿತ್ಯಾಧ್ಯಯನ 20.ಕನ್ನಡ ಮತ್ತು ತಂತ್ರಜ್ಞಾನ 21.ಆಡಳಿತ ಕನ್ನಡ 22.ಓದುವಿಕೆ 23. ರಂಗಭೂಮಿ 24.ಸಿನಿಮಾ 25.ಸಂಗೀತ 26.ಚಿತ್ರಕಲೆ 27.ದೂರದರ್ಶನ 28.ವೈಚಾರಿಕತೆ 29. ಮೊಬೈಲ್ 30.ಇಮೇಲ್ 31.ಹೆಣ್ಣಿನ ಸ್ಥಿತಿಗತಿಗಳು 32.ಜನಾಂಗಿಕ ಅಧ್ಯಯನ 33.ಫೇಸ್ಬುಕ್ 34.ಉನ್ನತ ಶಿಕ್ಷಣದಲ್ಲಿ ಕನ್ನಡ 35. ದೇವರು.
ನೋಂದಾವಣಿಗಾಗಿ ಸಂಪರ್ಕಿಸಬೇಕಾದ ಸಂಚಾಲಕರು:
ಹೊಂಬಯ್ಯ ಹೊನ್ನಲಗೆರೆ, ಪ್ರಸನ್ನ ನಂಜಾಪುರ, ಕುಪ್ನಳ್ಳಿ ಎಂ.ಬೈರಪ್ಪ, ಮಂಜು ಅಮ್ಮನಪುರ, ಅಮೃತಿ ರಾಜೇಶ್, ನಾರಾಯಣ್ ಕೆ.ಕ್ಯಾಸಂಬಳ್ಳಿ
9964018112 8050986844 9741436723 9741462338 9986527820 9900733141
ನಿರ್ದೇಶಕರು ವಿಚಾರ ಸಂಕಿರಣ ಪರಿಕಲ್ಪನೆ ಪದಾಧಿಕಾರಿಗಳು
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರೊ.ರಾಜಪ್ಪ ದಳವಾಯಿ ಕರ್ನಾಟಕ ಬುದ್ಧಭೂಮಿ ಬಳಗ
 

‍ಲೇಖಕರು avadhi

16 October, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading