ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಒಂದು ಕವಿತೆ ಯಾಕೆ ತಲೆ ಕೆಡಿಸುತ್ತದೆ?’ – ಪ್ರಜ್ಞಾ ಶಾಸ್ತ್ರಿ

ಪ್ರಜ್ಞಾ ಶಾಸ್ತ್ರಿ

ಒಂದು ಕವಿತೆ ಯಾಕೆ ತಲೆ ಕೆಡಿಸುತ್ತದೆ?

ಅದು ಒಂದು ಘನೀಭವಿಸಿದ ಹನಿಯಾದಾಗ. ಆಕಾಶವನ್ನ ಕಲ್ಪಿಸಿಕೊ. ಅದರ ಒಡಲೊಳಗಿದ್ದ ರಹಸ್ಯವನ್ನೆಲ್ಲ ಬಸಿದು ಮೋಡ ಕಟ್ಟಿ ಆ ಮೋಡದ ಒಂದು ಅಂಶ ಆ ಕವಿತೆಯೊಳಗಿನ ಹನಿಯಾದಾಗ. ಆ ಹನಿಯ ಜಾಡು ಹಿಡಿದು ಆಕಾಶದ ಒಡಲನ್ನು ತಲುಪುವ ರೋಚಕ ಯಾನವೊಂದನ್ನು ಊಹಿಸಿಕೋ. ಆ ಯಾನ ನನ್ನದು. ಯಾನಕ್ಕೆ ದಾರಿ ಕೊಡುವವನು ಕವಿ. ತಲೆ ಕೆಡೋದಿಲ್ಲವಾ!


ಏನಿಲ್ಲ. ನೆನಪುಗಳನ್ನ ಕೆದಕುತ್ತದ. ಕಲಕುತ್ತದೆ. ಕನಸುಗಳನ್ನ ಬಿತ್ತುತ್ತದೆ. ಹೊಳೆಯೊಳಗೆ ಸುಳಿ ಇರ‍್ತದೆ ನೋಡು ಹಾಗೆ…ಯಾವ ಅಂತರಿಕ್ಷಕ್ಕೆ ಕೊಂಡೊಯ್ಯುತ್ತದೋ ಯಾರು ಬಲ್ಲರು…
ಈಗ ಈ ಕೊಳ. ಆ ಹಣ್ಣೆಲೆ ಯಾವುದೋ ಮರದ ನಂಟಿನ ತೊಟ್ಟು ಕಳಚಿಕೊಂಡು ಬಂಧಮುಕ್ತನಾದ ಭ್ರಮೆಯಲ್ಲಿ ತುಪ್ಪಳದಷ್ಟು ಹಗುರವಾಗಿ ನೀರಿಗೆ ಬಿತ್ತು. ಅಲ್ಲಿಗೆ ಆ ಕತೆ ಮುಗಿಯಿತು.
ಆದರೆ ಆ ಕೊಳವೇಕೆ ಹಾಗೆ ಕಂಪಿಸುತ್ತಿದೆ? ಹಾಗೆ ಯಾಕೆ ಅಲೆಯ ತೇರೆದ್ದಿದೆ? ಅಲ್ಲೊಂದು ಕವಿತೆ ಹುಟ್ಟಿರಬೇಕು. ಅಲ್ಲಿಗೆ ಈ ಕತೆ ಈಗಷ್ಟೇ ಶುರುವಾಯಿತು! ಯಾಕಿಲ್ಲ?
 

‍ಲೇಖಕರು G

31 March, 2015

3 Comments

  1. bharathi b v

    Wonderful!

  2. mmshaik

    nice prajna..

  3. sahyadri nagaraj

    🙂 ಹಮ್… ಚಂದಿದೆ ಪ್ರಜ್ಞಾ. ಪದ್ಯ ಹುಟ್ಟುವಾಗ ಅಲೆ ಏಳಲೇಬೇಕು ಬಿಡಿ, ಇಲ್ಲದಿದ್ದರೆ ಅದಕ್ಕೆ ಪದ್ಯ ಎಂದು ಒಪ್ಪುವುದಾದರೂ ಹೇಗೆ?! 😉

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading