– ಸುನಿತಾ ಮಂಜುನಾಥ್
ನಿನ್ನ ಬೇರು ಯಾವುದು..”
ಕೇಳಿದ ನನ್ನ ದನಿ ನನಗೇ ಅಪರಿಚಿತ ಎನಿಸಿತ್ತು….
ಸ್ವಯಂವರ ಮಂಟಪ ದಿಗ್ಬ್ರಂತಗೊಂಡಿತು..
ಕರ್ಣನ ಮೊಗದ ಬಣ್ಣ ಬಿಳುಪೇರಿತು..
ಪಾಪ ರಾಧೇಯ ಒಂದು ಮಾತು ಆಡದೆ ಬಿಲ್ಲು ಬಿಟ್ಟು ಹೊರಟೇಬಿಟ್ಟ…
…
ನನ್ನ ವ್ಯಂಗ್ಯ ಹೆಚ್ಚಾಯ್ತೆ..??
ಗೊತ್ತಿಲ್ಲ ..
ಬೇಕಾಗಿರಲಿಲ್ಲ….
ನನಗೇ ಕರ್ಣನ ಗೆಲ್ಲುವು ಇಷ್ಟವಿರಲಿಲ್ಲ…
ಪಾರ್ಥನ ಗೆಲುವು ಬೇಕಿತ್ತು….
ಕೃಷ್ಣನ ಕುಮ್ಮಕ್ಕು ಇತ್ತು….

ಅರ್ಜುನನ ಬಾಣ ಮತ್ಸ್ಯವ ಛೇದಿಸಿ ಹೋಯ್ತಲ್ಲ….
ಹಾರ ಹಿಡಿದದ್ದೇ ಅದಕ್ಕೇನೋ ಎಂಬಂತೆ ಅವನ ಕೊರಳಿಗೆ ಹಾಕಿದ್ದೆ….
ಕನಸಿನಲ್ಲೇನೋ ಎಂಬಂತೆ ಅರ್ಜುನ ನನ್ನ ಕೈ ಹಿಡಿದು ಕುಂತಿಯ ಬಳಿಗೆ ಕರೆತಂದ…
“ಅಮ್ಮ ಭಿಕ್ಷೆ ತಂದಿದ್ದೇನೆ” ಎಂದ
ಕೊಡಲೇ ಎಂದಿನಂತೆ ಕುಂತಿ “ಹಂಚಿಕೊಳ್ಳಿ” ಎಂದುಬಿಟ್ಟಳು…
ದಿಗ್ಬ್ರಾಂತಳಾದೆ ..

ದುಶ್ಯಾಸನ ಸೀರೆ ಸೆಳೆದಾಗ…
ಐವರು ಗಂಡಂದಿರು ಮೌನಕ್ಕೆ ಮೊರೆ ಹೋದಾಗ…
ಐವರು ಮಕ್ಕಳ ಒಮ್ಮೆಲೇ ಕಳೆದುಕೊಂಡಾಗ..
ಪಾಂಡವರೈವರಲ್ಲಿ ಯಾರೊಬ್ಬರು ತಬ್ಬಿ ಸಂತೈಸುವ ಸೌಜನ್ಯ ತೋರದಿದ್ದಾಗ ….
ಎಲ್ಲೋ ನೀನು ನಕ್ಕನಂತೆ ಅನಿಸುವುದು ಯಾಕೆ ಕರ್ಣ.??..
ಐವರು ಗಂಡಂದಿರು ಮೌನಕ್ಕೆ ಮೊರೆ ಹೋದಾಗ…
ಐವರು ಮಕ್ಕಳ ಒಮ್ಮೆಲೇ ಕಳೆದುಕೊಂಡಾಗ..
ಪಾಂಡವರೈವರಲ್ಲಿ ಯಾರೊಬ್ಬರು ತಬ್ಬಿ ಸಂತೈಸುವ ಸೌಜನ್ಯ ತೋರದಿದ್ದಾಗ ….
ಎಲ್ಲೋ ನೀನು ನಕ್ಕನಂತೆ ಅನಿಸುವುದು ಯಾಕೆ ಕರ್ಣ.??..
ಐದು ಗುಣಗಳ ಹೊಂದಿದ್ದ ನಿನ್ನ ತಿರಸ್ಕರಿಸಿದ್ದಕ್ಕೆ
ಐವರಲ್ಲಿ ಒಂದೊಂದು ಗುಣ ಹುಡುಕಬೇಕಾಯ್ತೆ.??.
ನಿನ್ನ ನೋವಿಗೆ ಬೆಲೆ ಕಟ್ಟಾ ಬೇಕಾಯ್ತೆ.??…
ನನ್ನ ಮನದಲ್ಲಿ ನಿನ್ನ ಬಗ್ಗೆ ಪ್ರೀತಿ ಇತ್ತೆ …??
ಇಲ್ಲ ನಿನ್ನ ಕಳೆದುಕೊಂಡೆ ಎಂಬ ನೋವು ಇತ್ತೇ..?
ಗೊತ್ತಿಲ್ಲ….
ಐವರಲ್ಲಿ ಒಂದೊಂದು ಗುಣ ಹುಡುಕಬೇಕಾಯ್ತೆ.??.
ನಿನ್ನ ನೋವಿಗೆ ಬೆಲೆ ಕಟ್ಟಾ ಬೇಕಾಯ್ತೆ.??…
ನನ್ನ ಮನದಲ್ಲಿ ನಿನ್ನ ಬಗ್ಗೆ ಪ್ರೀತಿ ಇತ್ತೆ …??
ಇಲ್ಲ ನಿನ್ನ ಕಳೆದುಕೊಂಡೆ ಎಂಬ ನೋವು ಇತ್ತೇ..?
ಗೊತ್ತಿಲ್ಲ….
ಆದ್ರೆ ನೀನು ನನ್ನ ಕಾಡುವುದು ನಿಜ ಕರ್ಣ………!!!
ಇತಿ…ಕೃಷ್ಣೆ…
ಇತಿ…ಕೃಷ್ಣೆ…

ಚೆನ್ನಾಗಿದೆ… ಕರ್ಣ ಹೋಗುವಾಗ ಆತನನ್ನು ರಾಧೇಯ ಎಂದು ಕರೆದದ್ದು ಶಕ್ತಿಶಾಲಿಯಾಗಿದೆ. ಯಾಕೆಂದರೆ ಕೌಂತೇಯ ಎಂದು ಕರೆದಿದ್ದರೆ ಕುಂತಿಗೆ ಧರ್ಮ ಸಂಕಟ ಎದುರಾಗುತ್ತಿತ್ತು.
Nice one!!