-ಸುಬ್ರಮಣ್ಯ ಹೆಗ್ಡೆ
ಇಂದು ರಂಗಾಯಣದಲ್ಲಿ ಪ್ರಸನ್ನ ನಿರ್ದೇಶನದ ‘ಏನ್ ಹುಚ್ರೀ.. ಯಾಕ್ ಹಿಂಗಾಡ್ತೀರಿ’ ನಾಟಕವಿತ್ತು.
ಮೋಲಿಯೇರನ ಫ್ರೆಂಚ್ ನಾಟಕವೊಂದರ ಅನುವಾದ. ಅದ್ಭುತವೆಂದೇ ಅನ್ನಬೇಕೇನೋ! ಇಂದಿನ ಎಲ್ಲ ರೀತಿಯ ಜನರ ಕೀಳರಿಮೆಗಳ, ಹುಳುಕುಗಳ, ತಳುಕುಗಳ ತೀಕ್ಷ್ಣ ವಿಡಂಬನೆಯಿದೆ. ತುಂಬಿದ ಭೂಮಿಗೀತ ದಲ್ಲಿ ನಡೆಯುತ್ತಿರುವ ನಾಟಕ ಅರೆ ಕ್ಷಣವೂ ಬೇಸರ ತರಿಸದೇ, ನಗಿಸುತ್ತಾ, ನಮ್ಮ ನಗುವಲ್ಲಿ ನಮ್ಮನ್ನೇ ತಿವಿಯುತ್ತಾ ಸಾಗುತ್ತದೆ. ಚೀನಿಯವರ ಸಂಗೀತ ಮನಸೂರೆಗೊಳ್ಳುತ್ತದೆ. ಸಾಧ್ಯವಾದರೆ ದಯವಿಟ್ಟು ನೋಡಿ. ಮರೆಯಲಾರಿರಿ. ಸುಂದರ ನಿರ್ದೇಶನ.








ಪ್ರಸನ್ನ ನಿರ್ದೇಶನದ ನಾಟಕ ನೋಡಿ ವರ್ಷಗಳೇ ಕಳೆದವು . ಕನ್ನಡ ಕೆಲವೇ ಸೂಕ್ಷ್ಮ ಸಂವೇದನಾಶೀಲ ನಿರ್ದೇಶಕರಲ್ಲಿ ಪ್ರಸನ್ನ ಒಬ್ಬರು ,ಕೆಲವು ಕಾಲದಿಂದ ಅವರು ದೇಸಿ ಒತ್ತಡ ದಲ್ಲಿ ನಾಟಕ ದಿಂದ ದೂರವಿದ್ದರೆನೂ , ಮುಂದಿನ ವಾರ ಮೈಸೂರಿಗೆ ಹೋದಾಗ ತಪ್ಪದೆ ನಾಟಕ ನೋಡುವೆ ,ವಂದನೆಗಳು
ರವಿ ವರ್ಮ ಹೊಸಪೇಟೆ