ಏನಾದರೂ ಅಮ್ಮನಿಗೆ ಮಗನೇ..

‘ಊರಿಗೆ ಒಡೆಯನಾದರೂ ಅಮ್ಮನಿಗೆ ಮಗನೇ’.. ಎನ್ನುವ ಮಾತು ಮತ್ತೆ ನಿಜವಾದದ್ದು ನಿನ್ನೆ..

ಅದು ಆತ್ಮೀಯರೆಲ್ಲರೂ ಸೇರಿದ್ದ ಹೃದಯಸ್ಪರ್ಶಿ ಸಮಾರಂಭ. ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ ಗಣ್ಯರೆಲ್ಲರೂ ಅಲ್ಲಿದ್ದರು

ಬಿ ಸುರೇಶ ಕನಸಿನ ‘ನಾಕುತಂತಿ ಪ್ರಕಾಶನ’ ದ ಹೊಸ ಕೃತಿಯ ಬಿಡುಗಡೆ ಸಮಾರಂಭ

ಇದೇ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಪಿ ಚಂದ್ರಿಕಾ ಅವರ ‘ಚಿಟ್ಟಿ’ ಕಾದಂಬರಿ ಲೋಕಾರ್ಪಣೆಗೊಳ್ಳಲಿತ್ತು

ಕಾರ್ಯಕ್ರಮಕ್ಕೆ ಮುಖ್ಯರಾಗಿ ಬಂದದ್ದು ನಮ್ಮದೇ ರಂಗಭೂಮಿಯಿಂದ ನಡೆದು ಹೋದ ಹುಡುಗ ಪ್ರಕಾಶ್ ರೈ ಅಲಿಯಾಸ್ ಪ್ರಕಾಶ್ ರಾಜ್

ದೇಶದ ಹತ್ತಾರು ಭಾಷೆಗಳನ್ನು ಆಕ್ರಮಿಸಿಕೊಂಡು ಒಳ್ಳೆಯ ಹೆಸರು ಮಾಡಿದ ನಟ

 

ಪುಸ್ತಕ ಬಿಡುಗಡೆ ಮಾಡಲು ಆತ ಸಭಾಂಗಣ ಪ್ರವೇಶಿಸಿದ

ಅಷ್ಟೇ,

ಅಲ್ಲಿ ಎಲ್ಲರಿಗೂ ತಾಯಿ ವಾತ್ಸಲ್ಯ ನೀಡಿದ ವಿಜಯಮ್ಮ ಕಂಡರು

ವಿಜಯಮ್ಮ ಎಂದರೆ ಹಾಗೇ..

ನಿಷ್ಕಲ್ಮಶ ಮನಸ್ಸಿನಿಂದ ಪ್ರತಿಯೊಬ್ಬರಿಗೂ ಚಿಮ್ಮು ಹಲಗೆ ನೀಡಿದವರು.

ಅಷ್ಟೇ ಅಲ್ಲ, ಕಿವಿಮಾತು ಹೇಳಿದವರು. ಅಷ್ಟೇ ಅಲ್ಲ, ಕೈ ತುತ್ತನ್ನೂ ನೀಡಿದವರು

ನಮ್ಮ ಹುಡುಗರು ಎಂದು ಹೆಮ್ಮೆಯಿಂದ ಒಂದು ರಕ್ಷಣಾ ಕೋಟೆಯಾಗಿ ನಿಂತು ಕಾಪಾಡಿದವರು

 

ಈ ಎಲ್ಲಾ ಪ್ರೀತಿಯನ್ನು ಕಂಡುಂಡ ಪ್ರಕಾಶ್ ರೈ ಒಳಗೆ ಬರುತ್ತಿದ್ದಂತೆ ಅಮ್ಮನನ್ನು ಕಂಡ

ತಕ್ಷಣವೇ ನಿನಗೆ ಮಣಿವೆ ಎನ್ನುವಂತೆ ಕಾಲ ಬಳಿ ಕುಳಿತೇ ಬಿಟ್ಟ

ಅಮ್ಮನ ಜೊತೆ ಎರಡು ಮಾತಾಡಿ, ಕೆನ್ನೆ ಹಿಂಡಿಸಿಕೊಂಡ ನಂತರವೇ ಎದ್ದಿದ್ದು

ಹಾಗೆ ಪ್ರಕಾಶ್ ರೈ ಮತ್ತೆ ಇನ್ನೊಬ್ಬರ ಆಶೀರ್ವಾದ ಪಡೆದುಕೊಂಡ- ಅದು ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರಿಂದ

vijayamm and prakash rai

HSV prakash rai1

‍ಲೇಖಕರು Admin

August 29, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. J.S.Ganjekar

    ಪ್ರಕಾಶ್ ರೈರವರು ಬಹು ದೊಡ್ಡ ಪ್ರತಿಭಾವಂತ ಹೆಸರಾಂತ ನಟನಾದರೂ ಅವರ ನಮೃತೆಯನ್ನು ಮೆಚ್ಚಲೇಬೇಕು. ತಾಯಿಯ ವಾತ್ಸಲ್ಯ ನೀಡಿದ ಜಯಮ್ಮಾರವರ ಪಾದದಡಿಯಲ್ಲಿ ವಿನಯಪೂರ್ವಕವಾಗಿ, ಸಮಾರಂಭದಲ್ಲಿ ನೆರೆದ ಅಷ್ಟು ಜನರ ಎದುರಿಗೆ ಕಾಲೂರಿ ಕುಳಿತದ್ದು ಅವರ ಹೃದಯವಂತಿಕೆ ತೋರಿಸುತ್ತೆ. ಭಗವಂತ ಅವರ ಎಲ್ಲ ಕಾರ್ಯಗಳಿಗೆ ಯಶಸ್ಸು ನೀಡಲಿ.

    —J.S.Ganjekar, Gandhinagara Kumta(U.kannada)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: