ಎಸ್ ಗಂಗಾಧರಯ್ಯ
ಕಳೆದೊಂದು ವಾರದಿಮ್ದ ಹಠಕ್ಕೆ ಬಿದ್ದವನಂತೆ ಕಡಿದಾಳ್ ಶಾಮಣ್ಣನವರ ‘ಕಾದತೊರೆಯ ಜಾಡು’,ಅನುಪಮಾನಿರಂಜನ ಅವರ ‘ನೆನಪು :ಸಿಹಿ-ಕಹಿ’,ಪ್ರತಿಭಾನಂದಕುಮಾರ್ ಅವರ ‘ಅನುದಿನದ ಅಂತರಗಂಗೆ’,ಎಂಬ ಮೂರು ಆತ್ಮಕತೆಗಳನ್ನು ಓದಿದೆ. ಪ್ರತಿಭಾ ಅವರ ಬರಹ ಯಾಕೋ pretentious ಅನಿಸಿತು.ಬರಹಗಾರರು ಓದುಗರನ್ನೇ ಮನಸ್ಸಿನಲ್ಲಿಟ್ಟುಕೊಂಡು ಅಥವಾ ತಾವು ಬರೆದದ್ದನ್ನೆಲ್ಲ ಓದುವವರಿದ್ದಾರೆ,ಅನ್ನುವ ತೀರ್ಮಾನಕ್ಕೆ ಬಂದೊದನೆ ಅವ್ರ ಬರಹಕ್ಕೆ ಜದತ್ವ ಬಂದು ಬಿದಬಹುದೆ?]]>ಎಸ್ ಗಂಗಾಧರಯ್ಯ ಓದಿದ್ದು..
ನಿಮಗೆ ಇವೂ ಇಷ್ಟವಾಗಬಹುದು…





ಎಸ್ ಗಂಗಾಧರಯ್ಯ ಅವರಿಗೆ, ಬರೆದದ್ದು ಎಲ್ಲರಿಗು ಇಷ್ಥವಾಗಬೇಕು ಎಂದು ಯಾವ ಸಾಹಿತಿಯೂ ನಿರೀಕ್ಷಿಸುವುದಿಲ್ಲ. ನನ್ನ ಬರಹ ನಿಮಗೆ ಇಷ್ಥವಾಗದಿದ್ದರೆ ಇಷ್ಥವಾಗಲಿಲ್ಲ ಎಂದು ಹೇಳಿ ಆದರೆ ಅದನ್ನು pritentious ಎಂದು ಕರೆಯುವ ಹಾಗು “ಓದುಗರನ್ನೇ ಮನಸ್ಸಿನಲ್ಲಿತ್ತುಕೊಮ್ದು ಅಥವಾ ತಾವು ಬರೆದದ್ದನ್ನೆಲ್ಲ ಓದುವವರಿದ್ದಾರೆ ” ಎನ್ನುವ ತಿರ್ಮಾನಕ್ಕೆ ಬಂದು ಬರೆದಿದ್ದೇನೆ ಎಂದು ನೀವು ಮಾಡಿದ ಆಪಾದನೆಗಳು ಸತ್ಯವಲ್ಲ. ಮೊತ್ತ ಮೊದಲನೆಯದಾಗಿ ಈ ಬರಹ ‘ಅಗ್ನಿ’ ಪತ್ರಿಕೆಯಲ್ಲಿ ಎಂಟು ವರ್ಷಗಳ ಹಿಂದೆಯೇ ೫೬ ವಾರಗಳ ಕಾಲ ಕಂತುಗಳಲ್ಲಿ ಬಂದಿತ್ತು. ನೀವು ಆಪಾದಿಸಿದ ಹಪಾಹಪಿ ನನಗೆ ಇದ್ದಿದ್ದರೆ ಆಗಲೇ ನಾನು ಇದನ್ನು ಪುಸ್ತಕವಾಗಿ ತರಬಹುದಿತ್ತು. ಈಗಲೂ ಅದನ್ನು ಪುಸ್ತಕವಾಗಿ ತಂದಿದ್ದು ಅಹರ್ನಿಸಿ ಪ್ರಕಾಶನದ ಅಕ್ಷತಾ ಆಸಕ್ತಿ ವಹಿಸಿದ್ದರಿಂದ ಅಂತ ಮುನ್ನುಡಿಯಲ್ಲೇ ಹೇಳಿದ್ದೇನೆ. ಗಮನಿಸಿ. ನಿಮ್ಮದು ಬೇಜವಾಬ್ದಾರಿಯ ಟೀಕೆ.
ಆತ್ಮ ಕಥನವೇ ಮೂಲತಃ ಅಹಮ್ಜನ್ಯ. ಆ ಅಹಮ್ಮು ವಿಶ್ವಾಸವಾಗಿ ಸಹೃದಯರೊಂದಿಗೆ ಸಂವಾದಿಸುವಾಗ ಎಷ್ಟು ಪ್ರಾಮಾಣಿಕವಾಗಿರುತ್ತದೋ ಅಷ್ಟು ನಿಜವಾಗಿರುತ್ತದೆ. ಪ್ರತಿಭಾ ಮೇಡಂ ಕನ್ನಡದ ಅಪರೂಪದ ಆಸ್ತಿ. ಅವರ ಬರಹದ ಪ್ರಾಮಾಣಿಕತೆಯನ್ನು ಅನುಮಾನಿಸಬಾರದು. ಹಾಗಾದರೆ ಅದು ಕನ್ನಡದ ದುರಂತ. – ಮಂಜುರಾಜ್, ಕೆ ಆರ್ ನಗರ, ಮೈಸೂರ್ ಜಿಲ್ಲೆ