ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಸ್ ಎಲ್ ಭೈರಪ್ಪ: ನೀವೇನಂತೀರಿ?

ಪದ್ಮಪಾಣಿ ಜೋಡಿದಾರ್ ಸಂಗೀತ ನಿರ್ದೆಶಕರು. ಸಾಕಷ್ಟು ಸಾಹಿತ್ಯ ಓದಿಕೊಂಡವರು.

ಅವರು ಎಸ್  ಎಲ್ ಭೈರಪ್ಪನವರ ಕಾದಂಬರಿ ‘ಕವಲು’ ಓದಿ ಹೀಗಂತಾರೆ ..

ನೀವೇನಂತೀರಿ..??

ಎಸ್ ಎಲ್ ಭೈರಪ್ಪ ಅವರ ಕಾದಂಬರಿ ‘ಕವಲು’ ಓದಿದೆ. Disappointed.
ಬಹುಷಃ ನಾವು ಓದುಗರಾಗಿ ಬೆಳೆದಿದ್ದೇವೆ. ಅವರು ಅಲ್ಲಿಯೇ ಇದ್ದಾರೆ ಅನಿಸ್ತು.


‍ಲೇಖಕರು G

26 June, 2013

17 Comments

  1. Shashikala M

    ನಾನು ಮೆಚ್ಚಿದ ಭೈರಪ್ಪನವರ ಕಾದಂಬರಿಗಳು ಗೃಹಭಂಗ, ದಾಟು, , ಪರ್ವ ಮತ್ತು ಸಾರ್ಥ. ತಬ್ಬಲಿಯು ನೀನಾದೆ ಮತ್ತು ಮಗನೆವಂಶವೃಕ್ಷವನ್ನು ಪಾತ್ರಚಿತ್ರಣ ಹಾಗು ಅಲ್ಲಿ ಅವರು ಎತ್ಹುವ ವಿಷಯಗಳಿಗಾಗಿ ಇಶ್ಟಪಟ್ಟಿದ್ದೆನೆ ಹೊರತು ಅವರ ನಿಲಿವಿಗಾಗಿ ಅಲ್ಲ.
    ಇತ್ತೀಚಿನ ಅವರ ಕಾದಂಬರಿಗಳನ್ನು( ಅಂಚು, ತಂತು, ಮಂದ್ರ, ಕವಲು ) ಓದಿದಾಗ ಅವರು ಬರೆಯುವುದನ್ನು ನಿಲ್ಲಿಸಿದರೆ ಅವರಿಗೆ ಶ್ರೇಯಸ್ಸು ಮತ್ತು ಮರ್ಯಾದೆ ಎನಿಸುತ್ತದೆ

    • Kiran

      Very insensible, madam. Dr SLB writes for millions, not for you alone. If you dont wish to read, then dont read. But dont post such immature comments. You dont seem to understand how to use words in a 3-line comment; and you talk about the writings of someone beyond your scope of understanding. Please be sensible when you post future comments.

      • ಆವೀನ್

        ಶಶಿಕಲಾರವರು ಒಮ್ಮೆ ಮಂದ್ರವನ್ನು ಓದುವ ರೀತಿ ಓದಿ ಅರ್ಥ ಮಾಡಿಕೊಂಡರೇ ಅರ್ಥಪೂರ್ಣ ಅಂತ ನನ್ನ ಭಾವನೆ. ಮಂದ್ರಕ್ಕೆ ನಿಮ್ಮ ಪ್ರತಿಕ್ರಿಯೆಯನ್ನೇ ನೋಡುವುದಾದರೆ ಅವರಿಗೆ ಸರಸ್ವತಿ ಸಮ್ಮಾನ್ ನೀಡಿದ, ಅದನ್ನು ಅಭಿನಂದಿಸಿದ ಲಕ್ಷಾಂತರ ಜನ ಮೂರ್ಖರೆ ಸರಿ…

  2. G Venkatesha

    Bairappanavara almost ella kaadambarigalalli Kendrabinduvaagi Anaitika Sambandagaliruvudu Gocharisuttade. Adannu horatu padisidare bere kathavastu avarige gocharisuvudillaveno?????? E Vishayadalli disappointment sahajave.

  3. Anjali Ramanna

    kelavu satyagaLu aparoopaddadaroo intha lEkhakaru hELidaaga kaTu vimarshege oLapaDuvudu nijakkoo viparyaasa aadare atyanta sahaja! barahaagaranE bEre barahavE bEre ennuva niluvu uLLa nanage ‘kavalu’ kaadaMbariyalli ee maTTadalli vyghravaaguvantaha yaava aMshavoo kaaNalilla! adakke nanna saNNa jeevanada saNNa anubhava mattu naMbikeyoo kaaraNavirabahudu. ” Anything is possible in this world”. Anjali Ramanna

  4. sunil rao

    Kavalu sathyavanna pratipaadisuva kaadambari. Namma conservative aalochanegalannu meeri adanna odabeku.
    Aagaaga alliya paatragalu kaanutta,sathyavannu horahaakutta hoguttade. Yaake nimage e abhipraayavide,annuvudannoo neevu helabeku. Eradu saalugalalli hididittare enoo arthavaagolla.

  5. Swarna

    ಕವಲು ಓದಿದಾಗ ಅಷ್ಟೇನೂ ಇಷ್ಟವಾಗಿರಲಿಲ್ಲ…ಆದ್ರೆ ಮೇಲಿನ ಅಭಿಪ್ರಾಯಗಳಂತೆ ಯಾಕೆ ಇಷ್ಟವಾಗ್ಲಿಲ್ಲ ಅನ್ನೋದನ್ನ ವಿವರಿಸಬೇಕು. ಓದಬೇಕೋ ಬೇಡವೋ ಎನ್ನುವ ನಿರ್ಧಾರ ಓದುಗರಗಿಗೆ ಬಿಟ್ಟ ನಿರ್ಧಾರವಾದರೆ ಬರಹಗಾರನೊಬ್ಬ ಬರಿಯಬೇಕೋ ಬೇಡವೋ ಎಂಬ ನಿರ್ಧಾರ ‘ಬರಹಗಾರನದು’ ಮಾತ್ರವಾಗಿರಬೇಕು

  6. Ananath

    Avaravara bhavakke avarava bhakutige takkkante abhipraya

  7. ಪ್ರವೀಣ್ ಸೂಡ

    ಕವಲು ಓದಿ ನನಗೆ ಹಾಗು ನನ್ನ ಗೆಳೆಯರನೇಕರಿಗೆ ಮದುವೆ ಅನ್ನೋದು ಭಯಂಕರವಾದ ವ್ಯೂಹ ಅಂತ ಅನಿಸೋಕೆ ಶುರು ಆಯ್ತು. ಎಲ್ಲಾ ಮಹಿಳಾ ಸ್ವಾತಂತ್ರ ಬಯಸೋ ಹೆಣ್ಣು ಮಕ್ಕಳನ್ನ ಇಷ್ಟು ಕೆಟ್ಟದಾಗಿ ಚಿತ್ರಿಸ ಬೇಕೊ ಅಷ್ಟು ಕೆಟ್ಟದಾಗಿ ಚಿತ್ರಿಸಿದ್ದಾರೆ ಭೈರಪ್ಪ. ನನ್ನ ಅತ್ಯಂತ ನೆಚ್ಚಿನ ಕಾದಂಬರಿ ಪವಱ ಬರೆದ ಮನುಷ್ಯ ಇವರೇನ ಅನ್ನೊ ಅನುಮಾನ ಹುಟ್ಟಿದ್ದು ನಿಜ. ಇದು ಕಾದಂಬರಿ ಅಲ್ಲ. ಪುರುಷ ಪ್ರಧಾನ ಸಮಾಜವನ್ನ ಪ್ರಶ್ನಿಸುವ ಮಹಿಳೆಯರನ್ನು ಕೀಳಾಗಿ ಕಾಣುವ ಭೈರಪ್ಪನವರ ಮನಸ್ಸಿನಲ್ಲಿ ಕಟ್ಟಿಕೊಂಡ ಭ್ರಮೆ ದೋಷಾರೋಪ ಪಟ್ಟಿ.

  8. ಸಂಜೀವ ಓಡೇಯರ್

    “ಓದಿದ ಗಂಡಸರೆಲ್ಲ ಹೆಂಗಸರಾಗ್ತಾರೆ. ಓದಿದ ಹೆಂಗಸರೆಲ್ಲ ಗಂಡಸರಾಗ್ತಾರೆ. ಗಂಡಸರು ಗಂಡಸರಾಗಿ ಹೆಂಗಸರು ಹೆಂಗಸರಾಗಿ ಇರಬೇಕಾದರೆ ಯಾರೂ ಓದಕೂಡದು”
    ಇಂಥಾ ಒಂದು Confused statement ಅನ್ನ ಭೈರಪ್ಪರವರು ಕೊಟ್ಟಾಗ ಅದನ್ನಾ ಯಾವ ರೀತಿಯಿಂದ ಸ್ವೀಕರಿಸಬೇಕು ಅನ್ನೋದು ತುಂಬಾ ಭಾರವಾದ ಸನ್ನಿವೇಷಾ.”ಕವಲು” ಭೈರಪ್ಪರವರ ಅತೀ ಕನಿಷ್ಟ ಮಟ್ಟದ ಬರಹ …

  9. Dattaraj

    ಪದ್ಮಪಾಣಿಯವರು Disappoint ಆಗಿರಬಹುದು. ಆದರೆ ಅದಕ್ಕೆ ಅವರು ಸ್ಪಷ್ಟ ಕಾರಣ ಕೊಟ್ಟಿಲ್ಲ. ನಾವು ಅಪೇಕ್ಷೆ ಪಟ್ಟಿದ್ದು ಸಿಗದೇ ಇದ್ದಾಗ ನಿರಾಶೆ ಆಗುವುದು ಸಹಜ. ಇನ್ನು ನಾವು ಏನನ್ನು ಬಯಸುತ್ತೇವೆ ಅಥವಾ ಎಂಥ ಸಾಹಿತ್ಯವನ್ನು ಬಯಸುತ್ತೀವಿ ಅನ್ನುವುದು ನಮ್ಮ ಅನುಭವ, ಜೀವನದ ದೃಷ್ಟಿಕೋನ ಮುಂತಾದ ಅನೇಕ ವಿಷಯಗಳನ್ನು ಅವಲಂಬಿಸಿರುತ್ತದೆ. ಅವುಗಳನ್ನು ಚರ್ಚಿಸದೆ ಮುಂದುವರೆಯುವುದು ಸಮಂಜಸವಲ್ಲ, ಹಾಗೂ ನಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲ ಅನ್ನುವ ಕಾರಣಕ್ಕೆ ಅದನ್ನು ಕಳಪೆ ಎಂದು ಹೆಳಲಾಗುವುದಿಲ್ಲ. ಈ ಮಾತು ಸಾಹಿತ್ಯದಾಚೆಗೂ ಅನ್ವಯಿಸುತ್ತದೆ.
    ಇನ್ನು ತಮ್ಮ ಎರಡನೇ ಸಾಲಿನಲ್ಲಿ ಪದ್ಮಪಾಣಿಯವರು ”ಬಹುಷಃ ನಾವು ಓದುಗರಾಗಿ ಬೆಳೆದಿದ್ದೇವೆ. ಅವರು ಅಲ್ಲಿಯೇ ಇದ್ದಾರೆ ಅನಿಸ್ತು” ಅಂತ ಬರೆದಿದ್ದಾರೆ. ಅಂದರೆ ಪದ್ಮಪಾಣಿ ಯವರಿಗೆ ತಮ್ಮ ಬೆಳವಣಿಗೆಯ ಬಗ್ಗೆಯೇ ಖಚಿತತೆ ಇಲ್ಲ ಅಂತ ತೊರುತ್ತದೆ. (ಗಮನಿಸಿ -ಬಹುಷಃ ನಾವು ಓದುಗರಾಗಿ ಬೆಳೆದಿದ್ದೇವೆ) ಇನ್ನು ಭೈರಪ್ಪನವರ ಬೆಳವಣಿಗೆಯ ಬಗ್ಗೆ ಅವರು ಹೇಗೆ ನಿರ್ಧರಿಸುತ್ತಾರೆ?. ಪದ್ಮಪಾಣಿಯವರ ಮಾತಿನಿಂದ ಇನ್ನೊಂದು ಅರ್ಥವನ್ನೂ ಹೊರಡಿಸಬಹುದು. ಅವರು ತಮ್ಮನ್ನು ಈಗ ಬೆಳೆದಿರುವ ಓದುಗ ಅಂತ ಭಾವಿಸುತ್ತಿರುವ ”ಸಂಭಾವ್ಯತೆ” ಇರುವುದರಿಂದ, ಈ ಮೊದಲು ಅವರು ಓದುಗರಾಗಿ ಪಕ್ವರಾಗಿಲ್ಲದ ಕಾರಣ ಭೈರಪ್ಪನವರ ಈ ಮುಂಚಿನ ಕೃತಿಗಳು ಅವರಿಗೆ ಅದ್ಭುತ ಕೃತಿಗಳಾಗಿ ತೋರಿರಬಹುದು. ಓದುಗರಾಗಿ ಇವರು ಈಗ ಬೆಳೆದಿದ್ದಾರೆ ಅಂದ ಮೇಲೆ ಭೈರಪ್ಪನವರ ಹಳೆಯ ಕೃತಿಗಳು ಉತ್ತಮ ಎಂದು ಹೇಗೆ ಹೆಳುತ್ತಾರೆ.? ಧರ್ಮಶ್ರೀಯಿಂದ ಪ್ರಾರಂಭಿಸಿ ಎಲ್ಲ ಕೃತಿಗಳನ್ನು ಮತ್ತೊಮ್ಮೆ (ಈಗಿನ ಗ್ರಹಿಕೆಯಿಂದ) ಓದಿ ಭೈರಪ್ಪನವರ ಹಳೆಯ ಕೃತಿಗಳು ಶ್ರೇಷ್ಠ , ಈಗಿನದು ಕಳಪೆ ಎಂದು ಹೇಳುತ್ತಿದ್ದಾರೆಯೇ ಅಥವಾ ಹಳೆಯ (ಬೆಳವಣಿಗೆಗೂ ಮುಂಚಿನ ತಮ್ಮ ಅಪಕ್ವ ಮನಸಿನ) ಓದಿನ ಆಧಾರದ ಮೇಲೆಯೇ ಈ ಸರ್ಟಿಫಿಕೆಟ್ ನೀಡಿದ್ದಾರೆಯೇ ಅನ್ನುವುದು ಚರ್ಚೆಯಾಗಬೇಕಲ್ಲವೇ?
    ಹೀಗೆ ಪದ್ಮಪಾಣಿ ಯವರು ಬರೆದ ಎರಡೇ ಎರಡು ಸಾಲುಗಳಲ್ಲಿ ಇಷ್ಟೊಂದು ಕವಲುಗಳನ್ನು ಹುಡುಕಿ ತಪ್ಪು ಕಂಡು ಹಿಡಿಯ ಹೊರಟರೆ ಸಾಕಷ್ಟು ಸಿಗುತ್ತಿವೆ. ಅದೇ ರೀತಿ ”ಕವಲು” ಕಾದಂಬರಿಯಲ್ಲೂ ಸಿಗುತ್ತವೆ. ಆದರೆ ಪ್ರಸಕ್ತ ಸಮಾಜದಲ್ಲಿ ಚಿಗಿತುಕೊಂಡು ಬೆಳೆಯುತ್ತಿರುವ ಹೊಸ ಕವಲನ್ನು ಸಮರ್ಥವಾಗಿ ಭೈರಪ್ಪ ಚಿತ್ರಿಸಿದ್ದಾರೆ.
    ನಮ್ಮೆಲ್ಲರ ಜೀವನದಲ್ಲಿ ಉರುಳಿಹೋದ ವರ್ಷಗಳಲ್ಲಿ ನಾವು ಯಾವುದೋ ಹೊಸ ಹೊಸ ಸಿದ್ಧಾಂತಕ್ಕೆ ಆಕರ್ಷಿತರಾಗಿ ಯಾವುದೋ ಹೊಸ ವಾದವನ್ನು ಬೆಂಬಲಿಸತೊಡಗಿರುತ್ತೆವೆ. ನಮ್ಮ ಆಲೋಚನೆಯ ದಾರಿಯಲ್ಲೂ ಕವಲು ಉಂಟಾಗಿರುತ್ತವೆ. ಆಗಲೂ ಕೂಡ ಎಲ್ಲವೂ ನಮ್ಮ ನೇರಕ್ಕೆ, ನಮ್ಮ ಅನುಕೂಲಕ್ಕೆ ಸರಿಯಾಗಿರಬೇಕೆಂದು. ಎಲ್ಲರೂ ನಮ್ಮ ದಾರಿಯಲ್ಲೇ ಬರಬೇಕು, ನಮ್ಮ ಹಾಗೆಯೇ ಎಲ್ಲರೂ ಯೋಚಿಸಬೇಕು ಎಂದು ಬಯಸುವುದು ಸಹಜ. ಹಾಗಾಗದಿದ್ದಾಗ ನಿರಾಸೆಯಾಗುವುದು ಕೂಡ ಅಷ್ಟೇ ಸಹಜ.

    • Sharadhi

      I agree with the sensible comment from Dattarraj

  10. ಸತೀಶ್ ನಾಯ್ಕ್

    ಹೀಗೆ ವಿಮರ್ಶೆಗಳನ್ನ ಪಡೆದು ಕೊಳ್ತಾ ಇರೋ ಕವಲು.. ತನ್ನನ್ನ ಓದಿಸಿ ಕೊಳ್ಳುವುದರ ಕಡೆ ಆಯಸ್ಕಾಂತದ ಥರ ಎಳಿತಾ ಇರೋದು ಸುಳ್ಳಲ್ಲ. ಭೈರಪ್ಪನವರ ಹೆಚ್ಚಿನ ಬರಹಗಳನ್ನ ನಾನು ಓದಿಲ್ಲವಾದರೂ ಅವರೊಬ್ಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತಗೊಳ್ಳಬಲ್ಲ ಲೇಖಕ ಅನ್ನೋದನ್ನ ಹಲವು ಮಹನೀಯರ ಬಾಯಲ್ಲಿ ಕೇಳಿದ್ದೆ. ಇಲ್ಲಿನ ಅನಿಸಿಕೆಗಳನ್ನ ನೋಡ್ತಿದ್ರೆ ಭೈರಪ್ಪನವರ ಬರಹಗಳ ಬಗ್ಗೆ ಈ ಮೊದಲು ಕೇಳಿದ್ದ ಅನಿಸಿಕೆಗಳಿಗೂ ಈಗ ಇಲ್ಲಿನ ಈ ಕಾದಂಬರಿಯ ಕುರಿತಾದ ಅನಿಸಿಕೆಗಳಿಗೂ ಅಗಾಧ ವೆತ್ಯಾಸವಿದೆ. ಒಮ್ಮೆ ಅವರ ಎಲ್ಲಾ ಪುಸ್ತಕಗಳನ್ನ ಓದಬೇಕಿದೆ.

  11. ಅನ್ನಪೂರ್ಣ

    ಈ ಪದ್ಮಪಾಣಿ ಜೋಡಿದಾರ್ ಕವಲು ಬಗ್ಗೆ ಸುವಿಸ್ತಾರವಾಗಿ ವಿಮರ್ಶಾ ಲೇಖನ ಬರೆದಿದ್ದಾರಾ? ಅಥವಾ ಈ ತರಹದ ಗಿಮಿಕ್ಕು ಹೇಳಿಕೆಗಳನ್ನೂ ಮಾತ್ರ ಕೊಟ್ಟಿದ್ದಾರ?

  12. harish athreya

    ಕವಲು ಮಿ.ಪದ್ಮಪಾಣಿಯವರಿಗೆ ಕವಲು ಏಕೆ ಡಿಸಪಾಯಿ೦ಟ್ ಆಯ್ತು ಅನ್ನೋದನ್ನ ಮೊದಲು ಬರೀಲಿ. ಆಮೇಲೆ ಅದಕ್ಕೆ ಉತ್ತರ ಕೊಡೋಣ. ಇದನ್ನ ದೊಡ್ಡ ಪೋಸ್ಟ್ ಎ೦ಬ೦ತೆ ಏಕೆ ಹಾಕಿದಾರೋ ಗೊತ್ತಿಲ್ಲ. ಕವಲು ಇವತ್ತಿನ ಸತ್ಯ. ಇನ್ನೊಮ್ಮೆ ಪೂರ್ವಾಗ್ರಹ ಪೀಡನೆಯಿಲ್ಲದೆ ಓದಿದರೆ ಒಳಿತು
    ಹರಿ

  13. Aravind

    “ಓದಿದ ಗಂಡಸರೆಲ್ಲ ಹೆಂಗಸರಾಗ್ತಾರೆ. ಓದಿದ ಹೆಂಗಸರೆಲ್ಲ ಗಂಡಸರಾಗ್ತಾರೆ. ಗಂಡಸರು ಗಂಡಸರಾಗಿ ಹೆಂಗಸರು ಹೆಂಗಸರಾಗಿ ಇರಬೇಕಾದರೆ ಯಾರೂ (KAVALU) ಓದಕೂಡದು” 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading