-ನಾಗರಾಜ ಬಿ ನಾಯ್ಕ
ಕೂಡಿಸಿ ಕಳೆ
ಎಳೆಗಳ ಕೂಡಿದರೆ
ಚಿತ್ರ ನೂರಾರು
ಕೂಡಿಸಿ ಕಳೆದು
ಜೋಡಿಸಿದಷ್ಟು
ಬದುಕು ಭಾವ ಚಿತ್ರಗಳು
ಮನಸಿನೊಳಗೆ ಉಳಿದ
ಅವಶೇಷಗಳು ಪಳೆಯುಳಿಕೆಗಳು
ಖಾಲಿ ಇರುವ
ಹಾಳೆಗಳ ಮೇಲೆ
ಬಿಡಿಸಿದಷ್ಟು ಉಳಿದ
ಮುಖ ಪುಟ ಸಂಖ್ಯೆ
ಕೂಡಿಸಿದಾಗ ದ್ವಿಗುಣ
ವೇಗದಲ್ಲಿ ಚಲಿಸುವ
ಚಿತ್ರಗಳು ಮನಸಿನ
ಕಥೆಗಳು ಅವ್ಯಕ್ತ
ಒಮ್ಮೊಮ್ಮೆ ಕಳೆಯುವುದೇ ಹೆಚ್ಚು
ಗೆರೆಯ ಮೇಲೆ ಗೆರೆ
ಉದ್ದದ ಸಾಲಿನ ಬದುಕಿನ ಲೆಕ್ಕ
ಯಾರದೋ ಬಾಕಿ
ನಮ್ಮದೇ ಋಣ
ಎಲ್ಲಾ ಲೆಕ್ಕಾಚಾರ ಮುಗಿದರೆ
ಬದುಕು ಇಷ್ಟೇ ಎನ್ನುವ ಸತ್ಯದ
ಅರಿವಿನ ವಾಸ್ತವದ ಒಳ ತಿರುವಿಗೆ
ಸಾಗುವ ಮೊದಲೇ
ಕಾಲನ ಕರೆಗಂಟೆ
ಕೇಳಿಸುತ್ತದೆ ಚಕ್ರದ ಅಂಚುಗಳ
ಓಟ ಒಂದು ನಡಿಗೆಯಾಗುವ
ಮೊದಲೇ ಅಂಚಿನ
ಸಮೀಪದ ದಾರಿ
ತಾನಾಗೇ ಸವೆದು
ಹೋಗಿರುತ್ತದೆ ನಾವೂ ಕಾಣದಂತೆ.






0 Comments