ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲಿ ಜಾರಿತೋ ಮನವು….

ಮ್ಯಾಂಗೊ ಹೌಸ್

ಅರ್ಪಿಸುವ

‘ಎಲ್ಲಿ ಜಾರಿತೋ ಮನವು’

ನಿರ್ದೇಶನ : ಗಣೇಶ್ ಯಾದವ್

ದಿನಾಂಕ : 6 ಮಾರ್ಚ್ 2013

ಸಂಜೆ : 7ಕ್ಕೆ

ಸ್ಥಳ : ಕೆ.ಹೆಚ್.ಕಲಾಸೌಧ

 

ನಾಟಕದ ಬಗ್ಗೆ:
ಈ ನಾಟಕದಲ್ಲಿ ಹೆಸರಾಂತ ರಂಗಭೂಮಿ, ಟಿವಿ ಮತ್ತು ಸಿನಿಮಾ ಮಾದ್ಯಮ ಕಲಾವಿದರು ಪಾಲ್ಗೊಳ್ಳುತಿದ್ದಾರೆ.  ’ಎಲ್ಲಿ ಜಾರಿತೋ ಮನವು…’ ಎಂಬ ಸುಂದರ ಸಾಲನ್ನು ಕವಿ ಲಕ್ಷ್ಮಿನಾರಾಯಣ ಭಟ್ಟರ ಕವನದಿಂದ ಆಯ್ದುಕೊಳ್ಳಲಾಗಿದೆ. ಈ ನಾಟಕ ಹೆಣ್ಣು ಗಂಡಿನ ಸಂಬಂಧ, ಮದುವೆ ಮತ್ತು ಅದರ ನಂತರದ ಮಾನಸಿಕ ತೊಳಲಾಟ, ಆತೃಪ್ತತೆ ಮತ್ತು ಅಸಂಗತ ಹುಡುಕಾಟದ ಬಗ್ಗೆ ಚರ್ಚೆ ಮಾಡುತ್ತದೆ.
ಕಥೆಯ ಮೂಲ ಪಾತ್ರಗಳೆಂದರೆ ಅನಘ ಮತ್ತು ರವಿ. ಇವರಿಬ್ಬರಿಗೂ ಅವರದೇ ಆದ ಸಂಸಾರವಿರುತ್ತದೆ. ರವಿ ಒಬ್ಬ ಪತ್ರಕರ್ತ, ಕೀರ್ತಿ ಎಂಬುವಳನ್ನು ಪ್ರೀತಿಸಿ ಮದುವೆಯಾಗಿರುತ್ತಾನೆ. ಅನಘ ಸಂಪಾದಕಿ, ಗಿರೀಶ್ ಎಂಬ ಬಿಲ್ಡರ್‌ನನ್ನು ಮದುವೆಯಾಗಿರುತ್ತಾಳೆ.  ರವಿ ಹಾಗು ಅನಘ 2 ವರುಷಗಳಿಂದ ಪ್ರೀತಿಸುತ್ತಿರುತ್ತಾರೆ. ರವಿಗೆ ಅನಘ ಒಬ್ಬ ಸುಂದರ, ಪ್ರೌಡತೆಯುಳ್ಳ ಸೂಕ್ಷ್ಮ ಹೆಣ್ಣು ಅನಿಸುತ್ತಾಳೆ.  ಅನಘಗೆ ರವಿ ಒಬ್ಬ ಆತ್ಮಿಯ, ಬುದ್ದಿವಂತ, ಆಕರ್ಷಣೀಯ ವ್ಯಕ್ತಿಯಾಗಿರುತ್ತಾನೆ. ಅವರಿಬ್ಬರೂ ಪರಸ್ಪರ ಒಬ್ಬರಲ್ಲಿ ಮತ್ತೊಬ್ಬರು ತಮಗೇನು ಬೇಕೊ ಅದನ್ನು ಕಂಡು ಕೊಂಡಿರುತ್ತಾರೆ. ಇದಕ್ಕಿದಂತೆ ಅನಘ ಕನಸಿನಿಂದ ಎಚ್ಚರಗೊಂಡು ಈ ಸಂಬಂಧ ಇನ್ನು ಸಾಕು ಎಂದು ಮುಗಿಸುವ ಪ್ರಯತ್ನಮಾಡುತ್ತಾಳೆ.
ರವಿ, ಅನಘಳ ಈ ದಿಢೀರ್ ನಿರ್ಧಾರದಿಂದ ಕಂಗಲಾಗುತ್ತಾನೆ. ರವಿಗೆ ಅನಘ ದೂರ ಸರಿದಷ್ಟು ಆಕೆಯ ಸಾಮಿಪ್ಯ ಬೇಕೆಂಬ ಹಂಬಲ. ಆಕೆಯ ತಿರಸ್ಕಾರಕ್ಕೆ ಕಾರಣವೇನೆಂಬುದನ್ನು ಹುಡುಕಾಟ ನಡೆಸುತ್ತ ಸಾಗುತ್ತಾನೆ.

ರಂಗದ ಮೇಲೆ : ನಂದಿತ ಯಾದವ್, ಮೈಕೊ ಮಂಜು, ನಾಗೇಶ್ ಯಾದವ್, ಅಲಕ್, ವಿದ್ಯಾ ವೆಂಕಟರಾಮ್.

‍ಲೇಖಕರು avadhi

5 March, 2013

1 Comment

  1. bharathi

    naanu hogthidini ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading