ಎಲ್ಲಿಗೆಲ್ಲಾ ಬಂತು BLF ವಿವಾದ ? ~ ರಾಜೇಂದ್ರ ಪ್ರಸಾದ್ ಖಡಕ್ ಉತ್ತರ

ಇತ್ತೀಚಿಗೆ ಬೆಂಗಳೂರಿನಲ್ಲಿ ಜರುಗಿದ ‘ಬೆಂಗಳೂರು ಲಿಟರೇಚರ್ ಫೆಸ್ಟಿವಲ್’ನಲ್ಲಿ ರಾಜೇಂದ್ರ ಪ್ರಸಾದ್ ಹಾಗೂ ಟೀನಾ ಶಶಿಕಾಂತ್ ಭಾಗವಹಿಸಿದ್ದರು.
‘ಎಲ್ಲಿಗೆ ಬಂತು ನೆಟ್ ಸಾಹಿತ್ಯ? Unveiling the Kannada netizen’s world’ ಕುರಿತ ಗೋಷ್ಠಿಯಲ್ಲಿ ತಮ್ಮ ನೋಟವನ್ನು ಹಂಚಿಕೊಂಡಿದ್ದರು. 
ಬೆಂಗಳೂರು ಲಿಟರೇಚರ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದಕ್ಕಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಬಂದ ಟೀಕೆಗೆ ರಾಜೇಂದ್ರ ಪ್ರಸಾದ್ ಉತ್ತರ ಕೊಟ್ಟಿದ್ದಾರೆ.
ನಿಮ್ಮ ಅಭಿಪ್ರಾಯವನ್ನೂ ಕಳಿಸಿ
[email protected] ಗೆ ಮೇಲ್ ಮಾಡಿ  

-ರಾಜೇಂದ್ರ ಪ್ರಸಾದ್ 
BLF ನಲ್ಲಿ ನಾನು ಮತ್ತು ಟೀನಾ ಭಾಗವಹಿಸಿದ್ದಕ್ಕೆ ಗೆಳೆಯರೊಬ್ಬರು ನೇರವಾಗಿ ಸ್ಪಷ್ಟೀಕರಣ ಕೇಳಿದ್ದರಿಂದ ಅವರಿಗಾಗಿ ಉತ್ತರ.
*BLF ನಲ್ಲಿ ಪ್ರತೀ ವರುಷವೂ ಕನ್ನಡ ಚರ್ಚೆಗಳಿರುತ್ತವೆ. ಮತ್ತು ಅದರಲ್ಲಿ ಎಲ್ಲಾ ರೀತಿಯ ಜನರೂ ಪಾಲ್ಗೊಂಡಿದ್ದಾರೆ.
ಎಡ-ಬಲ-ನಡು ಎಲ್ಲರೂ.. ನಮಗೆ ಮಾತ್ರ ಯಾಕೀ‌ ಪ್ರಶ್ನೆ ?
ಎಂ‌. ಎಂ. ಕಲಬುರ್ಗಿ, ಷ ಶೆಟ್ಟರ್ ಆದಿಯಾಗಿ ನನ್ನ ಹಲವು ಕಿರಿಯ ಗೆಳೆಯರವೆರೆಗೆ ದೊಡ್ಡ ಪಟ್ಟಿಯಿದೆ‌.
* 2015 ರಲ್ಲಿ ಸ್ಥಾಪಕ ಸದಸ್ಯರಾದ ವಿಕ್ರಮ್ ಸಂಪತ್ ಕೊಟ್ಟ ಕೆಟ್ಟ ಹೇಳಿಕೆಯನ್ನು ವಿರೋಧಿಸಿ ಗೆಳೆಯರಾದ ದಯಾನಂದ, ಆರೀಫ್ ರಾಜ ಮತ್ತು ಹಿರಿಯಾದ ಓ ಎಲ್ ನಾಗಭೂಷಣ ಸ್ವಾಮಿ ಭಾಗವಹಿಸದೇ ಪ್ರತಿಭಟಿಸಿದರು. ಅವಾಗ ನಾನೂ ಕೂಡ ಗೆಳೆಯರ ಪರವಾಗಿ ಬರೆದಿದ್ದು ನೆನಪಿದೆ.‌ ಆ ಸಮಯದಲ್ಲೇ ವಿಕ್ರಂ BLF ನಿಂದ ಹೊರಗೆ ಬಂದರು. ಅದು ಎಲ್ಲರಿಗೂ ಗೊತ್ತಿದೆ. ಜೊತೆಗೆ ಆ ಮನುಷ್ಯ ಯಾವುದೋ ಕಾಲೇಜಿಗೆ ಮಾಡಿರುವ ವಂಚನೆಗೂ BLF ಗೂ ನಮಗೂ ಏನು ಸಂಬಂಧ? ಅದು ಅವನ ಸಮಸ್ಯೆ! ನಮ್ಮದಲ್ಲ.
ಸರಿ! ಆ ಮನುಷ್ಯ ಅಲ್ಲಿನ ಚರ್ಚೆಗಳಿಗೆ ಬರುತ್ತಾನೆ ಅಂತ ನಾನ್ಯಾಕೆ‌ ಹೋಗಬಾರದು? ಬಲಪಂಥೀಯ ಸರ್ಕಾರಗಳು ಬಂದುವು ಅಂತ ಉಳಿದ ಜನ ‘ಹರಾಕಿರಿ’ ಮಾಡಿಕೊಳ್ಳಬೇಕೇನು?! ಇಂದೆಂತಹ ಮೌಢ್ಯತೆ!
* BLF ನಲ್ಲಿ ಹಲವು ಐಡಿಯಾಲಾಜಿಗಳಲ್ಲಿ ಗುರುತಿಸಿಕೊಂಡ ಬರಹಗಾರರಿದ್ದಾರೆ. ಅವರೆಲ್ಲ ಪ್ರತಿ ವರ್ಷ ಹಲವು ಬಗೆಯ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ಅಂತಹವನ್ನು ಏರ್ಪಡಿಸುತ್ತಾರೆ.‌ ಇದು ಬಹುತ್ವದ ಮಾದರಿಯಲ್ಲವೇ?
ಲಿಬರಲಿಸಂ ಎನ್ನುವುದು ನಿಷೇಧಗಳ ಕೂಪವಲ್ಲ! ಚರ್ಚೆಗೆ ಎಲ್ಲ ಕಡೆಯು ನಾವು ತೆರೆದುಕೊಳ್ಳಬೇಕಲ್ಲವೇ?

* BLF ನ ಈಗಿನ ನಿರ್ದೇಶಕಿ ‘ಶೈನಿ ಆಂಟನಿ’ ಮತ್ತು ಆಕೆ ಪಕ್ಕಾ ಎಡವಾದಿ ಬರಹಗಾರ್ತಿ ಎಂಬುದು ನಿಮಗೆ ತಿಳಿದಿತ್ತೋ ಅಥವಾ ಬೇಕಂತಲೇ ಬರೀ ವಿಕ್ರಂ ಅಂತ ಜಪ ಮಾಡ್ತಿದ್ದೀರೋ? ಇರುವರು ಮುಖ್ಯವೋ ಎಂದೋ‌ ಹೊರಗೆ ಹೋದವರು ಮುಖ್ಯವೋ ಅಥವಾ ನಿಮ್ಮ ದುನಿರ್ಣಯಗಳು ಮುಖ್ಯವೋ? ಅರ್ಥವಾಗುತ್ತಿಲ್ಲ!
* ನಾವಿಬ್ಬರೂ BLF ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡಲು ಹೋಗಿದ್ದೆವು. ಇಲ್ಲಿಗಲ್ಲ.. ಇದುವೆರೆಗೂ ಎಲ್ಲಡೆಯೂ ನಾನು ಕನ್ನಡ ಸಾಹಿತ್ಯದ ಬಗ್ಗೆಯೇ ಮಾತಾಡಲು, ಕವಿತೆ ಓದಲು ಹೋಗುತ್ತಿರುತ್ತೇನೆ. ಅದರಲ್ಲಿ ಹೊಸದೇನಿದೆ. ಯಾರೋ ಒಬ್ಬ ಬಲಪಂಥದವನು ಅಲ್ಲಿದ್ದ ಮತ್ತು ಅವನ ಪ್ರಭಾವ ಅಲ್ಲಿದೆ ಅಂದ ಮಾತ್ರಕ್ಕೆ ಅಲ್ಲಿಗೆ ಹೋಗಬೇಡಿ, ಮಾತನಾಡಬೇಡಿ ಎಂಬುದು ಯಾವ ‘ಇಸಂ’ ನ ಲಕ್ಷಣ ಚೂರು ನೆನೆಪಿಸಿಕೊಳ್ಳಿ.
* BLF ಎಂಬುದು ವಿಕ್ರಂ ಸಂಪತ್‌ನ ವೈಯುಕ್ತಿಕ ಆಸ್ತಿಯಲ್ಲ, ಅದರ ಭಾಗವಾಗಿ ಯಾರ್ಯಾರು‌ ಇದ್ದಾರೆ ಎಂಬುದನ್ನು ಒಮ್ಮೆ ಹೋಗಿ ಅದರ ವೆಬ್ ಸೈಟ್ ನಲ್ಲಿ ನೋಡಿ.. ಹಾ! ಅವರೆಲ್ಲಾ ಕಾರ್ಪೊರೇಟ್ ಗಳು, ಪ್ಯೂಡಲ್ ಗಳು, ರಾಜಕಾರಣಿಗಳು, ಬ್ರಾಹ್ಮಣರು ಅನ್ನುವುದಾದರೆ ಈ ಪ್ರಶ್ನೆ ಎತ್ತಿದ, ಲೈಕಿಸಿದ, ಹಂಚಿದ ಗೆಳೆಯರು ಇಷ್ಟು ವರ್ಷ ಎಲ್ಲಿದ್ದರು, ಯಾರ ಜೊತೆಯಾಗಿ ಕೆಲಸ ಮಾಡಿದ್ದರು ಅನ್ನುವುದನ್ನ ನೆನೆಪಿಸಿಕೊಳ್ಳಲಿ ಸಾಕು. ನಾವು ಒಂದು ಸಂಕೀರ್ಣ ವ್ಯವಸ್ಥೆಯೊಳಗೆ ಬದುಕುತ್ತಿದ್ದೇವೆ.
* ವೈದಿಕ ಹುನ್ನಾರ, ಕಾರ್ಪೋರೆಟ್ ಸಂಚು ಇತ್ಯಾದಿಗಳು ಎಲ್ಲಿ ಇಲ್ಲ ಹೇಳಿ? ಅವುಗಳ ನಡುವೆಯೇ ಇದ್ದು ನಮ್ಮ ಪ್ರತಿರೋಧ ತೋರದೇ ಅಡಗಿಕೊಳ್ಳುವುದು ದೂರ ಸರಿಯುವುದು ಮಾಡಿದರೇ ಅದು ಹೇಡಿತನದ ಲಕ್ಷಣ. ಅಂತಹ ಹೇಡಿತನ‌ ನಂಗಿಲ್ಲ. ಈ ಹುನ್ನಾರಗಳಿರುವ ಎಲ್ಲ ಕಡೆಯೂ ನಾನು ಹೋರಾಟ ಮಾಡುತ್ತೇನೆ. ‌ನನಗೆ ನಿಮ್ಮ ಹೊಗಳಿಕೆ/ತೆಗಳಿಕೆಗಳ ಹಂಗು ಬೇಕಾಗಿಲ್ಲ.

* ಇನ್ನು ಅವಕಾಶಕ್ಕಾಗಿ ಅಲ್ಲಿ ಸಲ್ಲುವುದು ಇಲ್ಲಿಸುವುದು ಅಂದಿದ್ದಾರೆ.. ದಯವಿಟ್ಟು ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲು ಹೇಳಿ ಬಲಪಂಥ ಮತ್ತು ಬ್ರಾಹ್ಮಣರ ಜೊತೆ ಕೆಲಸ ಮಾಡಿದ್ದು ಅವರುಗಳೇ ಪರಂತು ನಾನಲ್ಲ. ಯಾರೊಬ್ಬರ ಬಳಿ ಯಾವುದಕ್ಕೂ ಹೋದವನಲ್ಲ, ಕೇಳಿದವನಲ್ಲ.. ಇಪ್ಪತ್ತು ವರುಷಗಳ ಕಾವ್ಯ ಜೀವನದಲ್ಲಿ ಕನ್ನಡದ ಯಾವುದೊಂದೂ ಸುದ್ದಿ ಪತ್ರಿಕೆಯೂ ನನ್ನ ಕವಿತೆ ಪ್ರಕಟಿಸಲಿಲ್ಲ.. ಹಾ! ಈ ಪ್ರಶ್ನೆ ಎತ್ತಿದ ಗೆಳೆಯರೇ ಒಂದೇ ಒಂದು ಸಲ ಒಂದು ಪದ್ಯವನ್ನು ಕನ್ನಡಪ್ರಭದಲ್ಲಿ ಪ್ರಕಟಿಸಿದ್ದರು.. ಅವರ ಕೊರಳು ಪಟ್ಟಿ ಹಿಡಿದು ಕೇಳಿ ರಾಜೇಂದ್ರ ಪ್ರಕಟಿಸಿ ಎಂದು ನಿಮಗೆ ಕವಿತೆ ಕಳಿಸಿ ಪೀಡಿಸಿದ್ದನೋ ಅಥವಾ ನೀವೆ ಕೇಳಿ ಪಡಿದಿರೋ ಎಂದು.. ಅವಕಾಶವಂತೆ ಅವಕಾಶ ನಾಚಿಕೆಗೇಡಿನತನ ಅವಕಾಶ.
ಎಷ್ಟು ಅಕಾಡೆಮಿ ಬಹುಮಾನ, ಸದಸ್ಯತ್ವ, ಪ್ರಶಸ್ತಿ, ಪುರಸ್ಕಾರ ಬಂದಿವೆ ಕೇಳಿರಿ.. ಹಾಳಾಗಿ ಹೋಗಲಿ ಎಷ್ಟು ಜನ ನನ್ನ ಕಾವ್ಯದ ಕುರಿತು ವಿಮರ್ಶೆ ಬರೆದು ಪ್ರಚಾರ ಮಾಡಿದ್ದಾರೆ ಜಾಡಿಸಿ‌ ಕೇಳಿರಿ.. ಅವಕಾಶ ಗಿಟ್ಟಿಸಿ ಏನು ಆಗಿದೆ ಅಂತ.
* ನನ್ನನ್ನು ಬೆಳಿಸಿದ್ದು ‘ಕಾವ್ಯವೇ’ ಹೊರತು ಮತ್ತೇನೂ ಇಲ್ಲ. ಅದನ್ನು ಬೆಂಬಲಿಸಿದವರು ಜನರೇ ಹೊರತು ಸರ್ಕಾರವಲ್ಲ, ಕಾರ್ಪೋರೆಟ್ ಅಲ್ಲ ಕಡೆಗೆ ನಿಮ್ಮ‌ ಗೆಳೆಯ ವಿದ್ವನ್ಮಣಿಗಳಂತೂ ಖಂಡಿತಾ ಅಲ್ಲವೇ ಅಲ್ಲ.
* ಕಡೆಗೂ ಹಿಂದುಳಿದ ವರ್ಗದ, ಗ್ರಾಮೀಣ ಭಾಗದ ನಾವು ಈ ನಗರಗಳ ಪಟ್ಟಭದ್ರ ಸಾಹಿತ್ಯ ಬಳಗದ ಹತ್ತಿರ ಹೋಗಲು ಆಗುವುದಿಲ್ಲ, ಅಥವಾ ಬೇರೆ ಕಡೆ ಹೋಗಿ ಮಾತನಾಡಲಿಕ್ಕೂ ನೀವು ಬಿಡಲ್ಲ. ಅಂದರೆ ನಿಮ್ಮ ಸ್ಪಷ್ಟ ಉದ್ದೇಶ ನಮ್ಮಂತವರು ಏನೊ ಬರೆದುಕೊಂಡು ಇದ್ದಲ್ಲಿಯೇ ದೂರದಲ್ಲಿ ಇರಬೇಕು ಅಂತಷ್ಟೇ!
ಕಡೆಯ ಮಾತು..
ನಾನು‌ ನಂಬಿರುವ ನಂಬುಗೆ, ಒಲುಮೆ, ಕಾವ್ಯ-ಕನ್ನಡದ ‌ಬಗ್ಗೆ ಮಾತಾಡಲು ನಾನು ಎಲ್ಲೆಡೆಯೂ ಹೋಗುತ್ತೇನೆ, ಅದಕ್ಕೆ ನನ್ನ ಆತ್ಮ ಪ್ರಜ್ಞೆ ಒಪ್ಪಬೇಕಷ್ಟೇ.. ಉಳಿದದ್ದು ಅನಾವಶ್ಯಕ.

ಈ ಲೇಖನ ಮೊದಲು ರಾಜೇಂದ್ರ ಪ್ರಸಾದ್ ಅವರ ಫೇಸ್ ಬುಕ್ ವಾಲ್ ನಲ್ಲಿ ಪ್ರಕಟವಾಗಿದೆ 
ಲೇಖಕರ ಅನುಮತಿಯೊಂದಿಗೆ ಇಲ್ಲಿ ಮತ್ತೆ ಪ್ರಕಟಿಸಲಾಗಿದೆ

‍ಲೇಖಕರು avadhi

November 11, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: