`ಎಲ್ಲರೊಳಗೂ ಒಂದೆ ಕತೆ ಇರುತ್ತದೆ’ ಎಂದಿದ್ದರು ಹಿಂದೊಮ್ಮೆ ಖ್ಯಾತ ಕತೆಗಾರ ಯಶವಂತ ಚಿತ್ತಾಲ. `ಅಮ್ಮಾ ಇವತ್ತು ಶಾಲೆಯಲ್ಲಿ ಏನಾಯ್ತು ಗೊತ್ತಾ’ ಎಂದು ಹೇಳುತ್ತಾ ಶಾಲೆಯಿಂದ ಕಣ್ಣರಳಿಸಿಕೊಂಡು ಓಡಿ ಬರುವ ಮಗುವಿನಲ್ಲೂ ಒಂದು ಕತೆ ಇರುತ್ತದೆ ಎಂದು ಅವರು ಒಂದು ಸಲ ಹೇಳಿದ್ದರು.
ಕತೆ ಯಾರಲ್ಲೂ ಇರಬಹುದು. ಅಂಥ ಕತೆಗಳನ್ನು ಆಗಾಗ ನೀಡುವ ಪ್ರಯತ್ನವನ್ನು `ಕಳ್ಳಕುಳ್ಳ’ ಮಾಡಲಿದೆ. ಒಂದಿಷ್ಟು ರೀಮೇಕ್, ಒಂದಿಷ್ಟು ಸ್ವಮೇಕ್ ಕತೆಗಳು ಹಾಗೇ ಹರಿದು ಬರಲಿವೆ ಈ ಬ್ಲಾಗಂಗಡಿಯಲ್ಲಿ. ಆ ಮಾಲಿಕೆಯ ಮೊದಲ ಕತೆಯ ಹೆಸರು: ಗುರುವಿನ ಗುಲಾಮನಾಗುವ ತನಕ.

ಸಂಪೂರ್ಣ ಓದಿಗೆ ಭೇಟಿ ಕೊಡಿ : ಕಳ್ಳ ಕುಳ್ಳ
+++
ಇಂದಿಗೂ ಕೆಲವರಿಗೆ ಕೆಲವು ಹೆಸರುಗಳು ಏಕೆ ಬಂತೆಂದು ಗೊತ್ತೇ ಇರುವುದಿಲ್ಲ.
“ಬಾಯ್ಲರ್ ಕೋಳಿ ಹಾಕಿದ ಮೇಲೆ ಚೆನ್ನಾಗಿ ದುಡ್ಡು ಮಾಡ್ತಿದ್ದೀನಿ ಸಾರ್. ನಾಟಿ ಕೋಳಿ ಏನೂ ಪ್ರಯೋಜನ ಇಲ್ಲ” ಎಂದು ಒಬ್ಬ ಕೋಳಿ ಸಾಕುವವನು ಹೇಳಿದ. ನಾನು ಇದೆಂಥದು ಬಾಯ್ಲರ್ ಕೋಳಿ ಎಂದು ಚಕಿತನಾಗದೇ ಇರಲು ಸಾಧ್ಯವೇ ಇಲ್ಲ. ಕೋಳಿಯನ್ನು ಬಾಯ್ಲರಿನಲ್ಲಿ ಹಾಕಿ ಬೇಯಿಸಿ ನಂತರ ಬೆಂದ ಕೋಳಿಯನ್ನು ಮಾರುವುದೇ ಎಂಬುವಷ್ಟರ ಮಟ್ಟಿಗೆ ಯೋಚಿಸಿದೆ. ಆದರೆ ನಂತರ ಪಿ.ಯು.ಸಿ. ಪಠ್ಯಪುಸ್ತಕವನ್ನು ತಿರುವಿಹಾಕಿದಾಗ ಗೊತ್ತಾಯಿತು ಆತ ಹೇಳ ಬಯಸುತ್ತಿದ್ದುದು “ಬ್ರಾಯ್ಲರ್ ಕೋಳಿ” ಎಂಬ ಜಾತಿಯ ಕೋಳಿಯ ಬಗ್ಗೆ ಎಂದು.
ಸಂಪೂರ್ಣ ಓದಿಗೆ ಭೇಟಿ ಕೊಡಿ : ಮೋಟುಗೋಡೆಯಾಚೆ ಇಣುಕಿ

0 Comments