ಎರಡು ಚೂರು ಕಥೆಗಳು..
– ಗವಿಸಿದ್ಧ ಹೊಸಮನಿ
ಬೆಲೆ ಧರ್ಮಕ್ಕೂ ಇದೆ!
ಆತ ಆ ಧರ್ಮದ ಪರಮ ಸೇವಕ, ಅವತ್ತು ಆ ದಾರಿಯಲ್ಲಿ ಹೊರಟಿದ್ದಾಗ “ಎಪ್ಪಾ ಧರ್ಮ ಮಾಡಿ, ಧರ್ಮ ತಗೊಳ್ಳಿ, ಧರ್ಮ ಕಾಪಾಡಿ ಎಪ್ಪಾ” ಅನ್ನುತ್ತ ತನ್ನ ಕಂಕುಳಲ್ಲಿ ಮಗುವನ್ನು ಹೊತ್ತುಕೊಂಡಿದ್ದ ಅವಳು ಆತನ ಬೆನ್ನು ಬಿದ್ದು ಭೀಕ್ಷೆ ಯಾಚಿಸಿದಳು. ಆತ ತನ್ನ ಇಟೂದ್ದದ ಮೂಗು ಊದಿಸಿಕೊಂಡು, ತನ್ನ ಕ್ಯಾವಿ ಧಿರಿಸಿನ ಗಂಟಿನಿಂದ ಚೂರು ನಾಣ್ಯವೊಂದನ್ನು ತೆಗೆದು ಅವಳ ಕೈಗಿತ್ತು ಮುಂದಡಿ ಇಟ್ಟ.
ಗಡಿ ಎಲ್ಲಿದೆ..?
ಸಣ್ಣ ರೈಲ್ವೆ ಹಳಿಯೊಂದರಿಂದ ಈ ಊರು ಮತ್ತು ಆ ಊರು ಬೆಸೆದುಕೊಂಡಿದ್ದರೂ ಈ ಊರೊಂದರ ಆತ ತಮ್ಮೂರು ಅಲ್ಲಿಗೆ ಸೇರಲೇಬೇಕೆಂದು ಆ ಊರಿನವರ ವಿರುದ್ಧ ನಿತ್ಯ ಝಂಡಾ ಹಿಡಿಯುತ್ತಲೇ ಇದ್ದ. ಇದ್ದಕ್ಕಿದ್ದಂತೆ ಒಂದು ದಿನ ರೈಲ್ವೆ ಹಳಿಯು ತುಂಡಾಗಿ ಈ ಊರಿನ ಗಭರ್ಿಣಿಗೆ ರಕ್ತಸ್ರಾವವಾಯಿತು. ಆ ಊರಿನ ಮಹಿಳೆಯು ಈ ಊರಿನ ಅವಳ ರಗುತ ಮೆತ್ತಿದ ಎಳೆಯ ಕಂದಮ್ಮಳ ಬಾಯಿಗೆ ತನ್ನ ಮೊಲೆತೊಟ್ಟಿಟ್ಟು ನೀರು ಗುಟುಕರಿಸಿದಳು.







0 Comments