ಎದೆ ತುಳಿದು ಹೋದ ಹಳೆಯ ಗೆಳತಿಯ ನೆನಪಿನಂತೆ..

chandrashekhara aijoor

ಚಂದ್ರಶೇಖರ ಐಜೂರು 

ಇದು ನನ್ನೂರು ರಾಮನಗರ.

ಒಂದು ಕಾಲದಲ್ಲಿ ನನ್ನ ಎಲ್ಲ ಸೋಲಿಗೂ ಹತಾಶೆಗೂ ಈ ಊರೇ ಕಾರಣ ಎಂದು ಈ ಊರನ್ನು ಶಪಿಸುತ್ತಾ ಬೈಕೊಂಡು ಓಡಾಡಿಕೊಂಡಿದ್ದವನು ನಾನು. ಬೆಂಗಳೂರಿಗೆ ಕೇವಲ ಐವತ್ತು ಕಿಲೋ ಮೀಟರುಗಳಷ್ಟು ದೂರವಿದ್ದರೂ ನನ್ನೂರು ಇನ್ನು ಬೆಂಗಳೂರಿನ ಯಾವ ಕಾಯಿಲೆಗೂ ತುತ್ತಾದಂತೆ ಕಾಣುತ್ತಿಲ್ಲ ಎಂದು ಗಟ್ಟಿಯಾಗಿ ಹೇಳಬೇಕೆನ್ನಿಸಿದರೂ ಮುಂದೊಮ್ಮೆ ಬೆಂಗಳೂರಿನ ಎಲ್ಲ ನಾಜೂಕುತನದ ರೋಗಗಳು ಇಲ್ಲಿಗೂ ಬಡಿಯಬಹುದು ಎಂಬ ಗುಮಾನಿ ಮೂಡುತ್ತಿದೆ.

ಯಾವುದೋ ದೂರದ ಊರಲ್ಲಿದ್ದಾಗ ಇನ್ಯಾವುದೋ ಊರಿನ ಜನಜಂಗುಳಿಯಲ್ಲಿ ಕರಗಿಹೋಗಿರುವಾಗ ಈ ಊರು ಎದೆ ತುಳಿದು ಹೋದ ಹಳೆಯ ಗೆಳತಿಯ ನೆನಪಿನಂತೆ ಕಾಡುತ್ತದೆ, ಕೊಲ್ಲುತ್ತದೆ. ನೀವೊಮ್ಮೆ www.wikimapia.comನ ಕದ ಬಡಿದರೆ ಸಾಕು ನನ್ನೂರು ಯಾವುದೇ ವೈಯ್ಯಾರವಿಲ್ಲದೆ ತೆರೆದುಕೊಳ್ಳುತ್ತದೆ.

ತನ್ನ ವಯಸ್ಸನ್ನು ಮರೆಮಾಚಲು ಬ್ಯೂಟಿಪಾರ್ಲರ್ ಹೊಕ್ಕಿಬಂದ ಮುದಿ ಹೆಂಗಸಿನಂತೆ ಮಾತ್ರ ನನ್ನೂರು ಯಾವತ್ತೂ ಕಾಣುವುದಿಲ್ಲ.

ramanagara aijoor3

ramanagara aijoor2

ramanagara aijoor4

ramanagara aijoor5

 

 

‍ಲೇಖಕರು admin

November 27, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. M R kamala

    ನೀನು ಓದಿದ ಶಾಲೆಯ ಅಥವಾ ಕಾಲೇಜಿನ ಭಾವಚಿತ್ರವೊಂದು ಇದರಲ್ಲಿ ಇರಬೇಕಿತ್ತು. ನಿನ್ನ ಶಿಕ್ಷಕಿಯಾಗಿ ನನ್ನ ಅನಿಸಿಕೆ ಚಂದ್ರು-ಎಂ.ಆರ್. ಕಮಲ

    ಪ್ರತಿಕ್ರಿಯೆ
  2. ಸುಧಾ ಚಿದಾನಂದಗೌಡ

    ತನ್ನ ವಯಸ್ಸನ್ನು ಮರೆಮಾಚಲು ಬ್ಯೂಟಿಪಾರ್ಲರ್ ಹೊಕ್ಕಿಬಂದ ಮುದಿ ಹೆಂಗಸಿನಂತೆ ..
    ತುಂಬ ಸಾಂದ್ರವಾಗಿದೆ ಈ ಮಾತು ಮತ್ತು ಭಾವ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: