ಈ ಕಾದಂಬರಿಯನ್ನು ಅಂಕಿತ ಪ್ರಕಟಿಸಿದೆ. ಈ ಭಾನುವಾರ ಬಿಡುಗಡೆ.
೨೦೦೯ರಲ್ಲಿ ಇಂಡಿಯಾ ಟುಡೆ ವಾರಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಅತ್ಯುತ್ತಮ ಪುಸ್ತಕ ಎಂಬ ಹೆಗ್ಗಳಿಕೆ ಎಣ್ಮಕಜೆಗೆಯದಾಗಿತ್ತು. ಹತ್ತು ಮಂದಿ ಖ್ಯಾತ ಮಲೆಯಾಳಿ ವಿಮರ್ಶಕರಿಂದ ಈ ಆಯ್ಕೆ. ವರ್ತಮಾನ ಡೈಲಿಯ ಪ್ರಕಾರ ಅತ್ಯುತ್ತಮ ಪುಸ್ತಕ. ವಿವಿಧ ಸಮೀಕ್ಷೆಗಳಲ್ಲಿ ಟಾಪ್‌ಟೆನ್ ಸ್ಥಾನ ಪಡೆದ ಕೃತಿಯಿದು. ಮಹಾತ್ಮಾ ಗಾಂಧಿ ವಿ.ವಿ. ಮತ್ತು ಕೇರಳ ವಿ.ವಿ.ಯಲ್ಲಿ ಪಠ್ಯಪುಸ್ತಕವಾಗಿ ಆಯ್ಕೆ. ಕನ್ನಡದ ಹೊರತಾಗಿ ತಮಿಳು, ಹಿಂದಿ, ಇಸ್ರೇಲಿ ಭಾಷೆಗಳಿಗೆ ಅನುವಾದ ನಡೆಯುತ್ತಿದೆ. ಅತ್ಯಧಿಕ ಮಾರಾಟಗೊಂಡ ಡಿ.ಸಿ. ಪ್ರಕಾಶನದ ಪುಸ್ತಕ.
ಅತ್ಯಂತ ಕಡಿಮೆ ಸಮಯದಲ್ಲೇ ಎಂಟು ಕಡೆಗಳಲ್ಲಿ ಪುಸ್ತಕದ ಕುರಿತಾದ ಸಂವಾದ. ಕನ್ನಡ, ತುಳು, ಮಲಯಾಳ ಸಂಸ್ಕೃತಿಗಳ ಸಮ್ಮಿಲನ ಎಣ್ಮಕಜೆಯ ವೈಶಿಷ್ಟ್ಯ. ಮಾಜಿ ಪತ್ರತರ್ಕ, ಅತ್ಯುತ್ತಮ ಬರಹಗಾರ, ಹಾಲಿ ಮಂಜೇಶ್ವರದಲ್ಲಿರುವ ರಾಷ್ಟ್ರ ಕವಿ ಗೋವಿಂದ ಪೈ ಕಾಲೇಜಿನಲ್ಲಿ ಉಪನ್ಯಾಸಕನಾಗಿರುವ ಬಾಲಕೃಷ್ಣ ಹೊಸಂಗಡಿ ಅವರು ಎಣ್ಮಕಜೆಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಹೆಚ್ಹಿನ ಓದಿಗಾಗಿ : ಓದುಬಜಾರ್ ]]>
ಎಣ್ಮಕಜೆ: ಟಾಪ್‌ಟೆನ್ ಸ್ಥಾನ ಪಡೆದ ಕೃತಿಯಿದು
ನಿಮಗೆ ಇವೂ ಇಷ್ಟವಾಗಬಹುದು…





0 Comments