ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ವಿ ಸಾವಿತ್ರಮ್ಮ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ..

ಕರ್ನಾಟಕ ಲೇಖಕಿಯರ ಸಂಘ’ ಕೊಡಮಾಡುವ ಹಿರಿಯ ಲೇಖಕಿ ಎಚ್.ವಿ. ಸಾವಿತ್ರಮ್ಮ ದತ್ತಿ ಪ್ರಶಸ್ತಿಗೆ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ.

**

ಪ್ರಶಸ್ತಿಯ ವಿವರಗಳು: 2020 ನೇ ಸಾಲಿಗೆ ಕಥಾ ಸಂಕಲನ, 2021ನೇ ಸಾಲಿಗೆ ಅನುವಾದ ಸಾಹಿತ್ಯ (ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರಬೇಕು), 2022ನೇ ಸಾಲಿಗೆ ಕಾದಂಬರಿ ಹಾಗೂ 2023ನೇ ಸಾಲಿಗೆ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಆಯಾ ಪ್ರಕಾರಗಳಲ್ಲಿ ಮೂರು ಪ್ರತಿಗಳನ್ನು ಕಡ್ಡಾಯವಾಗಿ ಕಳುಹಿಸುವುದು ಅಗತ್ಯ. ಕೃತಿಗಳನ್ನು ದಿ. 25. 06. 2024ರ ಒಳಗೆ ಕಳುಹಿಸಲು ಸೂಚಿಸಿದೆ. ಲೇಖಕಿಯರ ಪರವಾಗಿ ಪ್ರಕಾಶಕರೂ ಕೃತಿಗಳನ್ನುಕಳಿಸಬಹುದು. ಲೇಖಕಿಯರ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಕಳಿಸಬೇಕು.

ಕನ್ನಡದ ಮಹತ್ವದ ಬರಹಗಾರರಾದ ಎಚ್. ವಿ. ಸಾವಿತ್ರಮ್ಮನವರು ಉತ್ತಮ ಅನುವಾದಕರು ಹಾಗೂ ಕಥೆಗಾರರಾಗಿದ್ದು, ಅವರ ಹೆಸರಿನ ದತ್ತಿ ಪ್ರಶಸ್ತಿಯನ್ನು ಕರ್ನಾಟಕ ಲೇಖಕಿಯರ ಸಂಘದಲ್ಲಿ ಸ್ಥಾಪಿಸಲಾಗಿದೆ. ಪ್ರಶಸ್ತಿಯು 25000 ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ ಎಂದು ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಈಗಾಗಲೇ ಎಚ್.ವಿ. ಸಾವಿತ್ರಮ್ಮ ಪ್ರಶಸ್ತಿ ಮತ್ತು ಅನುಪಮಾ ಪ್ರಶಸ್ತಿಗಳನ್ನು ಪಡೆದವರು ಇದರಲ್ಲಿ ಭಾಗವಹಿಸುವಂತಿಲ್ಲ.”

ಕೃತಿಗಳು ತಲುಪಬೇಕಾದ ವಿಳಾಸ: ಕರ್ನಾಟಕ ಲೇಖಕಿಯರ ಸಂಘ (ರಿ) ಬೆಂಗಳೂರು, 206, 2ನೇ ಮಹಡಿ, ವಿಜಯ ಮ್ಯಾನ್ ಶನ್, 2ನೇ ತಿರುವು, 2ನೇ ಮುಖ್ಯರಸ್ತೆ, ಚಾಮರಾಜಪೇಟೆ ಬೆಂಗಳೂರು -560018 ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ- ಡಾ. ಎಚ್. ಎಲ್. ಪುಷ್ಪ (9480051222) ಅಧ್ಯಕ್ಷರು. ಭಾರತಿ ಹೆಗಡೆ (8073765665) ಕಾರ್ಯದರ್ಶಿ ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು.

‍ಲೇಖಕರು Admin MM

13 June, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading