ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಎನ್ ಆರತಿಗೆ ಪ್ರತಿಷ್ಟಿತ ’ಲಾಡ್ಲೀ ಪ್ರಶಸ್ತಿ’

ಲೈಂಗಿಕ ಅಲ್ಪಸಂಖ್ಯಾತರ ಕುರಿತು ಎಚ್ ಎನ್ ಆರತಿ ಅವರು ನಿರ್ಮಿಸಿ, ನಿರ್ದೇಶಿಸಿದ “ನಡುವೆ ಸುಳಿವಾತ್ಮ…” ಕಾರ್ಯಕ್ರಮಕ್ಕೆ

Laadli Media & Advertising Award ದೊರೆತಿದೆ


ಕನ್ನಡ ಭಾಷೆಯ ವಿದ್ಯುನ್ಮಾನ ವಿಭಾಗದಲ್ಲಿ ಅವರಿಗೆ ಈ ಪ್ರಶಸ್ತಿ ಸಂದಿದೆ.

LGBT – ಈ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಹೋರಾಟ ಮತ್ತು ಹಕ್ಕುಗಳಿಗೆ ಆರತಿ ತಮ್ಮ ಪ್ರಶಸ್ತಿಯನ್ನು ಸಮರ್ಪಿಸಿದ್ದಾರೆ…

LGBT ವಿರುದ್ಧ ಅಸಹನೆ, ಕ್ರೌರ್ಯ ಹಾಗೂ ಕುಹಕಗಳಿಂದ ಮುಕ್ತವಾದ ಸಮಾಜದ ಕನಸನ್ನು ಕಾಣುತ್ತಾ, ಅವಮಾನದ ನೋವನ್ನು ಉಂಡ ರೇವತಿ ಹಾಗೂ ಸುಮತಿ ಈ ಸೃಜನಾತ್ಮಕ ಚೈತನ್ಯದ ಪ್ರೀತಿಯ ಸ್ನೇಹಿತೆಯರು, ತಮ್ಮ ದುಗುಡ, ತಳಮಳ, ನೋವುಗಳನ್ನು ಈ ಕಾರ್ಯಕ್ರಮದಲ್ಲಿ ಮುಕ್ತವಾಗಿ ತೆರೆದಿಟ್ಟಿದ್ದಾರೆ.
“ಥಟ್ ಅಂತ ಹೇಳಿ” ವಿಶೇಷ ಕಾರ್ಯಕ್ರಮದ ಸರಣಿಯಲ್ಲಿ “ನಡುವೆ ಸುಳಿವಾತ್ಮ”ವನ್ನು ನಿರ್ಮಿಸಲಾಗಿತ್ತು…
ನಿನ್ನೆ ವಿಶಾಖಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ಆರತಿಗೆ ’ಅವಧಿ’ಯ ಅಭಿನಂದನೆಗಳು

‍ಲೇಖಕರು G

11 March, 2015

8 Comments

  1. C. N. Ramachandran

    ಶ್ರೀಮತಿ ಆರತಿ ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು. ಅವರಿಗೆ ಈ ಪ್ರತಿಷ್ಠಿತ ಪುರಸ್ಕಾರ ದೊರಕಿರುವುದು ತಿಳಿದು ತುಂಬಾ ಸಂತೋಷವಾಯಿತು. ಸಿ.ಎನ್. ರಾಮಚಂದ್ರನ್

  2. siraj bisaralli

    ಅಭಿನಂದನೆಗಳು…

  3. Gubbachchi Sathish

    Madam, Congratulations.

  4. Uma Rao

    Tumba khushiyaytu arati!

  5. yash

    ಅಭಿನಂದನೆ

  6. vasudeva nadig

    abhinandanegalhu…maadhyama galhu TRP nalle kalhedu hogadhe, saamajika baddhateyannu nenapisuva intha karyakramaglhu abhnandanarha

  7. ಲಲಿತಾ ಸಿದ್ಧಬಸವಯ್ಯ

    ಆರತಿಯವರಿಗೆ ಮನಪೂರ್ವಕ ಅಭಿನಂದನೆಗಳು, ಯಾಂತ್ರಿಕವಾಗುವ ಅಂಚಿಗೆ ತಲುಪುತ್ತಿದ್ದ “ಥಟ್” ಕಾರ್ಯಕ್ರಮಕ್ಕೆ ನೀವು ಕಾಯಕಲ್ಪ ಮಾಡಿದಿರಿ, ಬಹುಶಹ ಸರ್ಕಾರಿ ಉಸ್ತುವಾರಿನ ಚಾನಲ್ ಒಂದರಲ್ಲಿ ಇಷ್ಟು ಧೀರ್ಘಕಾಲ ಬಹುಜನಪ್ರಿಯತೆಯನ್ನು ಉಳಿಸಿಕೊಂಡು ಮುಂದುವರೆಯುತ್ತಿರುವ ಕಾರ್ಯಕ್ರಮ ಭಾರತದಲ್ಲೆ ಇದು ಮೊದಲೇನೋ, ಇದೊಂದು ಕನ್ನಡದ ದಾಖಲೆ, ಇದರ ಹಿಂದೆ ಆರತಿಯವರ ಕಲ್ಪನಾಶಕ್ತಿ, ಶ್ರಮ, ಹೊಸದರ ತುಡಿತ, ಇರುವುದರಲ್ಲೆ ಭಿನ್ನವಾದೊಂದನ್ನು ಮಾಡುವ ಉತ್ಸಾಹ ಅಡಗಿವೆ ಎಂಬುದು ನನ್ನ ತಿಳುವಳಿಕೆ.

  8. Rupa Hasana

    Abhinandanegalu Arthi…
    Rupa

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading