ಎಂ ಎಸ್ ರುದ್ರೇಶ್ವರ ಸ್ವಾಮಿ
ಕಳೆದ ವಾರ ಡಾ. ನಾ. ಮೊಗಸಾಲೆ ಅವರ ಹಸ್ತಾಕ್ಷರಗಳಿರುವ ಎರಡು ಗೌರವ ಪ್ರತಿಗಳು ಅಂಚೆ ಮೂಲಕ ತಲುಪಿದವು. ಪ್ರೀತಿಯಿಂದ ಕಳುಹಿಸಿರುವ ಈ ಪುಸ್ತಕಗಳನ್ನು ಓದಬೇಕು. ‘ಪೂರ್ವೋತ್ತರ’ ದಿಂದ ಈ ಕವನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ:
ಮಳೆಗಾಲ ಮತ್ತು ಬೇಸಗೆಕಾಲ
ಮಳೆಗಾಲ ಅಂದರೆ ಗದ್ಯದ ಹಾಗೆ
ಅನ್ನುವ ಇವಳನ್ನು
ನಾನು ಮಳೆ ಎನ್ನುತ್ತೇನೆ
ಬೇಸಗೆ ಅಂದರೆ ಕಾವ್ಯ
ಎನ್ನುವ ನನ್ನನ್ನು
ಇವಳು ಕವಿ ಎಂದುಕೊಂಡಿದ್ದಾಳೆ

ಮಳೆ ನನಗೆ ಇಷ್ಟ
ಅದು ತಾಯಿಯಾಗಿರುವುದಕ್ಕೆ
ಇವಳಿಗೆ ಬೇಸಗೆ ಇಷ್ಟ
ಅದರಲ್ಲಿ ತಂದೆ ಇರಬಹುದೆಂಬಂತೆ
ನಮ್ಮ ನಡುವೆ ಇರುವ ಭೂಮಿ
ಮರಗಿಡಬಳ್ಳಿ
ಕಡಲು ಆಕಾಶ ಎಲ್ಲವೂ
ಬರಲೊಲ್ಲವು ಬೇರೆ ರೂಪಕಕ್ಕೆ
ಇರುವವು ತಾವಿದ್ದಲ್ಲಿ ತಾವು ಆಗಿರುತ್ತವೆ
ಎಂದುಕೊಂಡಂತೆ
ಮಳೆಗಾಲ ಮತ್ತು ಬೇಸಗೆಕಾಲ
ಎರಡೂ ತರ್ಕಕ್ಕೆ ಹೀಗೆ
ಬರುವುದರಿಂದ
ಒಪ್ಪಿಕೊಂಡು ಒಂದು ಇನ್ನೊಂದನ್ನು
ಆಟವಾಡಿಸುತ್ತಿರುತ್ತದೆ
ಮುದ್ದಾದ ಮಗುವನ್ನು ಚಳಿಗಾಲದಲ್ಲಿ
ಅಪ್ಪಿ.






ಡಾ. ನಾ. ಮೊಗಸಾಲೆಯವರ ಮೇಲಿನ ಪ್ರೀತಿಯನ್ನು ಅವಧಿ ಹೀಗೆ ಹಂಚಿಕೊಂಡಿದ್ದಕ್ಕೆ,ನನ್ನ ಕೃತಜ್ಞತೆಗಳು. The word `sharing’ is beautiful…