ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ಆರ್ ಗಿರಿಜಾ ಅವರ ಭೂತಾನ್ ಪ್ರವಾಸ ಕಥನ ಧಾರಾವಾಹಿಯಾಗಿ

ಹಿಮಾಲಯದ ಹೊಟ್ಟೆಯಲ್ಲೊಂದು ಪುಟ್ಟ ದೇಶ ಭೂತಾನ್

ಓದುವ ಮುನ್ನ…………………….
ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್ ಇಂಡೆಕ್ಸ ಅನ್ನು ಪರಿಚಯಿಸಿದ ದೇಶ ಭೂತಾನ್.ಅದು ರಾಜವಂಶ ಮತ್ತು ಪ್ರಜಾ ಪ್ರಭುತ್ವ ಒಟ್ಟೊಟ್ಟಿಗೆ ಇರುವ ದೇಶ. ಭೂತಾನ್ ಹಿಮಾಲಯದ ಹೊಟ್ಟೆಯಲ್ಲೊಂದು ಪುಟ್ಟ ದೇಶ.ಈ ವರ್ಷ ಮಹಿಳಾ ದಿನಾಚರಣೆಗೆ ನನಗೆ ನಾನೇ ಕೊಟ್ಟುಕೊಂಡ ಉಡುಗೊರೆ ಸೋಲೋ ಟ್ರಿಪ್ ಟು ಭೂತಾನ್. ಅದರ ಅನುಭವ ಕಥನ ನಿಮ್ಮ ಮುಂದಿದೆ. ಚಿಕ್ಕವಳಿರುವಾಗ ಬಸ್ನಲ್ಲಿ ಹೊಗುವಾಗ ನದಿ ತೊರೆ ಕಾಡು ಜಲಪಾತಗಳನ್ನು ಕಂಡಾಗಲೆಲ್ಲಾ ಮುಂದೊಂದು ದಿನ ಅಲ್ಲಿಗೆಲ್ಲಾ ಒಬ್ಬಳೇ ಹೋಗಿ ಬೇಕಾದಷ್ಟು ಹೊತ್ತು ಬರಬೇಕೆನ್ನುವುದು ನನ್ನ ಕನಸಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ನನ್ನೊಳಗಿನ ಕಾಮನಬಿಲ್ಲು ದೂರ ದಿಗಂತಗಳ ಭೂಮಿಯನ್ನು ಸ್ಪಶರ್ಿಸಿ ಹೊಸತುಗಳನ್ನು ತೆರೆದಿಡುತ್ತಿದೆ. ಆ ಹಳೆ ಕನಸುಗಳು ನಿಜವಾಗಿ ಈಗ ಹೊಸ ಕನಸುಗಳು ಸಾಲುಗಟ್ಟಿ ನಿಂತಿವೆ. ಈ ಕಾಲದಲ್ಲಿ ಹುಟ್ಟಿರದಿದ್ದಲ್ಲಿ ಬಹುಶಃ ನಾನು ಎಲ್ಲೂ ಹೀಗೆ ಹೋಗಲು ಆಗುತ್ತಿರಲಿಲ್ಲ. ಈ ಕಾಲಘಟ್ಟಕ್ಕೆ, ಈ ಕಾಲದ ಮಹಿಳಾ ಸಬಲೀಕರಣ, ಮಹಿಳಾ ವಿದ್ಯಾಭ್ಯಾಸ, ಹೋರಾಟಗಳನ್ನು ಮಾಡಿದ ಆ ಶಕ್ತಿಗಳಿಗೆ ಇದೋ ನನ್ನದೊಂದು ಬಿಗ್ ಥ್ಯಾಂಕ್ಸ್.
ಅಧ್ಯಾಯ -1 : ಏರ್ಪೋರ್ಟ್ನಲ್ಲೊಂದು ರಾತ್ರಿ
ಕೊಲ್ಕತದ ಏರ್ಪೋರ್ಟನಲ್ಲಿ ರಾತ್ರಿ 2 ಗಂಟೆಯ ಚಳಿಯಲ್ಲಿ ನಡುಗುತ್ತಾ ನಿದ್ದೆಯಿಲ್ಲದೆ ರಾತ್ರಿ ಕಳೀತಾ ಇರುವಾಗ ಅನ್ನಿಸಿದ್ದಂತೂ ಸತ್ಯ.ಇದು ಬೇಕಿತ್ತಾ? ಇದು ಮೊದಲ ಸಲ ಏನಲ್ಲಾ, ಎಲ್ಲಿಗೆ ಹೊರಟರೂ ಮೊದಲ ದಿನದ ಇಂತಹಾ ಕಸಿವಿಸಿಯಾಗೋ ಸಮಯದಲ್ಲೆಲ್ಲಾ ಹೀಗನಿಸಿದ್ದು ಇದೆ. ಆಮೇಲೆ ಠಜಿ ಛಿಠಣಡಿಜ ಖಂಡಿತಾ ತಿಠಡಿಣ ಅಂತ ಸಂಭ್ರಮಿಸಿದ್ದೂ ಇದೆ.
ಹಾಗೆ ನೋಡಿದ್ರೆ ಈ ಸಲದ ಪರಿಸ್ಥಿತಿ ನಾನು ಕಲ್ಪಿಸಿಕೊಂಡದ್ದಕ್ಕಿಂತ ಹೆಚ್ಚೇ ಅನುಕೂಲಕರವಾಗಿತ್ತು. ಪಾರೋಗೆ ನನ್ನ ವಿಮಾನ ಇದ್ದದ್ದು ಭಾನುವಾರ ಬೆಳಿಗ್ಗೆ 9 ಗಂಟೆಗೆ.ಹಾಗೆ ಬೆಳಗಿನ ವಿಮಾನ ಇರುವಾಗಲೆಲ್ಲ ಹಿಂದಿನ ರಾತ್ರಿ ಬೆಂಗಳೂರಿನಿಂದ ಇರುವ ಕಡೇ ವಿಮಾನದಲ್ಲಿ ಹೀಗೆ ರಾತ್ರಿ ಕೇರ್ ಆಫ್ ಏರಪೋರ್ಟ್ ಆಗುವುದು ನಾನು ಯಾವಾಗಲೂ ಪಾಲಿಸುತ್ತಾ ಬಂದ ಕ್ರಮ. ಇದರಿಂದ ಎರಡು ಲಾಭ :ಒಂದು, ರಾತ್ರಿ ವಸತಿಯ ಹಾಗೂ ಹೋಗಿಬರೋ ಟ್ಯಾಕ್ಸಿಯ ಖಚರ್ು ಉಳಿತಾಯ. ಎರಡು, ಎಲ್ಲೋ ಉಳಿದುಕೊಂಡು ಮತ್ತೆ ಏರಪೋರ್ಟ್ ಗೆ ಬರೋ ಟೆನ್ಷನ್ ತಪ್ಪುತ್ತಲ್ಲಾ. ಹಿಂದೆ ಹೀಗೆ ಮಾಡಿದ್ದೆಲ್ಲಾ ದೆಹಲಿ ಏರಪೋರ್ಟ್ ನಲ್ಲಿ. ಅದು ಹೆಚ್ಚು ಅನುಕೂಲಗಳಿರೋ ಏರಪೋರ್ಟ್. ಮೇಲಾಗಿ ಜಿಟರಣ ಛಿಚಿಟಿರಜ ಇದ್ದದ್ದು ಅದೇ ಏರ್ಲೈನ್ಸ್ನಲ್ಲಿ ಆದದ್ದರಿಂದ ಒಮ್ಮೆ ಚೆಕ್ ಇನ್ ಮಾಡಿ ಆರಾಮವಾಗಿರಬಹುದು. ಈಗ, ಬೆಂಗಳೂರಿನಿಂದ ಕೊಲ್ಕತಗೆ ಆಮೇಲೆ ಕೊಲ್ಕತದಿಂದ ಭೂತಾನಿನ ಪಾರೋಗೆ ಎರಡೂ ಬೇರೆ ಬೇರೆ ಎರ್ಲೈನ್ಸ್ ಆಗಿತ್ತು. ಹೀಗಾಗಿ ನನ್ನ ಧಾಣಾ ಧಾಡಿಯಾ ಬ್ಯಾಕ್ ಪ್ಯಾಕ್ ನೊಂದಿಗೆ ಅಲ್ಲಿಯ ತಿಚಿಣಟಿರ ಜಚಿಣ ಮೇಲೆ ಜಣಣಟಜ ಆದೆ. 2-3 ವರ್ಷದ ಹಿಂದೆ ಕೂಡ ಕೊಲ್ಕತದ ಏರ್ಪೋರ್ಟ್ ಭಯಂಕರ ಕೆಟ್ಟದಾಗಿತ್ತು. ಈಗಲೂ ಹಾಗಿದ್ರೆ ಹೇಗಪ್ಪಾ ರಾತ್ರಿ ಕಳೆಯೋದು ದೇವರೇ ಅಂತ ಹೋಗಿದ್ದವಳಿಗೆ ಅಪ್ಗ್ರೇಡ್ ಆದ ಏರ್ಪೋರ್ಟ್ ತಿಚಿ ಚಿ ಠಿಟಜಚಿಚಿಟಿಣ ಣಡಿಠಿಡಿಜ. ಎರಡೂ ಬದಿ ಚಿಟಿಜಡಿಜಣ ಇದ್ದ ಸೀಟುಗಳು ಮಲಗಲು ಅನುಕೂಲಕರವಾಗಿರಲಿಲ್ಲ.ಆದರೂ ಬ್ಯಾಕ್ ಪ್ಯಾಕ್ ಮೇಲೆ ತಲೆ ಹಾಕಿ ನಿದ್ದೆ ಹತ್ತಲಿ ಅಂತ ಮಲಗಲು ಒದ್ದಾಟ ಮಾಡಿದ್ರೂ ಊಹುಂ ನಿದ್ದೆ ಹತ್ತಿರಕ್ಕೂ ಸುಳಿಯಲಿಲ್ಲ. ಎಲ್ಲಿಗಾದ್ರೂ ಹೊರಟ್ರೆ ಹೀಗೆ ನಂಗೆ. ಇಥಛಿಣಜಟಜಟಿಣಗೆ ನಿದ್ದೆ ಬರಲ್ಲ. ಸಾಲದ್ದಕ್ಕೆ ಚಳಿ. ಬ್ಯಾಗಿನ ಒಳಗೆ ಪ್ಯಾಕ್ ಮಾಡಿರೋ ಕೋಟು ತೆಗೆಯೋಕೆ ಮನಸ್ಸಿರಲಿಲ್ಲ. ಹೊರಗೇ ಇದ್ದ ತೆಳು ಶಾಲೊಂದನ್ನು ಹಾಗ್ಹಾಗೆ ಹೊದ್ದುಕೊಂಡು ಮಲಗೋಕೆ ಪ್ರಯತ್ನ ಪಟ್ಟೆ. ನನಗೆ ನಿದ್ದೆ ಬಂದರೆ ಅದು ಕೋಳಿ ನಿದ್ದೆ ಅಲ್ಲ, ಕುಂಭಕರ್ಣ ನಿದ್ದೇನೇ ಬರೋದು. ಹಾಗೆ ನಾನು ಮೈ ಮರೆತು ಮಲಗಿದಾಗ ನನ್ನ ಪರ್ಸ ನ್ನು ಯಾರಾದರೂ ಎತ್ತಿಕೊಂಡುಬಿಟ್ರೆ? ………ಈ ಯೋಚನೇಲಿ ಮತ್ತೆ ನಿದ್ದೆ ಬರಲೇ ಇಲ್ಲ. ನಿದ್ದೆ ಜೊತೆ ಗುದ್ದಾಡೋದೇ ಬೇಡ ಅಂತ ಎದ್ದು ಕೂತೆ. ಕಣ್ಣು ಬಿಟ್ಟುಕೊಂಡು ಸುತ್ತಾ ನೋಡ್ತಾ ಹಾಗೇ ಕೂತಿದ್ದೆ.
ರಾತ್ರಿ ಪಾಳಿಯಲ್ಲಿರೋ ಹುಡುಗ ಹುಡುಗಿ ಅನ್ಸುತ್ತೆ. ಯೂನಿಫಾಮರ್್ ನಲ್ಲಿ ಇದ್ದರು. ಮೊದಲು ಅವನು ಅವರ ಆಫೀಸಿನಿಂದ ಆಚೆ ಬಂದ, ಸ್ವಲ್ಪ ಹೊತ್ತಲ್ಲಿ ಅವಳು ಬಂದಳು.ಪಕ್ಕ ಪಕ್ಕ ಸುಮಾರು ಅಂಟಿಕೊಂಡಂತೇ ನಡೀತಿದ್ದ ಅವರಿಬ್ಬರ ಕಣ್ಣಲ್ಲಿ ಸೂರ್ಯ, ಚಂದ್ರ ಸಮಸ್ತ ನಕ್ಷತ್ರಗಳು ಒಟ್ಟಿಗೆ ಮಿನುಗಿದ್ದವು. ಆಹಾ ವಯಸ್ಸೇ ಅಂದ್ಕೊಂಡು ತಿರುಗಿದರೆ ಪಕ್ಕದಲ್ಲಿ ಒಬ್ಬ ನಿದ್ದೆಗಣ್ಣಲ್ಲಿ ನನ್ನ ಕಡೇನೇ ನೋಡ್ತಿದ್ದ! ನಾನು ಅವನ ಕಡೆ ತಿರುಗಲೇ ಬಾರದು ಅಂದ್ಕೊಂಡು ಉದ್ದಕ್ಕೂ ಖಾಲಿ ಇದ್ದ ಕೌಂಟರ್ಗಳನ್ನು ನೋಡ್ತಾ ಕೂತೆ. ಸ್ವಲ್ಪ ಹೊತ್ತಿಗೆ ಪಕ್ಕಕ್ಕೆ ತಿರುಗಿದರೆ ಆಸಾಮಿ ಮಲಗಿದ್ದ. ಸ್ವಲ್ಪ ದೂರದಲ್ಲಿ ಹುಡುಗಿಯರ ಒಂದು ದೊಡ್ಡ ಗುಂಪು ಲಗ್ಗೇಜನ್ನಲ್ಲಾ ಒಂದುಕಡೆ ಎಸೆದು ಆರಾಮವಾಗಿ ಮಲಗಿದ್ರು. ಅವರ ನಡುವೆ ಒಬ್ಬಳು ಮಾತ್ರ ಏನೋ ಬರೆದುಕೊಳ್ತಾ ಇದ್ಲು.ಬಹುಶಃ ಡೈರಿನೇ ಇರಬೇಕು. ನಾವಿಬ್ಬರು ಕಣ್ಣಲ್ಲೇ ಹಾಯ್ ಹೇಳಿಕೊಂಡ್ವಿ.
ಬೆಂಗಳೂರಿನ ಮನೆಯಲ್ಲಿ ಗಾಢನಿದ್ದೆಯಲ್ಲಿರುವ ಮಗಳ ನೆನಪು ಬಂತು.

ಪುಟ್ಟ ಮಗಳನ್ನು ಮನೆಯಲ್ಲಿ ಬಿಟ್ಟು ಆಗಾಗ್ಗೆ ಹೀಗೆ ಓಡಿಹೋಗುವ ಅಮ್ಮ ಅಂತ ನನ್ನನ್ನು ಹಳಿಯೋರಿದಾರೆ. ಇಷ್ಟು ವರ್ಷ ಜೀವನ ಮಾಡಿದ ಮೇಲೆ ನನ್ನ ಸಂತೋಷದ ಮೂಲ ಇರೋದು ತಿರುಗಾಟದಲ್ಲಿ ಅಂತ ನನಗೆ ಖಾತ್ರಿ ಆಗಿದೆ. ನಾನು ಖುಷಿಯಾಗಿದ್ರೆ ತಾನೆ ನನ್ನ ಸುತ್ತಲಿರುವವರನ್ನು ಖುಷಿಯಾಗಿಡೋದಕ್ಕೆ ಆಗತ್ತೆ? ಹಾಗಾಗಿ ನನ್ನ ಸಂತೋಷದ ಮೂಲ ಸೆಲೆಯಾಗಿ ಇರೋ ಪ್ರವಾಸಗಳಿಗೆ ಹೋಗೋಕೆ ನಾನು ಸದಾಸಿದ್ಧ. ಆಫೀಸಿನಿಂದ ಹೋಗೋ ಟ್ರಾವೆಲ್ಗಳಾದರು ಅಷ್ಟೆ. ಒತ್ತಡಗಳ ಮಧ್ಯೆಯೂ ಮನಸ್ಸಿಗೆ ಮುದ ಕೊಡುತ್ತದೆ. ಎಲ್ಲಿಗಾದರೂ ಹೋಗ ಬೇಕು ಅಂತ ಅಂದುಕೊಂಡ ಮೇಲೆ ಜೊತೆಗೆ ಯಾರಾದರು ಸಿಗಲಿ ಅಂತ ಕಾಯೋ ಸಹನೆ ಇರೋಲ್ಲ. ಏಕ್ ಲ ಚಲೋ ಏಕ ಲ ಚಲೋ ಅಂತ ಹೊರಟೇ ಬಿಡ್ತೀನಿ. ಅಲೆಮಾರಿತನದಲ್ಲಿ ಒಂದು ಕಿಕ್ ಇದೆ. ಬದುಕಿನ ಅನಂತ ಸಾಧ್ಯತೆಗಳನ್ನು ಅದು ಬಿಚ್ಚಿಡತಾನೆ ಇರುತ್ತೆ. ಜೊತೆಗೆ, ನಾನು ನನ್ನ ಪ್ರಪಂಚ ಎಷ್ಟು ಪುಟ್ಟದು ಅಂತ ಕನ್ನಡಿ ಹಿಡಿತಾನೂ ಇದೆ. ಅದು ನಾಳೆ ಬಗ್ಗೆ ಭರವಸೆ ಕೊಡತ್ತೆ. ಆಫೀಸಿನ ಯಾವುದೋ ಒತ್ತಡಗಳಲ್ಲಿ ‘ಸಾಕಪ್ಪಾ ಕೆಲಸ ಬಿಟ್ಟುಬಿಡೋಣ’ ಅಂತ ಅನಿಸಿದಾಗ ಇಂದಿನ ದುಡಿಮೆ ನಾಳಿನ ಟ್ರಾವೆಲ್ಗೆ ಅಂತ ಯೋಚನೆ ಬಂದು ದಿನದ ದುಡಿಮೆಯನ್ನು ಸಹ್ಯ ಮಾಡುತ್ತೆ.
ಹಿಮಾಲಯದ ಯಾವುದಾದ್ರೂ ಒಂದು ಭಾಗಕ್ಕೆ ಕನಿಷ್ಠ ವರ್ಷಕ್ಕೊಮ್ಮೆಯಾದ್ರೂ ಹೋಗೋದು 4 ವರ್ಷಗಳಿಂದ ನಡೀತಾ ಬಂದಿರೋ ನನ್ನ ಪದ್ಧತಿ.ಇದನ್ನು ಕಡಿಮೆ ಅಂದ್ರು 20 ವರ್ಷ ತನಕ ಮಾಡಬೇಕು ಅಂತ ಪ್ಲಾನ್ ಮಾಡಿದಿನಿ.(ಅಂದರೆ ನಮ್ಮ ಸಕರ್ಾರದ ಭಾಷೆಯಲ್ಲಿ 4 ಪಂಚವಾರ್ಷಿಕ ಯೋಜನೆಗಳು): ಇನ್ನು 20 ವರ್ಷ ಹೋದರೂ ನನ್ನ ಪಟ್ಟಿಯಲ್ಲಿರೋ ಹಿಮಾಲಯದ ಜಾಗಗಳನ್ನು ನೋಡಿ ಮುಗಿಸೋಕ್ಕಾಗಲ್ಲ. ಆಮೇಲೆ ಹೋಗೋಣ ಅಂದ್ರೆ ಕೈಕಾಲು ಗಟ್ಟಿಯಾಗಿರೋಲ್ಲ. ಅದಕ್ಕೇ ಮುಂದಿನ ಜನ್ಮಕ್ಕೂ ಈ ಪಟ್ಟಿ ಮುಂದುವರೆಯುತ್ತೆ ಅಂತ ನಂಗೆ ಗೊತ್ತು. ಒಮ್ಮೆ ಹೋಗಿ ಬಂದ ಯಾರನ್ನಾದ್ರೂ ಹಿಮಾಲಯ ಮತ್ತೆ ಮತ್ತೆ ಕರೆಯುತ್ತೆ. ಎಲ್ಲೋ ಓದಿದ ನೆನಪು.ಹಿಮಾಲಯಕ್ಕೆ ಒಮ್ಮೆ ಹೋದರೆ ನಮ್ಮ ತಲೇಲಿ ಇರೋ ಯಾವುದೋ ನಟ್ ಕಳೆದುಹೋಗುತ್ತಂತೆ. ಅದನ್ನು ಹುಡುಕ್ಕೊಂಡು ಮತ್ತೆ ಮತ್ತೆ ಹಿಮಾಲಯಕ್ಕೆ ಹೋಗ್ತೀವಂತೆ ಎ ಅದರ ಸೆಳೆತಾನೆ ಅಂಥದ್ದು.
ಈ ವರ್ಷ ಎಲ್ಲಿಗೆ ಹೋಗೋದು ಅಂತ ಯೋಚಿಸುವಾಗ ನಾತರ್್ ಈಸ್ಟ್ ಅಂತ ತೀರ್ಮಾನಿಸಿದೆ. ಅಷ್ಟು ದೂರ ಹೋಗ್ತೀನಿ ಭೂತಾನ್ಗೆ ಯಾಕೆ ಹೋಗಬಾರದು ಅನ್ನಿಸ್ತು. ನಾನ್ಯಾವತ್ತು ಮೊನಾಸ್ಟರಿಗಳ ಪ್ರೇಮಿ ಅಲ್ಲ. ಒಂದೆರಡು ವರ್ಷಗಳ ಹಿಂದೆ ಲಡಾಕ್ಗೆ ಹೋದಾಗ ಸಾಕಪ್ಪಾ ಅನ್ನೋ ಅಷ್ಟು ಮೊನಾಸ್ಟರಿಗಳನ್ನು ನೋಡಿ ಆಗಿತ್ತು. ಆಧುನಿಕತೆಗೆ ಇನ್ನೂ ಪೂರಾ ತೆರೆದು ಕೊಳ್ಳದ ಭೂತಾನ್ ನೋಡೋದು ನನ್ನ ಉದ್ದೇಶ ಆಗಿತ್ತು.
ರಸ್ತೆಯ ಮೂಲಕ ಹೋದ್ರೆ್ರೆ ಕಡಿಮೆ ಖಚರ್ಿನಲ್ಲಿ ಆಗುತ್ತೆ ಅಂತ ಪ್ಲಾನ್ ಮಾಡೋಕೆ ಶುರು ಮಾಡಿದೆ. ಅದಕ್ಕೆ 3 ದಿನ ಹೆಚ್ಚು ಬೇಕಾಗತ್ತೆ. ಮನೆ ಮಠ ಬಿಟ್ಟು 8 ದಿನದ ಮೇಲೆ ಹೋಗೋದು ಮನೇಲಿರೋರ ಮೇಲೆ ಹೆಚ್ಚು ಭಾರ ಅನ್ನೋದರ ಅರಿವಿನಿಂದ ಸಾಮಾನ್ಯ ನಾನು 8 ದಿನಗಳಿಗಿಂತ ಮೇಲಾಗಿ ಪ್ಲಾನ್ ಮಾಡೋಲ್ಲ. ಅಣು ಕುಟುಂಬಗಳ ಸಮಸ್ಯೇನೆ ಬೇರೆ ನಮೂನೆಯದು ಬಿಡಿ, ಅದು ಅನುಭವಿಸಿದವರಿಗೆ ಮಾತ್ರ ಗೊತ್ತು. ಕಡೆಗೆ ಸಮಯ ಉಳಿಸೋಕೆ ವಿಮಾನದಲ್ಲೇ ಹೋಗೋದು ಅಂತಾಯ್ತ್ತು. 30-40 ಸಾವಿರ ರೂಗಳು ಅಂದು ಕೊಂಡಿದ್ದ ಬಜೆಟ್ ದುಪ್ಪಟ್ಟಾಯ್ತು.
ಭೂತಾನ್ಗೆ ಇರೋದು ಡ್ರುಕ್ ಏರ್ ವೇಸ್ ಒಂದೇ. ಅವರ ವೆಬ್ ಸೈಟಿನಲ್ಲಿ ಬುಕ್ ಮಾಡಲು ಹೋದರೆ ಶಾಕ್ ಆಗುವಷ್ಟು ದುಬಾರಿ. ಇಷ್ಟು ಕೊಟ್ಟು ಹೋಗೋದರ ಬದಲು ನಾನು ಯುರೋಪಿಗೇ ಹೋಗಬಹುದು ಅನ್ನುವಷ್ಟರಲ್ಲೇ ತಿಳಿದಿದ್ದು ನಾವು ಭಾರತೀಯರಿಗೆ ಬೇರೆಯದೇ ಲೆಕ್ಕ ಮತ್ತು ಅದನ್ನು ಏಜೆಂಟರ ಮೂಲಕವೇ ಬುಕ್ ಮಾಡಬೇಕು ನೇರ ಮಾಡೋಕೆ ಆಗಲ್ಲ ಅಂತ.ಹಾಗೆ ಇಂಟರ್ನೆಟ್ನಲ್ಲಿ ತಡಕಾಡುತ್ತಿರುವಾಗ ತಿಳಿದ ಇನ್ನೊಂದು ಅಂಶ, ಗೈಡಿನ ಸಹಾಯ ಇಲ್ದೆ ವಿದೇಶೀಯರು ಯಾರು ಭೂತಾನಿನ ನೆಲದಲ್ಲಿ ಒಂಟಿಯಾಗಿ ಓಡಾಡುವಂತಿಲ್ಲ.ದಿನವೊಂದಕ್ಕೆ 250 $, ಭಾರತೀಯ ಜೋಡಿಗಾದರೆ, 9-10,000 ರೂ.ನನಗೆ ಪ್ಯಾಕೇಜ್ ಟೂರ್ ಮಾಡಲು ಸುತಾರಾಂ ಇಷ್ಟವಿರಲಿಲ್ಲ. ಜೋಡಿಗೆ 10,000 .ಒಂಟಿ ಹೋದರೂ ಅಷ್ಟೆ! ಮತ್ತೂ ತಿಳಿದ ವಿಷಯ ಟಿಂಪು, ಪಾರೊನಲ್ಲಿ ನಾವು ಇಂಡಿಯನ್ಸ್ ಒಂಟಿಯಾಗಿ ಓಡಾಡಬಹುದು, ಆದರೆ ಒಳಭಾಗಗಳಿಗೆ ಹೋಗುವಾಗ ಗೈಡ್ ಇರಲೇಬೇಕಾದ್ದು ಕಡ್ಡಾಯ ಅಂತ ಕೇಳಿದೆ, ಆದ್ರೆ ಅದೂ ಕೂಡ ಒಂದು ಮಿಥ್ ಅಂತ ಅಮೇಲೆ ಗೊತ್ತಾಯ್ತು. ನಾವು ಭಾರತೀಯರು ಅಲ್ಲಿ ಸ್ವತಂತ್ರವಾಗಿ ಓಡಾಡಬಹುದು.ನನಗೆ ಪುನಾಖಗೆ ಹೋಗೋ ಪ್ಲಾನ್ ಇತ್ತು.ಹೇಗೂ ಫುಲ್ಟೈಂ ವಾಹನ ಬೇಕಾಗತ್ತೆ ಅಂತ ಒಬ್ಬ ಭೂತಾನಿನ ಟ್ರಾವೆಲ್ ಏಜೆಂಟ್ ಸಹಾಯದಿಂದ ಎರಡು ದಿನಕ್ಕೆ ಗೈಡು,ಡ್ರೈವರ್ ಬುಕ್ ಮಾಡಿಕೊಂಡೆ.ಹೋಗೋ ದಿನದ ಹೋಟೆಲ್ ಕೂಡ ಬುಕ್ ಮಾಡಿದೆ.ಉಳಿದ ದಿನಗಳನ್ನು ಅನಿಶ್ಚಿತವಾಗಿ ತೂಗಿ ಬಿಟ್ಟೆ.ತುದಿಯಿಂದ ಕೊನೆ ತನಕ ಎಲ್ಲಾ ಪ್ಲಾನ್ ಆಗಿಬಿಟ್ರೆ ಒಂಥರಾ ಕಿರಿಕಿರಿ. ಸ್ವಲ್ಪ ಅನಿಶ್ಚಿತತೆ, ಸ್ವಲ್ಪ ಬಂದದ್ದು ಬರಲಿ ಎಂಬ ಅಂಶಗಳಿದ್ದರೇನೆ ಟ್ರಾವೆಲ್ಗೆ ಗಮ್ಮತ್ತು. ಭೂತಾನ್ ಇಸ್ ಎ ಸೇಫ್ ಕಂಟ್ರಿ ಅಂತ ತುಂಬಾ ಕೇಳಿದ್ದರಿಂದ ಈ ರಿಸ್ಕ್ ತಗೊಂಡೆ. ನಮ್ಮ ದೇಶದ ಕೆಲವು ಭಾಗಗಳಲ್ಲಿ ಇಂತಹ ಸಾಹಸ ಮಾಡುವ ಮುಂಚೆ ನೂರು ಸಲ ಯೋಚಿಸಬೇಕಾಗುತ್ತದೆ.
ಇನ್ನು ಸಂಸಾರ. 15 ದಿನದಿಂದಲೇ ವಿಹಾ(3 ವರ್ಷದ ಮಗಳು)ಳನ್ನು ಮಾನಸಿಕವಾಗಿ ಸಿದ್ದಮಾಡಿದ್ದೇ ಮಾಡಿದ್ದು. ಹೊರಡೋ ದಿನ ಅವಳು ‘ನೀನು ಹೋಗಿ ಬಾ ನಾನು ಅಪ್ಪ ಮಜಾ ಮಾಡುತ್ತಿವಿ ಅಂತ ಹೇಳಿ ಕಳಿಸಿಕೊಟ್ಟಳು.
(ಮುಂದುವರಿಯುವುದು…)

‍ಲೇಖಕರು avadhi

8 May, 2014

ನಿಮಗೆ ಇವೂ ಇಷ್ಟವಾಗಬಹುದು…

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸನ್ನಿಧಿಯಲ್ಲಿ

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮತ್ತೆ ಮತ್ತೆ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಖಾಲಿ ಬೈಕ್

7 Comments

  1. Anonymous

    Very Nice..Interesting ….like to hear more…

  2. Roopa Nagaraj

    Girija… Its very nice to know that u write so well.. Wanna hear more and soooon..

  3. Ranganath

    Its very Interesting …. continue ….

  4. shwetha hosabale

    interesting….ಹೆಂಗಸರು ಒಬ್ಬೊಬ್ಬರೇ ದೂರ ದೂರ ಪ್ರವಾಸ ಹೋಗುವ ಕಾನ್ಸೆಪ್ಟೇ ಒಂಥರಾ ಖುಷಿ ಕೊಡತ್ತೆ…ಇಷ್ಟ ಾಯ್ತು 🙂

  5. Kanthi

    Nice, I remembered my trip to Bhutan, I am sure u might had lot of fun and enjoyed nature and culture there..waiting for next episode

  6. Girija M R

    ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು 🙂

  7. vageesha JM

    interesting.. yesterday i was thinking about BHUTAN and how to plan the trip.. its co incident that i got this article.. thanks for the article.. i shall use this article to my BHUTAN trip in future.

Trackbacks/Pingbacks

  1. ಎಂ ಆರ್ ಗಿರಿಜಾ ಪ್ರವಾಸ ಕಥನ : ಐನೂರು ರೂಪಾಯಿಗೆ ಚಿಲ್ಲರೆ ಪ್ಲೀಸ್! « ಅವಧಿ / Avadhi - [...] ಎಂ ಆರ್ ಗಿರಿಜಾ ಪ್ರವಾಸ ಕಥನ : ಐನೂರು ರೂಪಾಯಿಗೆ ಚಿಲ್ಲರೆ ಪ್ಲೀಸ್! May 9, 2014 by avadhinew (ಇಲ್ಲಿಯವರೆಗೆ…) [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading