ಮೀನಜ್ಜಿಯ ಮೀನಡಿಗೆಯ ಹಾದಿ ಹಿಡಿದು
ಗಿರೀಶ್ ಕೆ
ಸುಪ್ರಭಾತ ಒಂದು ಸಾಲೂ ಅರ್ಥ ಆಗುವುದಿಲ್ಲ. ಆದರೆ ಅದರ ನಾದ ಲಯ ರಾಗಕ್ಕೆ ಬೇಷರತ್ ಶರಣಾಗುತ್ತೇನೆ. ಅದೇ ರೀತಿ ನನ್ನ ಮೀನಜ್ಜಿ.
ಕಂಡ ತಕ್ಷಣ ಹೇಳಿಬಿಡುತ್ತಾಳೆ. ಅದು ಕೆರೆ ಮೀನೋ ನದಿ ಹೊಳೆ ಸಮುದ್ರ ಮೀನೋ ಅಂತ. ಮುಟ್ಟದೆಯೇ ಆ ಮೀನಿನಲ್ಲಿರುವ ಮೈ ಮೂಳೆ ಎಣಿಸಿದಂತೆ ಹೇಳಿಬಿಡುತ್ತಾಳೆ. ಸರಾಗವಾಗಿ ಸುಬ್ಬಲಕ್ಷ್ಮಿ ಹಾಡಿದಂತೆ.
ಎಷ್ಟು ಅಚ್ಚುಕಟ್ಟಾಗಿ ಶುಚಿಮಾಡಿ ಮೀನಿನ ಸಾರು ಮಾಡುತ್ತಾಳೆಂದರೆ ಆ ವಿದ್ವತ್ತಿನ ಆಳವೇ ಗೊತ್ತಿಲ್ಲದಿದ್ದರೂ ಬೇಷರತ್ತಾಗಿ ಶರಣಾಗಿಬಿಡುತ್ತೇನೆ. ಮುಂಜಾವು ದಾಟಿದರೆ ಸುಪ್ರಭಾತ ಹಿಡಿಸುವುದಿಲ್ಲ.
ಹಸಿವಿಲ್ಲದಿದ್ದರೆ ಮೀನಜ್ಜಿಯ ವಿದ್ವತ್ ರುಚಿಸುವುದಿಲ್ಲ.







ಚೆನ್ನಾಗಿದೆ
Nice