ರಾಜೇಶ್ ಹೆಬ್ಬಾರ್
ಜಗದ ಜಾಗಟೆಯ ಸದ್ದು
ಗೆದ್ದವರ ಉನ್ಮಾದದ ಕೇಕೆ
ಸೋತವರ ಆಕ್ರಂದನ
ಕತ್ತಿ ಝಳಪಿನ ಮಿಂಚು
ಕತ್ತಿಯಲಗಿಗೆ ತಲೆಕೊಡಲು
ಸಿದ್ಧಾರಾದವರ ಚೀರಾಟ
ನಿನ್ನ ಕಣ್ಣೊಳಗಿನ ಮುಗ್ದ-
ಮಂದಹಾಸದ ಮುಂದೆ
ಈ ಕ್ಷಣ ಮರೆಯಾಯಿತು.
ಸೋಲಲ್ಲು ನಗುವ
ಉರಿವೆದೆಯ ಮೇಲೆ
ಹೊಸ ನೆತ್ತರುಕ್ಕಿಸುವ
ಕೊರಡಲ್ಲು ಬರಡಲ್ಲು
ಈ ನಿನ್ನುಸಿರ, ನನಗಾಗಿ
ಇನಿತೆ ಕಾಪಿಟ್ಟುಕೊ ಗೆಳತಿ…
0 ಪ್ರತಿಕ್ರಿಯೆಗಳು