ವಸಂತ ಶೆಟ್ಟಿ ಆಹ್ವಾನ
ಉದಯವಾಣಿಯಲ್ಲಿ ಒಂದೂವರೆ ವರ್ಷಗಳ ಕಾಲ ನಾನು ಬರೆದ “ಕನ್ನಡ ಜಗತ್ತು” ಅಂಕಣಗಳಲ್ಲಿನ ಆಯ್ದ ಬರಹಗಳನ್ನು ಪುಸ್ತಕ ರೂಪದಲ್ಲಿ ತರುವ ಕೆಲಸ ನಡೆಯುತ್ತಿದೆ. ಪುಸ್ತಕದ ಬೆನ್ನು ಪುಟಕ್ಕೆ ಕೆಲವು ಮಾತುಗಳನ್ನು ಉದಯವಾಣಿ ಪತ್ರಿಕೆಯ ಸಂಪಾದಕರಾದ ರವಿ ಹೆಗಡೆಯವರು ಬರೆದಿದ್ದಾರೆ. ಅವರಿಗೆ ನಾನು ಆಭಾರಿ.
ಡಿಸೆಂಬರ್ 12, ಶನಿವಾರ ಬೆಳಿಗ್ಗೆ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಅಂಗಳದಲ್ಲಿ ಬಿಡುಗಡೆ. ಕೆಲವು ವಿಶೇಷ ಅತಿಥಿಗಳು ಜೊತೆಗಿರಲಿದ್ದಾರೆ. ಪುಸ್ತಕವನ್ನು ಬನವಾಸಿ ಬಳಗ ಪ್ರಕಾಶನ Banavasi Balaga Prakashana ಹೊರ ತಂದಿದೆ. ಸದ್ಯದಲ್ಲೇ ಹೆಚ್ಚಿನ ವಿವರ ನೀಡುವೆ. ನಿಮ್ಮ ಬರುವಿಕೆಯನ್ನ ಎದುರು ನೋಡುವೆ. #KannadaJagattu






0 Comments