ನಾನು ಸೇರಿದಂತೆ ನನ್ನ ಒಂದಷ್ಟು ಗೆಳೆಯರಿಗೆ ನಾಟಕದಲ್ಲಿ ಅಭಿನಯಿಸುವ ಉಮೇದು ಬಂದಿದೆ. ಒಂದೂವರೆ ತಿಂಗಳು ತಾಲೀಮು ನಡೆಸಿ ತುಮಕೂರಿನಲ್ಲಿ ಪ್ರದಶ೯ನ ನೀಡುವುದು ಸದ್ಯದ ಉದ್ದೇಶ. ಈಗಾಗಲೇ ನಾಟಕ ಕೃತಿಯ ಹುಡುಕಾಟಕ್ಕೆ ಇಳಿದಿದ್ದೇವೆ.
ಯಾವ ಕೃತಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಕೂಡ ಇದೆ. ನೀವು ಓದಿದ, ತಟ್ಟಿದ, ಕಾಡಿದ ನಾಟಕ ಕೃತಿ ಇದ್ದರೆ ತಿಳಿಸಿ. ಸುಮಾರು ಒಂದೂವರೆ ಗಂಟೆ ಅವಧಿಯ ನಾಟಕ ಇದ್ದರೆ ಚೆಂದ. ನೀವೊಂದು ಹೆಸರು ಸೂಚಿಸಿದರೆ ನಮ್ಮ ಕೆಲಸ ಅಧ೯ ಸಲೀಸು..
–ಉಗಮ ಶ್ರೀನಿವಾಸ್







ತೇಜಸ್ವಿಯವರ ಚಿದಂಬರ ರಹಸ್ಯ ನನ್ನ ಆಯ್ಕೆ. ಅದನ್ನು ರಂಗಭೂಮಿಗೆ ಇಳಿಸುವುದು ನಿಮಗೊಂದು ಸವಾಲು!
ಉಗಮ, ನಿಮ್ಮ ಬೇಡಿಕೆಯೇ ಚೆನ್ನಾಗಿದೆ. ನನ್ನ ತಂಗಿಗೊಂದು ಗಂಡು ಕೊಡಿ ಎಂಬಂತೆ! ನಿಮಗೆ ನಾಟಕ ಸೂಚಿಸುತ್ತೇನೋ ಇಲ್ಲವೋ, ಉಗಮನಿಗೊಂದು ನಾಟಕ ಬೇಕು ಅನ್ನೋ ಹೆಸರಿನ ಕತೆಯನ್ನಂತೂ ಬರೆಯುತ್ತೇನೆ.
ಲಂಕೇಶರ ಗುಣಮುಖ ಅಥವಾ ಸಂಕ್ರಾಂತಿ… ಪ್ರೇಕ್ಷಕರನ್ನು ತೀವ್ರವಾಗಿ ಕಾಡುವ ನಾಟಕ…