ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಮೀನು ಯಾವುದು ಹೇಳಿ ನೋಡೋಣ…??

ಮುರಳಿ ರಾಮನಾಥ್

ಈ‌ ಕೆಳಕಂಡ ಮೀನುಗಳನ್ನು ಗುರುತಿಸುವ ತಿಮಿಂಗಲಗಳು ಕನ್ನಡ ನಾಡಿನಲ್ಲಿದ್ದರೆ ಅವರಿಗೆ ನನ್ನಿಂದ ಬಹುಮಾನವಿದೆ…
ಇದು ರಾಘವಾಂಕನ ಕಾವ್ಯದಲ್ಲಿ ಬರುತ್ತದೆ :
ಕೊಳುವ ಸೀಗುಡಿ ಗೆಂಡೆ ಕುಚ್ಚು ಹಣ್ಣಲು ಬಸಿಗ
ಗಿಳೆಲು ಬಂಗಡೆ ಹಾವು ಜಳಬಾಳೆ ಕುಕಿಲು ಹೆ
ಗ್ಗಳೆ ಗಣೆ ಮಣಿಗಣ್ಣ ತೂತು ತೆಂತಲು ಸಿಸಿಲು ಬೊಂಪು ಸವಿವಾಯ ಗೊದಳೆ
ಗಳೆಮೆಳುವ ಕಾಗೆಂಡೆಯಯರೆಗ ದೊಂಡಿ ಕೆಂಗ
ಹರಳು ಹಾರುವಂ ಹಿರಿಯ ಷಡುಸಕ್ಕರಿಗ
ನಿಳಳು ಹಂದೆನನಾನೆ ಮೊಗನೆಂಬ ಪರಿಪರಿಯ ಮೀನ್ಗಳಂ ಗುದಿಗೆಯ್ದರು

ಬಿಳಿಚ ಚಿಪ್ಪಲು ಮಲಗು ಹೆಮ್ಮಲಗು ಬಿಳಿಯಾನೆ
ಮಳಲಿ ಕೂಡಿಲು ಚಕ್ರಗೆಂಡೆಯಾವೆಗ ನವಿಲು
ಯಿಳಿಯಂಬು ಕುಳೆದಲೆಗ ಹೆಮ್ಮಿನು ಕೆಮ್ಮಿನು ಮುಕ್ಕಣ್ಣನಾರೆ ನಿಳೆಲು
ಕುಳಿಚು ಸೂಜಿಗ ನಗಲು ಹೆಲ್ಲರಂ ಬಂಕರುಂ
ಹಳಲೆ ಕಪ್ಪೆಗಳೊಳಲೆ ಬೋಟೆ ಗಿಳೆಲುಗಳೆಂಬ
ಹೊಳೆವಳಿಯ ಮಿನ್ಗಳಂ ತವಿಸುತಿಹ ಬೇಡರಂ ನೋಡಿದಂ ಭೂಪಾಲನು.

‍ಲೇಖಕರು G

15 June, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading