ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಮಾತನ್ನು ತೇಜಸ್ವಿಗೆ ಸಹಿಸಲಾಗಲಿಲ್ಲ..

ಕುವೆಂಪು ಅಗ್ನಿ ಸಂಸ್ಕಾರದ ಮಾರನೆ ದಿನ, ಮೈಸೂರಿನ ಉದಯರವಿ ಮನೆಯಲ್ಲಿ-

ಫೋನು ಒಂದೇ ಸಮ ರಿಂಗಣಿಸಿತು. ಜಿಲ್ಲಾಧಿಕಾರಿಯವರು (ಡಿ.ಸಿ) ತೇಜಸ್ವಿಯನ್ನು ಸಂಪರ್ಕಿಸಿದ್ದರು.

ಅಂದಿನ ಪ್ರಧಾನಿಯಾದ ನರಸಿಂಹರಾವ್ ರವರು ‘ಉದಯ ರವಿ’ಗೆ ಬರಲು ಅಪೇಕ್ಷೆ ಪಟ್ಟಿರುವರು. ಬರಬಹುದೆ ಎಂದರಂತೆ, ಇವರು ಯೋಚಿಸಿ, ‘ಮನೆಯಲ್ಲಿ ಯಾರೂ ಇಲ್ಲ, ನಾನೊಬ್ಬನೆ ಇರುವುದು, ತೊಂದರೆಯಾಗುತ್ತೆ, ಕ್ಷಮಿಸಿ ಎಂದರಂತೆ.

ಅಣ್ಣ ಇಲ್ಲದ ಮನೆಗೆ ಮನಸ್ಸು ಒಗ್ಗಿಕೊಳ್ಳಲು ನಿರಾಕರಿಸುತ್ತಿತ್ತು. ಸಂಕಟ.. ಏನಕ್ಕೂ ಉತ್ಸಾಹವಿಲ್ಲ.

ತೇಜಸ್ವಿ ಡಿ.ಸಿ.ಯವರ ಫೋನಿನ ವಿಚಾರ ಹೇಳಿದರು. ಸುರೇಂದ್ರರವರಿಗೆ ತುಂಬ ನಿರಾಶೆಯಾಯಿತು. ‘ಛೆ, ಎಂಥ ಕೆಲಸ ಮಾಡಿದ್ರಿ ಮಾರಾಯ್ರೆ, ಅಂಥವರು ಮನೆಗೆ ಬರಬೇಕಾಗಿತ್ತು’ ಎಂದರು ಸುರೇಂದ್ರರು. ದೇಶದ ಪ್ರಧಾನಿ, ಬಹಳ ಮುಖ್ಯರು, ವಿ.ಐ.ಪಿ. ಎನ್ನುವ ಲೆಕ್ಕಾಚಾರ ಅವರಿಗೆ.

ಈ ಮಾತನ್ನು ತೇಜಸ್ವಿಗೆ ಸಹಿಸಲಾಗಲಿಲ್ಲ. “ಕುವೆಂಪು ನೂರುಸಲ ಹುಟ್ಟಿ ಬಂದರೂ ನಿಮ್ಮಂಥವರು ಪರಿವರ್ತನೆಯೇ ಅಗುವುದಿಲ್ಲ ಕಣ್ರಿ, ಅಲ್ರೀ, ಅವರು ಎಂಥವರೆಂದು ಗೊತ್ತಿದೆ, ಅಂಥವರನ್ನು ಮನೆಗೆ ಬರಮಾಡಿಕೊಂಡು ಮಣೆ ಹಾಕಬೇಕಿತ್ತಾ’ ಎಂದರು ತೇಜಸ್ವಿ.

ಇವರ ನೇರ ನಡೆ ನುಡಿಯ ಮಾತು ನಿಷ್ಠುರವಾಗಿತ್ತು. ಮನೆ ನಿಂತ ನೀರಾಯಿತು. ಮೌನದ ವಾತಾವರಣ ಮನೆಯಲ್ಲಿ ಕವಿಯಿತು.

– ‘ನನ್ನ ತೇಜಸ್ವಿ’ಯಲ್ಲಿ ರಾಜೇಶ್ವರಿ ತೇಜಸ್ವಿ

‍ಲೇಖಕರು avadhi

23 April, 2018

1 Comment

  1. nutana doshetty

    Kannadakkobbare Tejaswi..

    Nutana

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading