ಜಿ ಎನ್ ಮೋಹನ್
ಹೀಗಾಯ್ತು… ತುಮಕೂರಿನ ನರ್ಸಿಂಗ್ ಹೋಂನಲ್ಲಿ ತೀವ್ರ ಕಾತರ ತಹತಹಗಳಿಂದ ಕಾಯುತ್ತಿದ್ದೆ. ಹೆಂಡತಿ ಹೆರಿಗೆ ಕೋಣೆಯಲ್ಲಿದ್ದಳು. ಹೊರಗೆ ನಾನು ನನ್ನೊಂದಿಗೆ ಅಷ್ಟೇ ಟೆನ್ಷನ್ ಅನುಭವಿಸುತ್ತಿದ್ದ ಪುಟಾಣಿಗಳು ಶತಪಥ ಸುತ್ತುತ್ತಿದ್ದವು. ಎಷ್ಟೋ ಸೆಕೆಂಡುಗಳನ್ನು ನಿಮಿಷವಾಗಿಸಿ ನಿಮಿಷಗಳನ್ನು ಗಂಟೆಗಳಾಗಿಸಿದ ನಂತರ ದಾದಿ ಹೊರಬಂದಳು-ಹೆಣ್ಣು ಮಗು ಎಂದರು.

ನಾನು ತಕ್ಷಣ ಪೋನ್ ತಿರುಗಿಸಿದ್ದು ಅಜ್ಜ ಎಸ್ ಕೆ ಕರೀಂಖಾನ್ ರಿಗೆ. ಬೊಚ್ಚು ಬಾಯಿಯ ತುಂಬಾ ಶುದ್ಧ ನಗೆ ಸೂಸುತ್ತಿದ್ದ ಜಾನಪದ ಗೀತೆಗಳ ಕಣಜ ಎಸ್ ಕೆ ಕರೀಂಖಾನ್ ಫೋನಿನ ಆ ತುದಿಯಿಂದ ಹೆಣ್ಣು ಮಗು ಎಂದು ಕೇಳಿದ ತಕ್ಷಣವೇ ‘ಮಹಮದ್ ಪೈಗಂಬರರು ತಮ್ಮ ಸಂದೇಶ ಕಳಿಸಿದ್ದಾರೆ’ ಎಂದರು.
ಫೋನಿನ ಈ ತುದಿಯಲ್ಲಿ ’ಕಂಗ್ರಾಟ್ಸ್’ ಅಂತಲೋ, ’ಅಯ್ಯೋ ಪಾಪ ಹೆಣ್ಣು ಮಗುವೇ ?’ ಎನ್ನುವ ಮಾತನ್ನೋ ನಿರೀಕ್ಷಿಸುತ್ತಿದ್ದವನಿಗೆ ಆ ಅಜ್ಜ ಹೀಗೆ ಹೇಳಿದಾಗ ಕಿವಿ ನಂಬಲಾಗಲಿಲ್ಲ. ಏನಿದು ಎನ್ನುವ ಕುತೂಹಲ. ’ಯಾಕೆ ಸಾರ್’ ಎಂದೆ. ’ಮಹಮದ್ ಪೈಗಂಬರ್ ಅವರು ಹೆಣ್ಣು ಮಕ್ಕಳಿಗೆ ಅಪಾರ ಗೌರವ ಕೊಟ್ಟವರು. ಅವರ ಬದುಕು ನೆಮ್ಮದಿಯಿಂದಿರಬೇಕು ಎಂದು ಬಯಸಿದವರು. ಕುರಾನ್ ಇವತ್ತೂ ಹೆಣ್ಣು ಮಕ್ಕಳ ಶ್ರೇಷ್ಠತೆಗೆ ಒತ್ತು ಕೊಡುತ್ತದೆ. ಹಾಗಾಗಿಯೇ ಮುಸ್ಲಿಮರಲ್ಲಿ ಹೆಣ್ಣು ಮಗುವಾದರೆ ಹೆಣ್ಣು ಮಗುವಾಯಿತು ಎಂದು ಸಾರುವುದಿಲ್ಲ, ಮಹಮದ್ ಪೈಗಂಬರರು ಹೆಣ್ಣು ಮಗುವಿನ ಮೂಲಕ ತಮ್ಮ ಶ್ರೇಷ್ಠ ಸಂದೇಶ ಕಳಿಸಿದ್ದಾರೆ ಎಂದು ಭಾವಿಸುತ್ತಾರೆ. ಹಾಗಾಗಿಯೇ ಈ ಮಾತು’ ಎಂದರು.

ಹಗಲಿರುಳೂ ಹೆಣ್ಣು ಮಗುವಾಗಲಿ ಎಂದು ಬಯಸಿದ ನಾನು ಈ ಕಡೆ ಕಣ್ಣು ಒರೆಸಿಕೊಂಡೆ. ಮೊನ್ನೆ ಮೊನ್ನೆ ಅಂಜಲಿ ರಾಮಣ್ಣ ಅವರಿಗೆ ಈ ಘಟನೆ ಹೇಳಿದೆ. ಫೇಸ್ ಬುಕ್ ಇನ್ ಬಾಕ್ಸ್ ನಲ್ಲಿ. ಅವರೂ ಆ ಕಡೆ ಕಣ್ಣೀರು ಒರೆಸಿಕೊಂಡರೇನೋ…






🙂 hmmm
naanuu nimma haage ondu gandina mele eradaneya sala hennumaguvigaagi tapisidde.aadare paigambar sandesha kaluhisalilla.aaga kanniiraagidde. eega heppugattidda kanniru tulukitu. you are lucky.
ನಿಜ. ಪ್ರವಾದಿ ಮಹಮ್ಮದರ ಮಕ್ಕಳಲ್ಲಿ ಉಳಿದದ್ದು ಒರ್ವ ಹೆಣ್ಣು ಮಗು ಮಾತ್ರ. ಆಕೆ ಫಾತಿಮಾ. ಇವರು ಪ್ರವಾದಿಯ ಅತ್ಯಂತ ಪ್ರೀತಿಯ ಮಗಳು. ಆಕೆಯ ಮಕ್ಕಳೇ ಹಸನ್ -ಹುಸೈನ್. ಮುಂದೆ ಕರ್ಬಲಾ ಯುದ್ಧದಲ್ಲಿ ಬಲಿಯಾಗುತ್ತಾರೆ.
ಪ್ರವಾದಿಯನ್ನು ನಿಂದಿಸಲು ಅವರ ವಿರೋಧಿಗಳು “ನಿಮಗೆ ಗಂಡು ಮಕ್ಕಳಿಲ್ಲ ” ಎನ್ನೋದನ್ನು ಬಳಸುತ್ತಿದ್ದರಂತೆ.
ಮೂರು ಹೆಣ್ಣು ಮಕ್ಕಳನ್ನು ಸಾಕಿ ಸಲಹಿ, ಬೆಳೆಸಿ ಅವರ ಬದುಕನ್ನು ಹಸನು ಗೊಳಿಸಿದರೆ ಆ ಪಾಲಕರಿಗೆ ಸ್ವರ್ಗ ಎಂದು ಪ್ರವಾದಿ ಹೇಳಿದ್ದರು.
ಜಗತ್ತಿನ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಹೆಣ್ಣಿಗೆ ಆಸ್ತಿಯ ಹಕ್ಕನ್ನು ಘೋಷಿಸಿದ್ದು ಪ್ರವಾದಿ ಮಹಮ್ಮದ್.
ಹೆಣ್ಣನ್ನು ವ್ಯಭಿಚಾರಕ್ಕೆ ಬಳಸುದನ್ನು ನಿಷೇಧಿಸಿದರು. ಅದನ್ನು ಅಪರಾಧ ಎಂದು ಘೋಷಿಸಿದರು.
ವಧು ದಕ್ಷಿಣೆ ಅಥವಾ ಮಹರ್ ಪದ್ಧತಿ ಜಾರಿಗೆ ತಂದರು. ಮದುವೆ ಆಗಬೇಕಾದರೆ ಹೆಣ್ಣು ಕೇಳಿದಷ್ಟು ಹಣವನ್ನು ಗಂಡು ನೀಡಲೇ ಬೇಕು.
ವಿಧವಾ ವಿವಾಹವನ್ನು ಪೋಷಿಸಿದರು. ಗಂಡ ಮರಣಿಸಿದರೆ, ಅವಳು ಗರ್ಭಿಣಿ ಅಲ್ಲ ಎನ್ನೋದು ಮನವರಿಕೆಯಾದಾಕ್ಷಣ ಅವಳಿಗೆ ಯೋಗ್ಯ ಗಂಡಿನ ಜೊತೆ ಮದುವೆ ಮಾಡಿ ಕೊಡಿ ಎಂದು ಆದೇಶಿಸಿದರು.
ತಾಯಿಯ ಪಾದದ ಬಳಿ ಸ್ವರ್ಗ ಎಂದು ಘೋಷಿಸಿದ್ದು ಪ್ರವಾದಿ ಮಹಮ್ಮದ್.
b.m.basheer
ಮನಮಿಡಿವ ಘಳಿಗೆ, ಜೀವಪರ ಸಂದೇಶವದು.. ಅಬ್ಬಾ
An important and divine position has been given to a woman in every religion by the proponent prophets. Yet the executives of the religions have become executors. Isn’t it a pity? Even highly educated ones, especially with scientific knowledge, are not free from the prejudice and for them, a female baby is not a boon but a curse. This tendency itself is a curse to mankind.
ಈದ್ ಮತ್ತು ಹೆಣ್ಣು ಮಗುವಿನ ಜನನ ಮೋಹನ್ ಅವರ ಈ ಅನುಭವ ಓದಿದ ಕೂಡಲೇ ಎರಡು ದಶಕಗಳ ಹಿಂದಿನ ಪ್ರಸಂಗ ನೆನಪಾಗುತ್ತದೆ..ಅಡ್ಡಿಯಿಲ್ಲವಾದರೆ ಹಂಚಿಕೊಳ್ಳುತ್ತೇನೆ. ಪರವಾಗಿಲ್ವಾ ?
ನನ್ನ ಅಣ್ಣ ( ಅವನು ತೀರಿಕೊಂಡು 13 ವರ್ಷವಾಯಿತು) ಬಹಳ ಹಾಸ್ಯಪ್ರವೃತ್ತಿಯವನಾಗಿದ್ದ. ಸದಾ ನಗಿಸುವುದೇ ಅವನ ಆಸ್ತಿ. ಕಾರಣ ಗೊತ್ತೇ ಅವನಿಗೆ 40 ವರ್ಷಕ್ಕೇ ತಾನು ಸಾಯುವುದು ಖಚಿತವಾಗಿತ್ತು. ಹೃದ್ರೋಗದ ಕಾರಣ. ಇರಲಿ. ಅವನ ಹಾಸ್ಯ ಪ್ರವೃತ್ತಿಯ ಒಂದು ಝಲಕ್ ಇಲ್ಲಿದೆ.
ನನ್ನೂರು ಬಂಗಾರಪೇಟೆಯಲ್ಲಿ ನನ್ನ ಮುಸ್ಲಿಂ ಸ್ನೇಹಿತನೊಬ್ಬನಿಗೆ ಹೆಣ್ಣು ಮಗು ಜನಿಸಿತ್ತು. (ಅವನ ಪತ್ನಿಗೆ ಹೆರಿಗೆಯಾಗಿತ್ತು ) ನಾನು ಮತ್ತು ನನ್ನ ಅಣ್ಣ ಅವನ ಮೆಡಿಕಲ್ ಷಾಪ್ ಗೆ ಹೋದಾಗ ಗೆಳೆಯ ಅಷ್ವಕ್ ಸಂತೋಷದಿಂದ ನಮಗೆ ಸಿಹಿ ನೀಡಿ ವಿಷಯ ತಿಳಿಸಿದ. ” ಜೀ ಮುಝೆ ಬೇಟಿ ಪೈದಾ ಹುವಾ ” . ತಕ್ಷಣ ನನ್ನ ಅಣ್ಣನ ಪ್ರಶ್ನೆ ” ಹಾಗಾದ್ರೆ ಇಲ್ಲಿ ಹೇಗೆ ಬಂದಿರಿ ? ಆಶ್ಚರ್ಯ !” ಕೂಡಲೇ ಗೆಳೆಯ ಉತ್ತರಿಸಿದ ” ನನ್ನ ಪತ್ನಿಗೆ ” . ಅನ್ಯ ಭಾಷೆಗಳನ್ನು ಸ್ಪಷ್ಟವಾಗಿ ಮಾತನಾಡದಿದ್ದ ನನ್ನ ಅಣ್ಣ ಕೂಡಲೇ ಅವನಿಗೆ ಶುಭಾಷಯ ಕೋರಿದ್ದು ಹೀಗೆ ” ಈದ್ ಮುಬಾರಕ್ ಜೀ “.
ನನ್ನ ಗೆಳೆಯ ದಂಗಾಗಿ ಹೋದ ” ಕ್ಯಾ ಜಿ ಬೇಟಿ ಪೈದಾ ಹುವಾ ತುಮ್ ಈದ್ ಮುಬಾರಕ್ ಬೋಲ್ ರಹೇ ಹೋ “( ಮಗು ಹುಟ್ಟಿದರೆ ಈದ್ ಮುಬಾರಕ್ ಹೇಳುವಿರಲ್ಲಾ ?)
ತನ್ನ ಮುಜುಗರವನ್ನು ಹಾಸ್ಯದ ಮೂಲಕ ಮರೆಯುತ್ತಿದ್ದ ನನ್ನ ಅಣ್ಣ ಕೂಡಲೇ ಹೇಳಿದ್ದೇನು ಗೊತ್ತೇ ” ಸಾರಿ ಭಯ್ಯ ಈದಿದ್ದಕ್ಕೆ ಮುಬಾರಕ್ ” (ಹಸುಗಳು ಕರು ಹಾಕುವುದನ್ನು ಈಯುವುದು ಎನ್ನಲಾಗುತ್ತದೆ.)
ಆಗ ಹರಿದ ಹಾಸ್ಯದ ಹೊನಲು ಇನ್ನೂ ಹಸಿರಾಗಿದೆ , ದುಃಖತಪ್ತ ಮನದಲ್ಲಿ.
ಪ್ರವಾದಿಗಳ ಆಶಯ ಮತ್ತು ವಿಚಾರ ಉದಾತ್ತ. ಆದರೆ ಅವರ ಅನುಯಾಯಿಗಳು ಅವುಗಳನ್ನು ಎಷ್ಟರಮಟ್ಟಿಗೆ ಪಾಲಿಸಿತ್ತಿದ್ದಾರೆ ಎಂದು ನೋಡಿದರೆ ವಿಷಾದವಾಗುತ್ತದೆ.
ಅತ್ಯುತ್ತಮ ಚುಟುಕು….. ಬಹಳ ಇಷ್ಟವಾಯಿತು
tumbaa bhaavukaraagi barediddeeri.ishtavaaytu sir.
hennina bagge tudiyuva,basuva hrudaya kandu kantubi bantu sir..!!!
ಹೆಣ್ಣನ್ನು ಕೀಳಾಗಿ ನೋಡುವವರು ಇತ್ತ ಗಮನ ಕೊಡುವಂತಾಗಲಿ..
ಮೊಹಮ್ಮದರು (ಸ.ಅ.ವ.ಸ) ತಮ್ಮ ಮಗಳಾದ ಫಾತಿಮಾರನ್ನು ಬಹಳ ಹಚ್ಚಿಕೊಂಡಿದ್ದರಂತೆ. ಎಲ್ಲಿಲ್ಲದ ಪ್ರೀತಿ. ದೇವರ ನಂತರದ ಸ್ಥಾನ ತಾಯಿಗೆ ಎಂದಿದ್ದಾರೆ ಆನಂತರವೇ ತಂದೆಯ ಸ್ಥಾನ. ಅವರ ಉದಾತ್ತ ಧ್ಯೇಯಗಳು ಅವರ ದೇಹಾವಸಾನದ ನಂತರ ಪಂಗಡವಾದದ ಕಾರಣ ಹಲವರ ಮೂಗಿನ ನೇರಕ್ಕೆ ಪಾಲಿಸಲ್ಪಟ್ಟ ಕಾರಣ ಇಂದು ಶಿಯಾ ಸುನ್ನಿ ರಕ್ತಪಾತಕ್ಕೆ ಕಾರಣವಾಗಿದೆ, ಅಮಾಯಕರನ್ನು ಹತ್ಯೆಗೈಯುವ ನರಹಂತಕ ಉಗ್ರವಾದಿಗಳ ಮುಖವಾಣಿಯಾಗುತ್ತಿವೆ….