ಈಗ ತಾನೇ ಓದಿ ಮುಗಿಸಿದೆ..

ಸಂತೋಷ ಉಂಡಾಡಿ, ಬೆಳಗಾವಿ

ಗೆದ್ದೇ ಬಿಟ್ಟೆ! ಕೃತಿ ಕೊಳ್ಳಲು- 70191 82729

ಅಥವಾ http://bahuroopi.in

—-

‘ಗೆದ್ದೇ ಬಿಟ್ಟೆ’ ಪುಸ್ತಕ ಈಗ ತಾನೇ ಓದಿ ಮುಗಿಸಿದೆ.

ಸಾಯಂಕಾಲ 7 ರ ಸುಮಾರಿಗೆ ಶುರು ಮಾಡಿದ್ದೆ, ಒಂದೇ ಸಿಟ್ಟಿಂಗ್ ನಲ್ಲಿ ಓದಿ ಮುಗಿಯುತ್ತಿತ್ತು, ಇನ್ನೇನು ಮುಗಿಯಿತು ಎನ್ನುವಾಗ ಕಾಲ್ ಬಂದು ತೊಂದರೆ ಆಯ್ತು. ಕೊನೆಯ ಐದಾರು ಪುಟ ಈಗ ಓದಿದೆ.

ಪುಸ್ತಕ ಓದುಗರ ಕುತೂಹಲ ಪುಟದಿಂದ ಪುಟಕ್ಕೆ ಹೆಚ್ಚಿಸುತ್ತಾ ಹೋಗುತ್ತೆ. ಪುಸ್ತಕ ಮಕ್ಕಳಿಗೆ ಅಂತಿದ್ದರು, ಹಿರಿಯರು ಕೂಡ ಓದಿ ಖುಷಿ ಪಡಬಹುದು.

ನಿಮ್ಮ ಅನುವಾದದ ಭಾಷೆಯು ಸಹಜವಾಗಿದೆ. ಕಥೆಯಲ್ಲಿ ಸ್ಥಳದ ಹೆಸರು ಹೊರತು ಪಡಿಸಿದರೆ ಕನ್ನಡದ್ದೆ ಕಥೆ ಎನ್ನುವಷ್ಟು ಸಹಜ, ಸುಭಗ ಮತ್ತು ಆಕರ್ಷಕವಾಗಿದೆ ನಿಮ್ಮ ಅನುವಾದ.

ಕಥೆಯ ಮಧ್ಯದಲ್ಲಿ ಎಲ್ಲರಿಗೂ ಬೇಕಾಗುವ ಒಂದು ನೈತಿಕ ಚೌಕಟ್ಟು ಇದೆ . ಮಾತಿನಲ್ಲಿರಬೇಕಾದ ಸೌಜನ್ಯ, ಜೊತೆಗೆ ಕಾರ್ಯದಲ್ಲಿರಬೇಕಾದ ಉತ್ಸಾಹ, ಮುಖ್ಯವಾಗಿ ಹೋರಾಟ ಮತ್ತು ಛಲ. ಬದುಕಿನಲ್ಲಿ ಬರುವ ಹಿನ್ನಡೆ, ಅಪಸವ್ಯ, ದೈಹಿಕ ನ್ಯೂನತೆಗಳನ್ನು ಮೆಟ್ಟಿ ನಿಲ್ಲುವ ಮನೋಭಾವ ಪರಿಣಾಮಕಾರಿಯಾಗಿ ಮೂಡಿಬಂದಿದೆ.

ತಮಿಳುನಾಡಿನಲ್ಲಿ ಈ ಕಥೆಯ ಪಾತ್ರಗಳಾದ ಅಂಬಿಕಾ ಮತ್ತು ದಿವ್ಯಾ ನಿಜವಾಗಿಯೂ ಇರುವರೆಂಬ ಮಾಹಿತಿ ಅವರ ಕುರಿತು ಹೆಮ್ಮೆ ಮೂಡಿಸಿತು. ಮೂಲ ಲೇಖನವನ್ನು ಓದುವೆ.

ಒಂದು ಒಳ್ಳೆಯ ಪುಸ್ತಕ ಓದಿದ ಖುಷಿ ನನ್ನದಾಯ್ತು. ಟೈಟಲ್ ನೋಡಿಯೇ ಈ ಪುಸ್ತಕ ಕೊನೆಯ ಗಳಿಗೆಯಲ್ಲಿ ತಗೊಂಡಿದ್ದೆ. ಚೆನ್ನಾಗಿದೆ.

ನನ್ನ ಮಕ್ಕಳಿಗೆ ಈ ಕಥೆ ನಿರೂಪಿಸಿದೆ. ದೊಡ್ಡ ಮಗಳು ಓದುವಳೆಂಬ ಭರವಸೆ ಇದೆ. ಮತ್ತೊಮ್ಮೆ ತಮಗೆ ಧನ್ಯವಾದಗಳು. ಮೂಲ ಲೇಖಕರಿಗೂ ನನ್ನ ವಂದನೆ ತಿಳಿಸಿ.

ಈಕೆ ಅಕ್ಷರಾ ಉಂಡಾಡಿ (ಶ್ರೀ ಸಂತೋಷ ಉಂಡಾಡಿಯವರ ಮಗಳು) ೪ ನೇ ತರಗತಿ ಓದುತ್ತಿದ್ದಾಳೆ. ಮಕ್ಕಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಇಂಥ ಮಕ್ಕಳು ತುಂಬಾ ವಿಶೇಷ ಎನಿಸುತ್ತಾರೆ.

ಅವಳು ಪುಸ್ತಕ ಓದಿ, ಅಭಿಪ್ರಾಯ ಬರೆದಿದ್ದಾಳೆ-ಇಲ್ಲಿ ಹಾಕಿದ್ದೇನೆ.

ನನಗೆ ಬಂದ ವಿಮರ್ಶೆಗಳಲ್ಲಿ ಅತೀ ವಿಶಿಷ್ಟವಾದ ವಿಮರ್ಶೆ ಇದು. ಮಕ್ಕಳಿಗಾಗಿ ಬರೆದ ಪುಸ್ತಕವನ್ನು ಮಕ್ಕಳೇ ಓದಿ, ಅಭಿಪ್ರಾಯ ಹೇಳುವುದು ನಿಜಕ್ಕೂ ಶ್ಲಾಘನೀಯ.

ಅಕ್ಷರಾಳಿಗೆ ನನ್ನ ಧನ್ಯವಾದ. ಬಹುಶಃ ಅವಳಿಗೆ ಅಕ್ಷರಗಳು ಒಲಿದಂತಿವೆ, ಮುದ್ದಾದ ಬರವಣಿಗೆ.. ಹೀಗೇ ಸಾಗಲಿ ಅವಳ ಅಕ್ಷರ ಪ್ರೀತಿ…..

To, Akshara

Thank you very much dear for reading and opining about a book. It’s very important to read and express your honest opinion. I am glad to learn that you enjoyed reading a book and especially loved Ambika’s character.

Keep reading…..

All the best

ತಾವೂ ಓದಿ, ಕಥೆ ನಿರೂಪಿಸಿ, ಮಗಳಿಗೂ ಓದುವಂತೆ ಪ್ರೇರೇಪಿಸಿದ ಶ್ರೀ ಸಂತೋಷ ಉಂಡಾಡಿ ಯವರಿಗೆ ವಿಶೇಷ ಧನ್ಯವಾದ.

‍ಲೇಖಕರು avadhi

October 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: