ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ ‘ಅಮ್ಮ ಪ್ರಶಸ್ತಿ’ ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ..

ರಂಜಾನ ದರ್ಗಾ

ಧರಿನಾಡಿನ ಸಂಸ್ಕೃತಿಯ ಸಂಕೇತವಾಗಿದ್ದ ದೇಶಾಂಶ ಹುಡಗಿ ಅವರನ್ನು ಕಳೆದುಕೊಂಡು ಬೀದರ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಬಡವಾಯಿತು.

ಅವರ ಸಂಸ್ಕಾರಯುತವಾದ ನಡೆ ನುಡಿ ಎಂಥವರ ಮನಸ್ಸನ್ನೂ ಸೂರೆಗೊಳ್ಳುತ್ತಿತ್ತು.

ಬೀದರ ಜಿಲ್ಲೆಯ ಯುವಸಾಹಿತಿಗಳಿಗೆ ಅವರು ಆಶಾಕಿರಣವಾಗಿದ್ದರು. ಅವರ ಸಂಘಟನಾ ಶಕ್ತಿ ಸರಳ ಸಹಜವಾಗಿತ್ತು. ಎಲೆ ಮರೆಯ ಕಾಯಿಯಂತೆ ಬದುಕುತ್ತ ಸಾಹಿತ್ಯ ಸಂಘವನ್ನು ಬೆಳೆಸುವಲ್ಲಿ ಸಫಲರಾಗಿದ್ದರು.

ಬೀದರಗೆ ತನ್ನದೇ ಆದ ಕನ್ನಡ ಭಾಷೆ ಇದೆ ಮತ್ತು ತನ್ನದೇ ಆದ ಸೌಹಾರ್ದ ಸಂಸ್ಕೃತಿ ಇದೆ ಎಂದು ತೋರಿಸಿಕೊಟ್ಟವರಲ್ಲಿ ಇವರು ಪ್ರಮುಖರು. ತಮ್ಮನ್ನು ಬಣ್ಣಿಸಿಕೊಳ್ಳದೆ ಉದಾತ್ತವಾಗಿ ಬದುಕಿ ಹೋದರು.

ಲೋಕದಂತೆ ಬಾರರು, ಲೋಕದಂತೆ ಇರರು,

ಲೋಕದಂತೆ ಹೋಗರು ನೋಡಯ್ಯಾ.

ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು,

ಮುಕ್ತಿಯಂತೆ ಹೋಹರು ನೋಡಯ್ಯಾ

ಉರಿಲಿಂಗದೇವಾ ನಿಮ್ಮ ಶರಣರು

ಉಪಮಾತೀತರಾಗಿ ಉಪಮಿಸಬಾರದು.

-ಉರಿಲಿಂಗದೇವರು

‍ಲೇಖಕರು avadhi

26 November, 2020

1 Comment

  1. D.m.nadaf

    ದೇಶಾಂಶ ಹುಡಗಿ ಬೀದರಿ ನ ಕೆಮ್ಮಣ್ಣ ಕುಡಿ. ಅವರ ಸಾಹಿತ್ಯ ಸೇವೆ ಮತ್ತು ಎಳೆಯ ಲೇಖಕರ ಕುರಿತ ಕಳಕಳಿ ಮರೆಯಲಾಗದ್ದು. ಎಳೆಯರನ್ನುು ಬೆಳೆಸುವ ಇಂಥ ಕಾಳಜಿಯನ್ನು
    ನಾನು ಶಾಂತರಸರ ನಂತರ ಇವರಲ್ಲಿಯೇ ಕಂಡಿರುವೆ.
    ತಮ್ಮ ಕೊನೆಯ ಉಸಿರು ಇರುವ ವರೆಗೂ ಸಾಹಿತ್ಯ ಸೇವೆಯನ್ನು ಮಾಡಿಕೊಂಡಿದ್ದ ದೇಶಂಶ ಹುಡುಗಿ ಅವರು ಇಂದಿನ ತಲೆಮಾರಿಗೆ ಆದರ್ಶ ಲೇಖಕರಾಗಿದ್ದರು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading