
ಎ ಎಂ ಪ್ರಕಾಶ್
ನನ್ನಮ್ಮನ ತಂದೆ ನಾಗೇಶರಾಯರು 30-6-1932 ರಂದು ಕೊಂಡು ತಂದ ಗಡಿಯಾರ.
ಈಗ ಇದು ನಮ್ಮ ಮನೆಯಲ್ಲಿದೆ ಎಂಬುದು ಹೆಮ್ಮೆಯ ವಿಷಯ.

ಗಡಿಯಾರದ ಮುಂದೆ
ಇಂದು ನೀ ಅಜ್ಜನ ಮನೆಗಾಗಮಿಸಿದಾ ದಿನ
ಇಂದಿಗೆ ಎಂಬತ್ನಾಲ್ಕು ತುಂಬಿ
ಎಂಬತೈದರ ಹೊಸ್ತಿಲು
ತುಂಬು ಕಂಠದಿ ಕಾಲವ ತಿಳಿಸುವ ನಿನ್ನೀ
ನಿರಂತರ ಕಾಯಕಕ್ಕೆ ನಮೋ ನಮೋ.
ಅಜ್ಜನ ಮನೆಯ ಗೋಡೆಯನ್ನಲಂಕರಿಸಿದ ನೀನು
ಅಜ್ಜನ ಸ್ಪರ್ಶ, ಆರೈಕೆ, ವಾರಕ್ಕೊಮ್ಮೆ ಕಟ್ಟುನಿಟ್ಟಿನ ಆಹಾರ ಪಡೆದು ಬೆಳೆದ ಅದೃಷ್ಟವಂತ.
ನನ್ನ ಬಾಲ್ಯದ ಪ್ರತೀಕವಾಗಿ ನಿಂತ ಧೀಮಂತ
ಪುಟ್ಟ ಕಣ್ಣುಗಳಗಲಿಸಿ, ಕಿವಿಗಳರಳಿಸಿ
ನಿನ್ನ ತುಂಬು ದನಿಯನ್ನು ಆಲಿಸಿದ ದಿನಗಳಷ್ಟೋ.
ಈಗಲೂ ನಿನ್ನ ಮುಂದೆ ನಿಲ್ಲುತ್ತೇನೆ
ಅದೇ ಮುಗ್ಧತೆ, ಬಾಲ್ಯದ ನೆನಪುಗಳ ಹೊತ್ತು
ಅಲ್ಲದೆ
ನೆರೆ ಕೂದಲು, ಮಾಗಿದ ಮನಸು,
ಮಕ್ಕಳು, ಮರಿಗಳ ಹೊತ್ತು
ಮುಂದುವರೆಯಲಿ
ನಿನ್ನ ನಿಸ್ವಾರ್ಥ ಸೇವೆ
ನಮಗಾದರ್ಶವಾಗಲಿ
ನಿನ್ನ ಗಾಂಭೀರ್ಯದ ನಡೆ





Gadiyaranilluvudilla
ಈ ಗೋಡೆ ಗಡಿಯಾರ ಈಗಲೂ ಕೆಲಸ ಮಾಡುತ್ತಿದೆಯಾ? ಕುತೂಹಲಕ್ಕೆ ಕೇಳುತ್ತಿದ್ದೇನೆ.