ಅಲ್ಲಿ ನಾಗಾ ಹೆಣ್ಣು ಮಗಳು ಲೀಲಾ ಎಂಬಾಕೆಯನ್ನು ವಿವಾಹವಾದ
ಈಕೆ ಭಾರತದ ಗಿರಿಜನ ಪ್ರಪಂಚದ ಪಿತಾಮಹಾ, ಹಾಗೂ ವಿಶ್ವ ವಿಖ್ಯಾತ ಸಮಾಜ ಶಾಸ್ತ್ರಜ್ಞ ವೇರಿಯರ್ ಎಲ್ವಿನ್ ನ ಪತ್ನಿ ಕೋಶಿ. ಮಧ್ಯಪ್ರದೇಶದ ರಾಜಗೊಂಡ ಎಂಬ ಬುಡಕಟ್ಟು ಜನಾಂಗದ ಹೆಣ್ಣು ಮಗಳು. ಈಕೆಯ ಜೊತೆ ಹತ್ತು ವರ್ಷ ದಾಂಪತ್ಯ ನಡೆಸಿ, ಎರಡು ಮಕ್ಕಳನ್ನು ಕರುಣಿಸಿ, ಏನೂ ಆಗದವನಂತೆ ಎಲ್ವಿನ್ ನಾಗಲ್ಯಾಂಡ್ ಹೊರಟು ಹೋದ.ಅಲ್ಲಿ ನಾಗಾ ಹೆಣ್ಣು ಮಗಳು ಲೀಲಾ ಎಂಬಾಕೆಯನ್ನು ವಿವಾಹವಾದ. 1964ರಲ್ಲಿ ಆತ ತೀರಿ ಹೋದಾಗ, ಕೋಟ್ಯಾಂತರ ರೂ. ಬೆಲೆ ಬಾಳುವ ಕೊಲ್ಕತ್ತದ ಬಂಗಲೆ, 60 ಎಕರೆ ಎಸ್ಟೇಟ್ ಎಲ್ಲವೂ ಲೀಲಾಳ ಪಾಲಾದವು.
ಜಗತ್ತಿನ ಬಹುತೇಕ ವಿ.ವಿ.ಗಳಲ್ಲಿ ಪಠ್ಯವಾಗಿರುವ ಎಲ್ವಿನ್ ಕೃತಿಗಳ ಗೌರವ ಧನ ಎರಡನೇ ಹೆಂಡತಿಯ ಪಾಲಾಗುತ್ತಿದೆ. ಇತ್ತ ಮಧ್ಯಪ್ರದೇಶದ ದಿಂಡೋರ ಜಿಲ್ಲೆಯ ರೈತ್ವಾರ್ ಎಂಬ ಹಳ್ಳಿಯಲ್ಲಿ ವಿಧವೆಯಾಗಿ, ಕೂಲಿ ಕೆಲಸ ಮಾಡುವ ಸೊಸೆಯೊಂದಿಗೆ ಕೋಶಿ ಬದುಕುತ್ತಿದ್ದಾಳೆ. ಗರೀಬಿ ಕಾಲೋನಿ ಎಂಬ ಬಡವರು ವಾಸಿಸುವ ಊರಾಚೆಗಿನ ಮನೆಯಲ್ಲಿರುವ ಈಕೆಗೆ ಮಧ್ಯಪ್ರದೇಶ ಸರ್ಕಾರ 600 ರೂಪಾಯಿ ಮಾಶಾಸನ ನೀಡುತ್ತಿದೆ.
ಈಕೆ ಎಲ್ವಿನ್ ಅನ್ನು ಮದುವೆಯಾದಾಗ ಈಕೆಯ ವಯಸ್ಸು ಕೇವಲ13, ಆತನ ವಯಸ್ಸು 38. ಈಗ ಸುಮಾರು 97 ಅಥವಾ 98 ವಯಸ್ಸಾಗಿರುವ ಕೋಶಿಗೆ ನೆನಪಿನ ಶಕ್ತಿ ಮಾಸಿದೆ. ಆತನ ಕಪ್ಪು ಬಿಳುಪಿನ ಚಿತ್ರವೊಂದು ಕೋಶಿಯ ಏಕೈಕ ಆಸ್ತಿ. ನನ್ನ ನಕ್ಷಲ್ ಕಥನದಲ್ಲಿ ಕೋಶಿ ಬದುಕು ಮತ್ತು ಬವಣೆ ಕುರಿತು “ವೇರಿಯರ್ ಎಲ್ವಿನ್ ನ ವಂಚನೆಯ ಪ್ರಪಂಚ” ಹೆಸರಿನಲ್ಲಿ ಒಂದು ಅಧ್ಯಾಯ ಬರೆದಿದ್ದೀನಿ.
ನಾಳೆ ಓದಿ: ವೆರಿಯರ್ ಎಲ್ವಿನ್ ನ ವಂಚನೆಯ ಪ್ರಪಂಚ








ಹಿಂದೊಮ್ಮೆ ಇವರ ಬಗ್ಗೆ ಓದಿದ್ದನ್ನು ಇಲ್ಲಿರುವ ಚಿತ್ರ ನೆನಪಿಸಿತು. ಬದುಕೇ ವಿಚಿತ್ರ ಅಥವಾ ಮನುಷ್ಯನೇ ವಿಚಿತ್ರ… ಒಂದೆಡೆ ಮಾನವ ದಾನವ ಎರಡೂ ಒಬ್ಬನೇ!
‘ ಅಲ್ಲಿ ನಾಗಾ ಹೆಣ್ಣು ಮಗಳು ಲೀಲಾ ಎಂಬಾಕೆಯನ್ನು ವಿವಾಹವಾದ ಜಗದೀಶ್ ಕೊಪ್ಪ ಈಕೆ ಭಾರತದ ಗಿರಿಜನ ಪ್ರಪಂಚದ ಪಿತಾಮಹ ‘ ಎಂದರೇನು?
ಯಾರು ಯಾರನ್ನು ಎಲ್ಲಿ ಮದುವೆಯಾದರು?
‘ ಅಲ್ಲಿ ನಾಗಾ ಹೆಣ್ಣು ಮಗಳು ಲೀಲಾ ಎಂಬಾಕೆಯನ್ನು ವಿವಾಹವಾದ ಜಗದೀಶ್ ಕೊಪ್ಪ ಈಕೆ ಭಾರತದ ಗಿರಿಜನ ಪ್ರಪಂಚದ ಪಿತಾಮಹ”
ನಿಜವಾಗ್ಲೂ ಈ ಮೇಲಿನ ವಾಕ್ಯ ರಚನೆ ಹೇಗಿದೆ ಎಂದರೆ ಶ್ರೀ ಜಗದೀಶ್ ಕೊಪ್ಪ ಅವರು ನಾಗಾ ಹೆಣ್ಣುಮಗಳು ಲೀಲಾ ಎಂಬಾಕೆಯನ್ನು ಮದುವೆಯಾದರು ಮತ್ತು ಆ ಲೀಲಾ ಭಾರತದ ಗಿರಿಜನ ಪ್ರಪಂಚದ ಪಿತಾಮಹ ಎಂದೇ ನಾನು ಓದಿಕೊಂಡು (ಅಂದರೆ ಓದಿದಾಗ ಹಾಗೆ ಅರ್ಥ ಮಾಡಿಕೊಂಡು!!) ಅಗದಿ ಭಯಂಕರ ಕುತೂಹಲದಿಂದ ಲೇಖನ ಓದಿದೆ!!!
ಅದೇನೇ ಇರಲಿ, ಎಲ್ವಿನ್ ಕೋಶಿಯನ್ನು ಬಿಟ್ಟಿದ್ದು ಸರಿಯೇ ತಪ್ಪೇ ಎಂಬುದಕ್ಕಿಂತ, ಯಾವುದೇ ಕಾರಣಕ್ಕೆ ಬಿಟ್ಟಿರಲಿ, ಕೋಶಿ ಅವರ ಬದುಕಿಗೆ ಸಮರ್ಪಕ ಆಧಾರ (ಸೂಕ್ತ ರೀತಿಯ ಜೀವನಾಂಶ) ಕಲ್ಪಿಸದೇ ಹಾಗೆ ಊಟ ಮಾಡಿದವರು ಎಲೆ ಬಿಸುಟಿ ಎದ್ದಂತೆ ಕೋಶಿಯ ಬದುಕಿನಂಗಳದಿಂದ ಎದ್ದು ನಡೆದಿದ್ದು ನನಗೇಕೋ ಕ್ರೌರ್ಯ ಎಂದೇ ಎನ್ನಿಸುತ್ತದೆ.
-ಸುಮಂಗಲಾ
nambalikkaguttilla koppa, naaleya lekhanadalli enide? kutoohaladinda kaayuttiruve
ಇವೆಲ್ಲಾ ನೀತಿ ನಿಯಮ ಓದುವ, ಹೋರಾಟದ ಮುಖವಾಡ ಹೊತ್ತವರ ಕಥೆ.