’ಇವರು ನಿಮಗೂ ಸಿಕ್ಕಿದ್ರಾ?’ – ರಾಘವೇಂದ್ರ ಜೋಶಿ ಕೇಳ್ತಾರೆ

ರಾಘವೇಂದ್ರ ಜೋಶಿ

ಸುಮ್ಮನೇ ಇದು ನೆನಪಾಯಿತು.

ಬಾಲ್ಯದಲ್ಲಿ ಒಂದು ವಿಚಿತ್ರ ಜನಾಂಗವನ್ನು ನೋಡುತ್ತಿದ್ದೆ. ಎರಡು ಅಥವಾ ಮೂರ್ನಾಲ್ಕು ಜನರ ಗುಂಪದು. ಕಾವಿ ಬಟ್ಟೆ ಧರಿಸಿ, ವಿಭೂತಿ ಹಚ್ಚಿಕೊಂಡು, ಕೈಯಲ್ಲಿ ಕಂದೀಲು ಹಿಡಿದುಕೊಂಡಿರುತ್ತಿದ್ದ ಈ ಅಲೆಮಾರಿ ಗುಂಪು ರಾತ್ರಿ ಹೊತ್ತು ಗದುಗಿನ ಮನೆಮನೆಗೆ ಭೇಟಿ ನೀಡಿ ತಮ್ಮಲ್ಲಿನ ಕಲೆ ಪ್ರದರ್ಶಿಸುತ್ತಿತ್ತು. ಅದೊಂದು ವಿಚಿತ್ರ ಕಲೆ. ಬಹುಶಃ ಇವತ್ತಿನ ಅಬಾಕಸ್ ಅಥವಾ ಅಲ್ಗಾರಿದಂ ಅನ್ನುವದನ್ನು ಸೇರಿಸಿ ಮಿಶ್ರಣ ಮಾಡಿದ ಕಲೆ. ಅವರು ತಾವು ಭಿಕ್ಷೆಗೆಂದು ಭೇಟಿ ನೀಡುತ್ತಿದ್ದ ಮನೆ ಮುಂದೆ ನಿಂತು ಆಯಾ ಮನೆ ಮಾಲೀಕನಿಗೆ “ನಿಮ್ಮ ಮನೆ ದೇವರು ಯಾವುದು..” ಅಂತ ಪ್ರಶ್ನಿಸುತ್ತಿದ್ದರು. ಮನೆ ಮಾಲೀಕ ಅದಕ್ಕೆ ಉತ್ತರಿಸುತ್ತಿದ್ದ. ಆ ಹೊತ್ತಿನಲ್ಲಿ ನಾಲ್ಕು ಜನರ ಈ ಗುಂಪಿನ ಪೈಕಿ ಒಬ್ಬ ಮಾತ್ರ ದೂರ ನಿಂತಿರುತ್ತಿದ್ದ. ಆತನಿಗೆ ತನ್ನ ಗುಂಪು ಮತ್ತು ಮಾಲೀಕನ ಮಧ್ಯೆ ಏನು ಮಾತುಕತೆ ನಡೆಯುತ್ತಿದೆ ಅಂತ ಕೂಡ ಗೊತ್ತಾಗುವ ಚಾನ್ಸ್ ಇರಲಿಲ್ಲ. ಹೀಗಿರುವಾಗ ಮಾಲೀಕನ ಹತ್ತಿರ ಮನೆ ದೇವರ ಹೆಸರನ್ನು ತಿಳಿದುಕೊಂಡ ಈ ಗುಂಪು ಅಲ್ಲಿಂದಲೇ “ಎರಡು ಚಪಾತಿ, ನಾಲ್ಕು ಲಾಡು..” ಅಂತ ಈ ದೂರ ನಿಂತವನಿಗೆ ಕೂಗಿ ಹೇಳುತ್ತಿತ್ತು. ತಕ್ಷಣ ಈತ “ಕೃಷ್ಣ ಪರಮಾತ್ಮ..” ಅಂತ ಮನೆ ದೇವರ ಹೆಸರನ್ನು ಡಿಕೋಡ್ ಮಾಡುತ್ತಿದ್ದ!
ಇದೇ ಥರದ ಆಟದಲ್ಲಿ ಆಯಾ ಮನೆಯವರ ತಾತ, ಮುತ್ತಜ್ಜಿ ಸೇರಿದಂತೆ ಎಲ್ಲ ವಂಶಾವಳಿಗಳೂ ನಾಲ್ಕು ಚಪಾತಿ, ಎಂಟು ರೊಟ್ಟಿ, ಮೂರು ಹೋಳಿಗೆ, ಬದ್ನೇಕಾಯಿ ಪಲ್ಯ, ಕೊಡಪಾನ, ಚಮಚ, ಸೌಟು, ಮೊಸರನ್ನಗಳ code ಸಂಕೇತಗಳಲ್ಲಿ ಹೊರ ಬರುತ್ತಲಿದ್ದವು. ನನಗೆ ನೆನಪಿದ್ದಂತೆ ದೂರದಲ್ಲಿ ನಿಂತು ಉತ್ತರಿಸುತ್ತಿದ್ದ ವ್ಯಕ್ತಿಯ ರಿಸಲ್ಟ್ 99.9% ಸರಿಯಾಗಿರುತ್ತಿತ್ತು..
ತುಂಬ ಸಾಧು ಜನಗಳಾಗಿದ್ದ ಇವರೆಲ್ಲ ಯಾರು? ಎಲ್ಲಿ ಹೋದರು? ಇಂಥವರು ನಿಮ್ಮ ಬಾಲ್ಯದಲ್ಲೂ ಸಿಕ್ಕಿದ್ದರೇ?
 

‍ಲೇಖಕರು G

November 15, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. lalithasiddabasavaiah

    very interesting, this is first time am hearing abt these people.

    ಪ್ರತಿಕ್ರಿಯೆ
  2. ಗುಡ್ಡಪ್ಪ

    ನನ್ನ ಬಾಲ್ಯದಲ್ಲಿ ನಾನು ನೋಡಿದ್ದ ನೆನಪಿದೆ. ಇವರಿಗೂ ಕೂಡ ನಾವು “ಸಾರೂ ಐನಾರು” ಎನ್ನುತ್ತಿದ್ದೆವು. ( ಇದೇ ಕ್ಯಾಸ್ಟೂಮಿನಲ್ಲಿ ಒಬ್ಬರೇ ಬಂದು ಮಳೆ-ಬೆಳೆಗಳ ಬಗ್ಗೆ ‘ಸಾರು’ತ್ತಿದ್ದವರಿಗೂ ನಾವು ಸಾರೂ ಐನಾರು ಎನ್ನುತ್ತಿದ್ದೆವು.)
    ದೂರದಲ್ಲಿ ನಿಂತು ಉತ್ತರಿಸುತ್ತಿದ್ದ ವ್ಯಕ್ತಿ “ಸೂಯೀ(?) ಬಾ ಚನ್ನಯ್ಯ, ಸೂಯೀ(?) ಬಾ ಮಲ್ಲಯ್ಯ ” ಎಂಬ ಹಾಡು ಹೇಳಿ, ಡಿಕೋಡ್ ಮಾಡಿದ ಪದ ಹೇಳುತ್ತಿದ್ದ ಎಂದು ನೆನಪು.

    ಪ್ರತಿಕ್ರಿಯೆ
  3. J.S.Ganjekar

    ನನ್ನ ಬಾಲ್ಯದಲ್ಲಿ ನಾನು ನೋಡಿದ್ದ ನೆನಪಿದೆ. ತುಂಬಾ ಕುತುಹಲಕಾರಿ ಜನಾಂಗ. ಡಿಕೋಡ್ ಮಾಡಿದ ಪದ ಹೇಳುತ್ತಿದ್ದ ಎಂದು ನೆನಪು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: