ಕನ್ನಡಕ್ಕೊಂದು ಹೊಸ ಸಾಧ್ಯತೆ ದಕ್ಕಿಸುವ ಮೈಲ್ಯಾಂಗ್ ಪ್ರಯತ್ನಕ್ಕೆ ಕಳೆದ ಆರು ತಿಂಗಳಿಂದ ಎಡೆಬಿಡದೇ ದುಡಿದ ತಂಡದಲ್ಲಿ ನಾನೂ ಒಬ್ಬ. ಇದು ಹೇಗೆ ಸಾಧ್ಯ ಆಯ್ತು ಅನ್ನುವ ಬಗ್ಗೆ ಇನ್ನೊಂದು ದಿನ ವಿವರವಾಗಿ ಹೇಳುವೆ. ಇವತ್ತು ಆ್ಯಪ್ ಬಿಡುಗಡೆಯಾಗುತ್ತಿದೆ. ನೂರಕ್ಕೂ ಹೆಚ್ಚು ಇಬುಕ್ಸ್, ನಾಲ್ಕು ಆಡಿಯೋ ಪುಸ್ತಕಗಳು ಹಾಗೂ ಹೊಸತೊಂದು ಪುಸ್ತಕ ಪ್ರಿಂಟ್, ಇಬುಕ್ ಹಾಗೂ ಆಡಿಯೋ ಆವೃತ್ತಿಗಳಲ್ಲಿ ಬಿಡುಗಡೆಯಾಗುತ್ತಿದೆ. ಟೆಕ್ನಾಲಜಿ ಪ್ರಪಂಚದಲ್ಲಿ ಕಲಿತಿದ್ದರಲ್ಲಿ ಎಷ್ಟೆಲ್ಲ ಕನ್ನಡಕ್ಕೆ ತರಲು ಸಾಧ್ಯವೋ ಆ ಎಲ್ಲವನ್ನೂ ಪ್ರಾಮಾಣಿಕವಾಗಿ ಮೈಲ್ಯಾಂಗ್ ಮಾಡಿದೆ. ಇದು ಓದುಗರು, ಪ್ರಕಾಶಕರು ಮತ್ತು ಬರಹಗಾರರನ್ನು ಒಂದು ಕುಟುಂಬದಂತೆ ಸೇರಿಸಿ ಕನ್ನಡಕ್ಕೆ ಇನ್ನೊಂದಿಷ್ಟು ಬಲ ತುಂಬಿದರೆ ಅದಕ್ಕಿಂತ ಸಂತಸ ಇನ್ನೊಂದಿಲ್ಲ.
ಆ್ಯಪ್ ಈಗ ಆ್ಯಂಡ್ರಾಯ್ಡ್ ಫೋನ್ ಮತ್ತು ಟ್ಯಾಬ್ ಹೊಂದಿರುವವರಿಗೆ ಸಿಗುತ್ತಿದೆ. ಭೇಟಿ ಕೊಡಿ:
https://mylang.in/pages/mylang-mobile-apps
ಮೈಲ್ಯಾಂಗ್ ಕನಸು ನನ್ನ ಗೆಳೆಯರಾದ ಪವಮಾನ್ ಪ್ರಸಾದ್ ಅವರದ್ದು. ಅವರ ಕನ್ನಡದ ಕುರಿತ ಕನಸುಗಳು ದೊಡ್ಡವು. ಸಂದರ್ಭವೊಂದು ಕೂಡಿ ಬಂದು ನಾನೂ ಇದರಲ್ಲಿ ಕೈಜೋಡಿಸುವಂತಾದದ್ದು ನನ್ನ ವೃತ್ತಿ ಜೀವನದ ತಿರುವುಗಳಲ್ಲೊಂದು.
ನಿಮ್ಮ ಹಾರೈಕೆ, ಪ್ರೀತಿ ಇರಲಿ ಗೆಳೆಯರೆ.. ಇವತ್ತು ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಬೆಳಿಗ್ಗೆ ಹತ್ತೂ ಕಾಲಿಗೆ ಬನ್ನಿ. ಸಿಗೋಣ.
-ವಸಂತ ಶೆಟ್ಟಿ







ಕನ್ನಡಪರ ತಮ್ಮ ಕಾರ್ಯಕ್ಕೆ ಶುಭಕೋರುವೆ.