ಇಲ್ಲಿ ಬೇಂದ್ರೆ ಅಜ್ಜಾರು ಬಂದಾರೇನ್ರಿ?

ಸಂಗಮೇಶ ಸಜ್ಜನ್ ಇವತ್ತಿನ ಬೇಂದ್ರೆ ಬದುಕು-ಬರಹದ ಬೇಂಗ್ಳೂರಾಗೂ ಬೇಂದ್ರೆ ಕಾರ್ಯಕ್ರಮದಲ್ಲಿ Suma ಮೇಡಂ ನಿರೂಪಣೆ ಮಾಡ್ತಾ ಮಾಡ್ತಾ ಒಂದ್ ಮಾತ್ ಹೇಳಿದ್ರು, ಯಾರೋ ಒಬ್ರು ಬೆಳಗ್ಗೆ ಪಾರ್ಕ್ ನಲ್ಲಿ ವಾಕ್ ಮಾಡ್ತಾ ನಮ್ಮ ಕಾರ್ಯಕ್ರಮ ನೋಡ್ತಾ ಹೋಗ್ಬೇಕಾದ್ರೆ ಒಂದ್ ಪ್ರಶ್ನೆ ಕೇಳಿದ್ರಂತ ಮೇಡಂ ಇಲ್ಲಿ ಬೇಂದ್ರೆ ಅಜ್ಜಾರು ಬಂದಾರೇನ್ರಿ, ಮೇಡಂ ಅಂದ್ರಂತೆ ಹೌದ್ರಿ, ಅವರ ಮಾನಸ ಪುತ್ರ ಸುರೇಶ್ ಕುಲಕರ್ಣಿ ಯವರ ರೂಪದಲ್ಲಿ ಅಂತ ಹೇಳಿದ್ರಂತೆ.ಇಲ್ಲಿ ನಾ ಈ ವಿಷಯ ಯಾಕ್ ಹೇಳ್ತಿದ್ದೀನಿ ಅಂದ್ರ ಒಂದು ಕಾರ್ಯಕ್ರಮವನ್ನು ಜನ ಮೆಚ್ಚುವುದಲ್ಲದೆ ಅಲ್ಲಿ ಬಂದು ಭಾಗವಹಿಸಿ ಕಾರ್ಯಕ್ರಮಕ್ಕೊಂದು ಯಶಸ್ಸನ್ನು ತರುತ್ತಾರಲ್ಲ ಅವಾಗ ಆ ಕಾರ್ಯಕ್ರಮ ಮಾಡಿದಾಗ ಅದಕ್ಕೊಂದು ಸಾರ್ಥಕತೆ ಬರುತ್ತೆ. ನಾವು ಬೇಂದ್ರೆ ಅಜ್ಜನ್ನ ಬರಿ ನಾಕು ತಂತಿ ಮತ್ತ ಸಖೀಗೀತ ದಿಂದ ನೋಡಿದ್ರ ಇವತ್ತ ನಮ್ಮ ಅತಿಥಿಗಳು ಸುರೇಶ ಸರ್ ನಮ್ಮನ್ನು ಬೇಂದ್ರೆ ಅಜ್ಜನ ಹಲವಾರು ಕವನಗಳ ಬಗ್ಗೆ ಮತ್ತು ಅವರ ಒಡನಾಟದ ಬಗ್ಗೆ ತಮ್ಮದೇ ಆದ ಒಂದು ಶೈಲಿಯಲ್ಲಿ ಬಹು ವಿಭಿನ್ನವಾಗಿ ಚಿತ್ರಕಲೆಯೊಂದರಿಂದ ಪಾಂಡಿತ್ಯ ಹೊಂದಿದ್ದರಿಂದ ಪ್ರತಿಯೊಂದು ವಿಷಯವನ್ನು ಸಹ ಚಿತ್ರ ಬಿಡಿಸುವುದರೊಟ್ಟಿಗೆಯೇ ವಿಷಯವನ್ನು ತಿಳಿಸುತ್ತಿದ್ದರು. ಆದರೂ ಈ ವಯಸ್ಸಲ್ಲಿಯೂ ಅವರಿಗಿರುವ ಮಾತನಾಡುವ ಹುಮ್ಮಸ್ಸಿಗೆ ಮೆಚ್ಚಲೇಬೇಕು. ನಾವು ಕಂಡ ಬೇಂದ್ರೆಯನ್ನಾಗಲಿ ಸುರೇಶ ಸರ್ ತಿಳಿಸಿಕೊಟ್ಟ ಬೇಂದ್ರೆಯನ್ನಾಗಲಿ ತುಂಬಾ ವಿಭಿನ್ನವಾಗಿತ್ತು.ನಮ್ಮಲ್ಲಿ ಬೇಂದ್ರೆಯ ಕವನಗಳನ್ನು ತಿಳಿಸಿಕೊಟ್ಟದ್ದು ನಾನಾ ರೀತಿ ಆದ್ದರಿಂದ ಕೆಲವೊಮ್ಮೆ ಈಗಿನವರಿಗೆ ಬೇಂದ್ರೆ ಅಂದ್ರೆ ಬೇಡವಾಗಬಹುದು, ಆದರೆ ಅವರ ಕವನಗಳನ್ನು ಬೇಂದ್ರೆಯವರೇ ಹೇಳಿದ ಹಾಗೆ “ ನಾದ ಬೇಕು ನಾದಬೇಕು, ನಾದನ್ನ ನಾದಬೇಕು ನಾದಕ್ಕೆ ಪ್ರತಿನಾದಬೇಕು… ನಾದ ನ ನಾನಾದ ಮ್ಯಾಲೆ ಬ್ಯಾರೆ, … ಯಾಕ ವಾದ ಬೇಕು?” ನೋಡಿ ಅವರೇ ಹೇಳಿದ ಹಾಗೆ ಅವರ ಕವನಗಳ ಒಳ ಹೊಕ್ಕಾಗ ಮಾತ್ರ ಅದರ ಅರ್ಥ ನಮಗೆ ತಿಳಿಯಬಹುದು ಅಂತ ಬಹು ಸೊಗಸಾಗಿ ಹೇಳಿ, ಅಂತಃಕರಣ ಮನಸ್ಸು ಇದ್ದರೆ ಅದು ನಮ್ಮನ್ನು ಎಲ್ಲಿದ್ದರೂ ಕರೆ ತರುವ ಶಕ್ತಿ ಬೇಂದ್ರೆಯವರಿಗೆ ಇದೆ ಅಂತ ಹೇಳಿ ಮತ್ತೆ ಬೇಂದ್ರೆ ಅಜ್ಜನ ಚೈತನ್ಯದ ಪೂಜೆ ಬಗ್ಗೆಯೂ ಬಹು ಸೊಗಸಾಗಿ ಹೇಳಿದರು.ಇವೆಲ್ಲಾ ಕೇಳಿದಾಗ ನಿಜಕ್ಕೂ ಏನೋ ಒಂದು ತರಹ ಹೇಳಿಕೊಳ್ಳಲಿಕ್ಕೆ ಆಗದಂತಹ ಅನುಭವಗಳಾದಂತಾಯಿತು. ಸುರೇಶ್ ಸರ್ ಅವರ ಮಾತುಗಳು, ವಾತವರಣ ಎಲ್ಲಾ ಸೇರಿ…ಒಟ್ಟಿನಲ್ಲಿ ಇಂದು ನಿಜಕ್ಕೂ ‘ಚೈತನ್ಯದ ಪೂಜೆ ನಡೆದಂತಾಯಿತು’.ಇದೆಲ್ಲದರ ನಡುವೆ ನಮ್ಮ ಸುಮಾ ಮೇಡಮರ ನಿರೂಪಣೆ ಶೈಲಿ ನಿಜಕ್ಕೂ ಅಭಿನಂದನಾರ್ಹ. ಮತ್ತೆ ಇವತ್ತು ಓದಿದ ಕವನಗಳೆಲ್ಲವೂ ಅದ್ಭುತ ಕವನಗಳೇ “ಯುಗದ ಕವಿಗೆ ಜಗದ ಕವಿಗೆ” “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ” ಮತ್ತೆ “ನನ್ನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ ನಾನೂನೂ ನಕ್ಕೇನ” ಇವೆಲ್ಲವನ್ನೂ ಕೇಳುತ್ತ ನಾನಂತೂ ಒಮ್ಮೆ ನನ್ನನ್ನೇ ನಾನು ಮರೆತೇ. ಇವತ್ತಿನ ಕಾರ್ಯಕ್ರಮದಲ್ಲಿ ಅಲ್ಲಲ್ಲಿ ಚುಮುಕಿದ ನಾಕುಹನಿ ತುಂತುರು ಅಜ್ಜನ ಹರುಷಗಂಬನಿ.ಇದೆಲ್ಲದಕ್ಕೂ ಶ್ರಮಿಸುತ್ತಿರುವ ಮೌನೇಶ, ವಿಮಾ ಧಾರವಾಡದಲ್ಲಿದ್ದರು ನಮ್ಮ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತಿರುವ Rajkumar Madiwalar ರಿಗೆ ಮತ್ತೆ ನನ್ನ ಮಿತ್ರರಾದ Harish Kumara P, ಮೌನಿ ಅಂತರಂಗ, Jai Shankar, Girish Siddannavar, Akshay C Gowda Komala Srikantaiah, ಪ್ರಮೀಳ ಮಂಜು ಉರಾಳ Madhav Ajjampur Kalarava Km Srinivasa, Amrutha’s Drawing ಮತ್ತೆ ಆಗಮಿಸಿದ ಎಲ್ಲರಿಗೂ ನನ್ನ ಅನಂತಾನಂತ ಅಭಿನಂದನೆಗಳು ಮತ್ತು ಧನ್ಯವಾದಗಳು.ಡಿ ಯಶೋದಾ ರಾಜು ‘ಬೆಂಗ್ಳೂರಾಗೂ ಬೇಂದ್ರೆ’- ಈ ಹೆಸರೇ ಒಂದು ಆಕರ್ಷಕ.ಬೇಂದ್ರೆ ಬರಹ ಕುರಿತ ಕಾರ್ಯಕ್ರಮ.ನಿನ್ನೆ ಕಬ್ಬನ್ ಪಾಕ್೯ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೇಂದ್ರೆ ಸಾಹಿತ್ಯವಷ್ಟೇ ಅಲ್ಲದೆ ಬೇಂದ್ರೆ ಅವರಿಗಿದ್ದ ಹಲವಾರು ವಿಷಯಗಳಲ್ಲಿನ ಪ್ರಭುತ್ವದ ಬಗ್ಗೆ ಬೇಂದ್ರೆ ಅವರ ಒಡನಾಡಿ, ಬೇಂದ್ರೆ ಅವರ ಕೊನೆಯ 14ವರ್ಷಗಳ ನಿಕಟ ಸಂಪರ್ಕದಲ್ಲಿದ್ದ ಸುರೇಶ್ ವೆಂ. ಕುಲಕರ್ಣಿ ಅವರು ಸೊಗಸಾಗಿ ತಿಳಿಸಿಕೊಟ್ಟರು. ಜೊತೆಗೆ ಸುರೇಶ್ ಅವರ ಚಿತ್ರ- ಚಿತ್ತಾರದ ಕೈಚಳಕ ಮನಸೂರೆಗೊಂಡಿತು.ಮಾತು, ಕತೆ, ಹಾಸ್ಯ, ಹಾಡು, ಕವನ ವಾಚನ ಎಲ್ಲವನ್ನೂ ಒಳಗೊಂಡಿದ್ದ ಈ ಕಾರ್ಯಕ್ರಮ ಬೇಂದ್ರೆಯವರ ಜೀವನಾನುಭವದ ರಸದೌತಣ ನೀಡಿದ್ದಂತೂ ನಿಜ. ಮಾಧವ್ ಅಜ್ಜಂಪುರ ಅವರ ಕಂಠದಲ್ಲಿ ಮೂಡಿಬಂದ ‘ಜೋಗಿ’ ಕವನ ಅದ್ಭುತವಾಗಿತ್ತು. ಇನ್ನಿತರರು ಪ್ರಸ್ತುತಪಡಿಸಿದ ಹಾಡು, ಕವನಗಳೂ ಗಮನಸೆಳೆದವು.ಸುಮಾ ರಮೇಶ್ ಅವರ ನಿರೂಪಣೆ ಸೊಗಸಾಗಿತ್ತು.ಕಾರ್ಯಕ್ರಮದ ಆಯೋಜಕರಾದ ಮೌನೇಶ್ ಕನಸುಗಾರ ಹಾಗೂ ತಂಡಕ್ಕೆ ಇಂತಹ ಸುಂದರ ಕಾರ್ಯಕ್ರಮ ಆಯೋಜಿಸಿದಕ್ಕೆ ಧನ್ಯವಾದಗಳನ್ನು ಹೇಳಲೇಬೇಕು.

‍ಲೇಖಕರು avadhi

December 9, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Shylaja

    ಬೇಂದ್ರೆ ಅಂದ್ರ ಮೈ ನವಿರೇಳಿಸುತ್ತದೆ ಹಾಗೂ ಅವರ ಸಾಹಿತ್ಯ ಬಾಳಿಗೊಂದು ಹೊಸ ಬೆಳಕು ನೀಡುವ ಂ

    ಪ್ರತಿಕ್ರಿಯೆ
  2. T S SHRAVANA KUMARI

    ಇಂತಹ ಕಾರ್ಯಕ್ರಮಗಳು ಅನಂತವಾಗಲಿ

    ಪ್ರತಿಕ್ರಿಯೆ
  3. Girish Babu N

    ಓದಲಿಕ್ಕೆ ಬಹಳ ಸಂತೋ಼ಷವಾಯಿತು, ಇನ್ನು ಅಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸದವರಿಗೆ ಭಾಳ ಖುಷಿ ಆಗಿರಲೇಬೇಕು. ಮಾಹಿತಿಗಾಗಿ ಧನ್ಯಾವಾದ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: