ಇಲ್ಲಿ ಎರಡು ಫೋಟೋಗಳಿವೆ, ಈ ಎರಡರ ನಡುವೆ ಏನಾದರೂ ಸಂಬಂಧ ಇದೆಯಾ ?? ಹ ಹ ಹಾ ಇದೇನು ಹೀಗೆ ಕೇಳ್ತೀರಿ, ಎರಡೂ ನಾಟಕದ ಫೋಟೋ ಗೊತ್ತಾಗಲ್ವಾ ಅಂತೀರಾ..? ಅಷ್ಟೇ ಅಲ್ಲ ಇನ್ನೂ ವಿಶೇಷ ಇದೆ.
ಮೊನ್ನೆ ವಿಜಯನಗರ ಬಿಂಬ ಕಾರ್ಯಕ್ರಮದಲ್ಲಿ ಎಸ್ ವಿ ಕಶ್ಯಪ್ ಹೇಳಿದಾಗಲೇ ನಮಗೂ ಗೊತ್ತಾಗಿದ್ದು-
ಪ್ರಶಾಂತ್ ಹಾಲ್ದೊಡ್ಡೆರಿ ೧೫ ವರ್ಷಗಳ ಹಿಂದೆ ವಿಜಯನಗರ ಬಿಂಬಕ್ಕೆ ‘ಹೋರಾಟದ ಹಾದಿಯಲ್ಲಿ’ ನಾಟಕ ನಿರ್ದೇಶಿಸಿದ್ದರು. ಎ ಎಸ್ ಮೂರ್ತಿ ಅವರು ಬರೆದ ನಾಟಕ ಅದು. ಸುಮಾರು ಎರಡೂವರೆ ಘಂಟೆಗಳ ನಾಟಕ ಅದು. ಅದರಲ್ಲಿ ಪೋಲೀಸ್ ಪಾತ್ರ ಮಾಡಿದ ಚೋಟುದ್ದದ ಹುಡುಗನ ಹೆಸರು ಚೈತನ್ಯ. ೧೫ ವರ್ಷ ಆದ ನಂತರ ಅದೇ ಪ್ರಶಾಂತ್ ಹಾಲ್ದೊಡ್ಡೆರಿ ಅದೇ ವಿಜಯನಗರ ಬಿಂಬಕ್ಕೆ ಅದೇ ಎ ಎಸ್ ಮೂರ್ತಿ ಬರೆದ ಅದೇ ನಾಟಕವನ್ನು ಆಡಿಸಿದರು.
ಎಲ್ಲಾ ಅದೇ ಅದೇ.. ಆದ್ರೆ ಆ ಪೋಲೀಸ್ ಪಾತ್ರ ಮಾಡಿದ್ದ ಹುಡುಗ ಮಾತ್ರ ಹಾಗೇ ಇರಬೇಕಲ್ಲ. ಆತ ೧೫ ವರ್ಷದಷ್ಟು ದೊಡ್ಡದಾಗಿ ಬೆಳೆದಿದ್ದ. ಆದರೆ ಆ ಕಾಲದ ಬಾಲಕ, ಈಗಿನ ಗೃಹಸ್ಥನಿಗೆ ಈ ನಾಟಕದಲ್ಲಿ ಇರಲೇಬೇಕು ಅನಿಸಿತು. ಹಾಗಾಗಿ ಆ ಬಾಲಕನೂ ತೆರೆಯ ಮೇಲೆ ಬಂದ. ಈ ಬಾರಿ ಸ್ವಾತಂತ್ರ್ಯ ಚಳವಳಿಯನ್ನು ಇಲ್ಲವಾಗಿಸುವ ಪೋಲೀಸ್ ನವನಾಗಿ ಅಲ್ಲ. ಸ್ವಾತಂತ್ರ್ಯದ ಮಹತ್ವ ಸಾರುವ ಯುವಕನಾಗಿ
ವಿಜಯನಗರ ಬಿಂಬದ ಮೊದಲ ವರ್ಷದ ನಾಟಕದಲ್ಲಿದ್ದ ಚೈತನ್ಯ ಈಗ ಚಿತ್ರಕೂಟ ಮಾಂಟೆಸರಿಯ ಸಂಸ್ಥಾಪಕ.
ಇಲ್ಲಿರುವುದು ಅದೇ ಚಿತ್ರ. ಕಾಲಚಕ್ರ ಉರುಳುತ್ತಲೇ ಇರುತ್ತದೆ. ಈ ಬಾರಿ ಪೋಲೀಸ್ ಆಗಿರುವ ಹುಡುಗ ಮತ್ತೆ ೧೫ ವರ್ಷದ ನಂತರ ಇನ್ನೇನು ಆಗುತ್ತಾನೋ ಕೇಳೋಣ..
ಅದೇ ವಿಜಯನಗರ ಬಿಂಬ ೩೦ ವರ್ಷದ ಸಂಭ್ರಮ ಆಚರಿಸುವ ಕಾಲದಲ್ಲಿ..
ಚಿತ್ರಗಳು : ಚಂದ್ರಕೀರ್ತಿ








nijavaagalu idhu memorable time. police aagi maadida huduga eega yuvakanaagi ade natakadalli madidhu chennagithu. vijayanagarabimbada yuvakarige namma shaaleya mele yaavagalu E preeethi vishwasa iruvudu santoshavaguthade. avara biduvillada veleyallu namma karyakrama yenda takshana thamma kelasagalannu badigotthi vijayanagarabimbakke baruthare. thumba santhosha haagu huridhumbisuva vishaya
indina dinagaLalli ee reeti aagalu sadhyavaa ? indina yuvakaru endare bari traffic jam galalli silukikondiruttaare, jaagateekaranada prabhaavakke olagaagiruttaare enu heluva kelavarige idondu aparoopada prasanga… aa hale photo sikkidare haaki…
chennaagide.. old photo sigatta nodtini.. aadre haaki sir
yella olledhaagli sir