ನಮ್ಮ ಮನಸಲ್ಲಿ ಹೂ ಇರುವುದಕ್ಕಿಂತ ಚಪ್ಪಲಿ ಇರುವುದು ಒಳಿತು. ಯಾಕೆಂದರೆ ಹೂವಿನಂಗಡಿಯಲ್ಲಿ ಅರಳಿದ್ದು ಹೂವಾಗಿರುತ್ತದೆ, ಮೊಗ್ಗೂ ಮಾಲೆಯಾಗಿರುತ್ತದೆ, ಎಲ್ಲರ ಮುಡಿಯ ಶ್ಯಾಂಪೂಗಂಪು, ಎಣ್ಣೆಗಂಪಿನಲ್ಲಿ ಮೊಗ್ಗು, ಹೂಗಳ ಪರಿಮಳವೆಲ್ಲವೂ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಹೋಗುತ್ತದೆ. ಆ ಎಣ್ಣೆಗಂಪಿನ ನಡುವಲೂ ಅದು ತನ್ನ ಪರಿಮಳವನ್ನು ಕೊಂದುಕೊಳ್ಳದಿದ್ದರೆ ಏನೋ ಪುಣ್ಯ. ಆದಕ್ಕಾಗಿ ಒಂದೇ ಕ್ಷಣ `ಅಬ್ಬಾ, ಸದ್ಯ’ ಎಂಬ ನಿಟ್ಟುಸಿರು. ಆ ಕ್ಷಣದಿಂದಲೇ ಬಾಡತೊಡಗುತ್ತದೆ ಪರಿಮಳದೊಂದಿಗೆ ಮಲ್ಲಿಗೆಯ ತನುಮನ. ಬಿಳಿ ಕಂದಾಗುತ್ತದೆ, ಕೆಂಪಾಗುತ್ತದೆ, ಎಳೆದರೂ ಜಗ್ಗದ ರಬ್ಬರಾಗುತ್ತದೆ, ತನ್ನ ಸೂತ್ರವನ್ನು ಕಿತ್ತುಕೊಂಡು ಕಸವಾಗುತ್ತದೆ.

ಸಂಪೂರ್ಣ ಓದಿಗೆ ಭೇಟಿ ಕೊಡಿ- ಕಳ್ಳ ಕುಳ್ಳ
+++
ಅರವಿಂದ ಅಡಿಗರ ವೈಟ್ ಟೈಗರ್ ಕಾದಂಬರಿಗೆ ಬುಕರ್ ಬಂದ ಮೇಲೆ ಆ ಕಾದಂಬರಿಯ ಬಗ್ಗೆ ಹೆಚ್ಚು ಚರ್ಚೆಯಾಗಬಹುದು, ಪುಸ್ತಕದ ಬಗ್ಗೆ ಒಂದಿಷ್ಟು ಲೇಖನಗಳು ಪ್ರಕಟವಾಗಬಹುದು ಎಂಬ ನಿರೀಕ್ಷೆ ಇತ್ತು. ಪುಸ್ತಕದ ಕೆಲವು ಪುಟಗಳನ್ನು ಓದಿ ನೋಡುವ ಆಸೆಯಿಂದ ನೆಟ್ ನಲ್ಲಿ ಎಲ್ಲಾದರೂ ಆಯ್ದ ಭಾಗ ಸಿಗಬಹುದೆಂದು ಹುಡುಕುವಾಗ ಕಾದಂಬರಿಯ 25 ಪುಟಗಳು ಸಿಕ್ಕವು. ಅಡಿಗರ ಬರವಣಿಗೆ ರುಚಿ ನೋಡುವುದಕ್ಕೆ ಸ್ಯಾಂಪಲ್ಲಿಗೆ ಈ 25 ಪುಟಗಳು ಇಲ್ಲಿ ಕೊಟ್ಟಿದ್ದೀನಿ..

ಸಂಪೂರ್ಣ ಓದಿಗೆ ಭೇಟಿ ಕೊಡಿ- ಒಳಗೂ..ಹೊರಗೂ…
ಇಲ್ಲಿದೆ ವೈಟ್ ಟೈಗರ್…ಓದಿ


0 Comments