೧. ಎನ್ನ ಭವದ ಕೇಡು–ಸುರೆಂದ್ರನಾಥ್
೨. ಒಂದು ಬದಿಯ ಕಡಲು –ವಿವೇಕ್ ಶಾನಭಾಗ್
೩. ಹಕೂನ ಮಟಾಟ –ನಾಗರಾಜ್ ವಸ್ತಾರೆ
![]()
೪. ಪ್ರಶ್ನೆಗಳಿರುವುದು ಶೇಕೃ್ಪಿಯರನಿಗೆ –ಜಿ ಎನ್ ಮೋಹನ್
೫. ಶರೀಫನ ಬೊಗಸೆ–ಮಲ್ಲಿಕಾರ್ಜುನ ತೂಳಹಳ್ಳಿ
![]()
೬. ಗ್ಯಾದರಿಂಗ್
೭. ಸತ್ಯಜಿತ್ ರೇ ಕಥೆಗಳು– ಎನ್ ಶ್ರೀನಿವಾಸ ಉಡುಪ
![]()
೮. ಮಾತು ಸೋತ ಭಾರತ–ಯು ಅರ್ ಅನಂತ ಮೂರ್ತಿ
೯. ಅತಿ ಸಣ್ಣ ಕಥೆಗಳು– ಎಸ್ ದಿವಾಕರ್
೧೦. ನಮ್ಮಮ್ಮ ಅಂದ್ರೆ ನಂಗಿಷ್ಟ– ವಸುದೇಂದ್ರ





jogiyavara prakara ivu recent top ten pusthakagalo athava overall ive jogiyavara top 10 kannada pusthakagalo..? kaLavaLavagthide.. :-O
Namaskara Jogi,
Sathyajit Ray Kathegalu – ittichege prakata aagidda? Yava prakashakaraddu thilisthira?
— aasaktha
ಇದು ಈ ಕ್ಷಣದ ಟಾಪ್ ಟೆನ್. ಟಾಪ್ ಟೆನ್ ಅಂದಾಕ್ಷಣ ಮತ್ತೆ ಕುವೆಂಪು, ಮಾಸ್ತಿ, ಬೇಂದ್ರೆ, ಅಡಿಗ ಅಂತ ಶತಮಾನಷ್ಟು ಹಿಂದೆ ಹೋಗುವುದೊಂದು ರೋಗ. ಹಳೇ ಪುಸ್ತಕಗಳು ಚೆನ್ನಾಗಿವೆ, ಚೆನ್ನಾಗಿಯೇ ಇರ್ತವೆ. ಯಾವಾಗ್ಲೋ ಓದಿದ ಪುಸ್ತಕಗಳನ್ನು ಓದಿ ಅದನ್ನೇ ಜೀವಮಾನ ಪೂರ್ತಿ ಹೇಳುವುದನ್ನು ನಮ್ಮ ಹಿರಿಯ ವಿಮರ್ಶಕರಿಗೆ ಬಿಟ್ಟು ಬಿಡೋಣ.ನಮ್ಮ ಕಾಲದ ಲೇಖಕರು ನನ್ನ ಪಾಲಿಗೆ ಶ್ರೇಷ್ಠರು. ಹೊತ್ತು ಹೋಗುವುದೆನಗೆ ಸತ್ತವರ ಸಂಗದಲ್ಲಿ ಅನ್ನಲಾರೆ. ಹಾಗಿದ್ದರೂ ಈ ಕವಿತೆ ನನಗಿಷ್ಟ-
My days among the Dead are passed;
Around me I behold,
Where’er these casual eyes are cast,
The mighty minds of old:
My never-failing friends are they,
With whom I converse day by day.
ಸತ್ಯಜಿತ್ ರೇ ಕತೆಗಳನ್ನು ಇತ್ತೀಚೆಗೆ ಪ್ರಿಸಂ ಪ್ರಕಟಿಸಿದೆ. ಸೊಗಸಾಗಿದೆ.
ಖಂಡಿತಾ ಓದಬೇಕಾದ ಪುಸ್ತಕ.
-ಜೋಗಿ
Namakskara Jogi,
Sathyajit Ray Kathegala – Ondu pustaka – Prism ittichege prakatisiddu – N Srinivasa Udupa avara anuvaada nodide. B K S Murthy avara innondu pustakavu bandideye? Anuvada chennagideya?
Gathering yaara pustka? Entha pustaka?
— aasaktha
ನಾನು ಹೇಳಿದ್ದೂ ಅದೇರಿ.ಶ್ರೀನಿವಾಸ ಉಡುಪರದ್ದು. ನಾನು ಹೆಸರು ಮರೆತಿದ್ದೆ. ಬಿಕೆಎಸ್ ಮೂರ್ತಿ ಅನ್ನುವ ಹೆಸರು ಎಲ್ಲಿಂದ ಬಂತು ಅಂತ ನೆನಪಿಸಿಕೊಳ್ಳುತ್ತಿದ್ದೇನೆ. ಹೊಳೀತಾ ಇಲ್ಲ.
-ಜೋಗಿ
ಆಸಕ್ತರಿಗೆ,
ಥ್ಯಾಂಕ್ಸ್. ಬಿ ಕೆ ಎಸ್ ಮೂರ್ತಿ ಅಲ್ಲ. ಎನ್ ಶ್ರೀನಿವಾಸ ಉಡುಪ ಎಂದು ತಿಳಿಸಿದ್ದಕ್ಕೆ. ತಿದ್ದುಪಡಿ ಮಾಡಲಾಗಿದೆ. ಗ್ಯಾಥೆರಿಂಗ್ ಯಾರದ್ದು ಎಂದು ಜೋಗಿ ತಿಳಿಸಿದಾಗ ದಾಖಲಿಸುತ್ತೇವೆ. ಕಾಯುತ್ತಿದ್ದೇವೆ ಜೋಗಿಗಾಗಿ.
-ಅವಧಿ.