ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್‌ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿಗೆ ಆಹ್ವಾನ

ಉತ್ತರ ಕರ್ನಾಟಕ ಲೇಖಕಿಯರ ಸಂಘವು ಇನ್‌ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದೊಂದಿಗೆ ಕೊಡಮಾಡುವ ಪ್ರಶಸ್ತಿಗಳಿಗಾಗಿ ಕೆಳಕಾಣಿಸಿದಂತೆ ಕೃತಿಗಳನ್ನು ಆಹ್ವಾನಿಸಲಾಗಿದೆ.

೨೦೧೬ ನೇ ವರ್ಷದ ಪ್ರಶಸ್ತಿಗಾಗಿ ಲಲಿತಪ್ರಬಂಧ/ಜೀವನಚರಿತ್ರೆ/ಆತ್ಮಚರಿತ್ರೆ/ಪ್ರವಾಸಸಾಹಿತ್ಯ ಈ ಪ್ರಕಾರಗಳ ಕೃತಿಗಳನ್ನು ಪರಿಗಣಿಸಲಾಗುವುದು.

ಕೃತಿಗಳು ೨೦೧೦ ರಿಂದ ೨೦೧೬ರ ನೇ ವರ್ಷದ ಅವಧಿಯಲ್ಲಿ ಪ್ರಥಮ ಮುದ್ರಣಗೊಂಡಿರಬೇಕು.

೨೦೧೭ನೇ ವರ್ಷದ ಪ್ರಶಸ್ತಿಗಾಗಿ ಸಣ್ಣಕತೆ ಪ್ರಕಾರವನ್ನು ಪರಿಗಣಿಸಲಾಗುವುದು. ಕೃತಿಗಳು ೨೦೧೩ ರಿಂದ ೨೦೧೭ನೇ ವರ್ಷದ ಅವಧಿಯಲ್ಲಿ ಪ್ರಥಮ ಮುದ್ರಣಗೊಂಡಿರಬೇಕು.

೨೦೧೮ನೇ ವರ್ಷದ ಪ್ರಶಸ್ತಿಗಾಗಿ ವಿಮರ್ಶೆ/ಸಂಶೋಧನೆ ಪ್ರಕಾರವನ್ನು ಪರಿಗಣಿಸಲಾಗುವುದು. ಕೃತಿಗಳು ೨೦೧೪ ರಿಂದ ೨೦೧೮ನೆಯ ಅವಧಿಯಲ್ಲಿ ಪ್ರಥಮ ಮುದ್ರಣಗೊಂಡಿರಬೇಕು.

 

ಈ ಪ್ರಶಸ್ತಿಗಳಿಗೆ ಲೇಖಕಿಯರು ತಮ್ಮ ಸ್ವಂತ ಕೃತಿಗಳನ್ನು ಕಳುಹಿಸಬೇಕು.

ಅನುವಾದಗಳನ್ನು ಮತ್ತು ಪಿಎಚ್.ಡಿ ಪ್ರಬಂಧಗಳನ್ನು ಪರಿಗಣಿಸಲಾಗುವುದಿಲ್ಲ.

ಪ್ರತಿಯೊಬ್ಬ ಲೇಖಕಿಯು ತನ್ನ ಕೃತಿಯ ಮೂರು ಪ್ರತಿಗಳನ್ನು ೨೦ ನವ್ಹಂಬರ್, ೨೦೧೯ರೊಳಗಾಗಿ

ಡಾ. ಶಾಂತಾ ಇಮ್ರಾಪೂರ,

‘ಚಿತ್ತಾರ’, ೧೨ನೆಯ ಕ್ರಾಸ್, ನಿರ್ಮಲನಗರ,

ಧಾರವಾಡ-೫೮೦೦೦೩

ಮೊ: ೯೯೪೫೫೬೩೭೬೩ ಈ ವಿಳಾಸಕ್ಕೆ ಕಳುಹಿಸಬೇಕು.

‍ಲೇಖಕರು avadhi

25 October, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading