ದೇವರಾಜ್ ಹುಣಸಿಕಟ್ಟಿ
ನಾವು ಮನುಷ್ಯರಾಗುತ್ತಿದ್ದೇವೆ
ಹೆಣದ ಮೇಲೆ ಕುಣಿದು
ಕುಪ್ಪಳಿಸಿ ದೇಶ ಭಕ್ತರಾಗುತ್ತಿದ್ದೇವೆ….!
ಅಂತೂ ನಾವು ಈಗೀಗ
ಮನುಷ್ಯರಾಗುತ್ತಿದ್ದೇವೆ….!
ನಾವು ಸತ್ತ ಹೆಣಗಳಿಗಿಂತ ಕಡೇ
ಎಂದು ಸಾಬೀತು ಪಡಿಸಲು
ಮತ್ತೆ ನಾವು ಮನುಷ್ಯರಾಗುತ್ತಿದ್ದೇವೆ…
ಜಟಕಾ ಕಟ್ ಹಲಾಲ್ ಕಟ್ ಗಳ
ಮಧ್ಯೆ ನರ ಸತ್ತ ವಾದ ಮಾಡುತ್ತಾ
ಮೈ ಕಾಯಿಸಿಕೊಳ್ಳುವವರ ನಡುವೆ
ಕಟ್ ಲೆಸ್ ಆಗಿ ನಾವು ಮನುಷ್ಯರಾಗುತ್ತಿದ್ದೇವೆ
ಮುಟ್ಟಿಲ್ಲದ ತಾಯಿಗೆ ಹುಟ್ಟಿದ ಮುಟ್ಟಾಳರ ಮಧ್ಯೆ ನಾವು ಮತ್ತೆ ಮನುಷ್ಯರಾಗುತ್ತಿದ್ದೇವೆ
ಮುಟ್ಟಾದ ಹೆಣ್ಣಿಗೆ ಹುಟ್ಟಿ ಪಶುವಾಗಿ ಮುಂದೆ ಹುಟ್ಟುವ ವರ ಮಧ್ಯೆ ಗುದ್ದಾಡಿ
ಮತ್ತೆ ನಾವು ಮನುಷ್ಯ ರಾಗುತ್ತಿದ್ದೇವೆ
ನಾವು ಮನುಷ್ಯರಾಗುತ್ತಿದ್ದೇವೆ ಎಷ್ಟೇಂದು ಗೊತ್ತೇ….?
ಮೊನ್ನೆ ಮೊನ್ನೆ ಆ ಹೆಣ್ಣು ಮಗುವಿನ
ಮರ್ಮಾoಗ ಉಂಡು ತೇಗಿದ
ಬೇವರ್ಸಿಯ ಚರ್ಮಕ್ಕೆ ಅಂಟಿದ
ಧರ್ಮ ನೋಡಿ ತರ್ಕಿಸುವಷ್ಟು ಮನುಷ್ಯರಾಗಿದ್ದೇವೆ…..!!
ಇನ್ನೆಷ್ಟು ಮನುಷ್ಯರಾಗುವುದು …..
ಇನ್ನೂ ಮನುಷ್ಯರಾಗುವುದು ಇದೆಯೇ?…
ಇದ್ದರೆ ಅದೂ ಆಗುವೆವು …..
ಒಟ್ಟಾರೆ ನಾವು ಮನುಷ್ಯರಾಗಬೇಕು ಅಷ್ಟೇ….
0 ಪ್ರತಿಕ್ರಿಯೆಗಳು