ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಇದ್ದರಿದ್ದೆ ಎದ್ದರೆದ್ದೆ..’ ಎಂದು ಹೊರಟೇಬಿಟ್ಟ ಕೆ ಬಿ ಸಿದ್ಧಯ್ಯ

ಉಜ್ಜಜ್ಜಿ ರಾಜಣ್ಣ

ಅದ್ಯಾವುದೋ ಸಂದರ್ಭದಲ್ಲಿ ತುಮಕೂರು ಬಸ್ ನಿಲ್ದಾಣದಲ್ಲಿ ಅವರು ಕಾರಿನಿಂದ ಇಳಿಸಿ ಜೊತೆಯಲ್ಲಿ ಅವರೂ ಇಳಿದು ರವೊತ್ತು ಮಾತನಾಡಿ ಏ ! ಬಾರೋ ಇಲ್ಲಿ ಎಂದು ಬಸ್ ಹತ್ತಲು ಮಖ ಮಾಡಿದ ನನ್ನ ರಟ್ಟೆ ಹಿಡಿದೆಳೆದರು . ಯಾಕ ಸಾರ್! ಎಂದು ಅವರತ್ತ ತಿರುಗಿದೆ. ಬಾರೊ ಇಲ್ಲಿ ಹೋಗುವಂತೆ ಎಂದು ಪಕ್ಕದಲ್ಲೇ ಹೂವಿನ ಅಂಗಡಿ ಕಡೆ ನಿಂತು ಮತ್ತೆ ಮಾತನಾಡಿದ್ದರು ಆ ಮಹಾ ಧ್ಯಾನಿ ಬಕಾಲ ಮುನಿ. ಹೇ, ಒಂದು ಹೊಸ ಪದ್ಯ ಕೇಳೋ ಎಂದು ಕಿವಿ ಒಬ್ಬೆಗೆ ಬಂದು ‘ಗಲ್ಲೆ ಬಾನಿ’ ಪದ್ಯದ ಪ್ರಾರಂಭಿಕ ಸಾಲಗಳನ್ನು ಹೇಳಿದ್ದರು. ಅವರಿಂದಲೇ ಅಂದು ಅವರ ಪದ್ಯ ಕೇಳುವ ಅವಕಾಶ ನನ್ನದಾಗಿತ್ತು.

ಇದ್ದರಿದ್ದೆ ಎದ್ದರೆದ್ದೆ
ಇಲ್ಲೆ ನಿದ್ದೆ ಇಲ್ಲೆ ಮುದ್ದೆ
ಗಲ್ಲೆಬಾನಿ ಒಳಗೆ ಇದ್ದೆ

ಹೀಗೆ, ಕಣೊ ಪದ್ಯ ಇನ್ನೂ ಮುಂದುವರಿಯುತ್ತದೆ ಈಗ ನಡಿ ಎಂದು ಬೆನ್ನು ಸರವಿ ಬಸ್ ಹತ್ತಿಸಿದ್ದರು

ಎಂ ಜಿ ಚಂದ್ರಶೇಖರಯ್ಯ

1979ರಲ್ಲಿ ನನಗೆ ಪರಿಚಯವಾದ ಕೆ.ಬಿ.ಸಿದ್ಧಯ್ಯನವರು‌ ಮುಂದೆ ತುಮಕೂರಿನ ನನ್ನ ಆತ್ಮೀಯ ಗೆಳೆಯರಲ್ಲೊಬ್ಬರಾಗಿದ್ದರು. ಬೆಚ್ಚಗಿನ ಪ್ರೀತಿಯ ಸೇತು ನಮ್ಮ ನಡುವೆ ಸದಾ ಬಲವಾಗಿತ್ತು. ನನ್ನ ಹಿತೈಷಿಗಳೂ ಹಿರಿಯರೂ ಆಗಿದ್ದ ಪ್ರೊ.ಎಚ್.ಆರ್.ದಾಸೇಗೌಡರ ಮನೆ ಅನೇಕ ಬಾರಿ ನಮ್ಮ common meeting place ಆಗಿತ್ತು. ನಾನು ಮೈಸೂರಿನಲ್ಲಿ ಕನ್ನಡ ಎಂ.ಎ. ಓದುತ್ತಿದ್ದಾಗ ಕೆಲವು ಕಾಲ ನನ್ನ ರೂಮಿನಲ್ಲಿ ಉಳಿದುಕೊಂಡು ಅಪೂರ್ಣ ಆಗಿದ್ದ ತಮ್ಮ ಇಂಗ್ಲಿಷ್ ಎಂ.ಎ. ಪದವಿ ಮುಗಿಸಿದರು. ನನಗಿಂತ ಹಿರಿಯರಾಗಿದ್ದರೂ ಹಿರಿತನದ ಭಾರ ನನ್ನನ್ನು ಕುಗ್ಗಿಸದ ಹಾಗೆ ನಡೆದುಕೊಂಡರು. ಮಾಜಿ‌ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಭಿಮಾನಿಯಾದ ಅವರು ೨೦೧೮ರ ಚುನಾವಣೆಯಲ್ಲಿ ಜಿ.ಪರಮೇಶ್ವರ್‌ ಅವರ ವಿರುದ್ಧ ಪ್ರಚಾರ ಮಾಡಿದ್ದಕ್ಕಾಗಿ ನಾನು ತೀಕ್ಷ್ಣವಾಗಿ ವಿರೋಧಿಸಿದಾಗಲೂ ತಪ್ಪು ತಿಳಿಯಲಿಲ್ಲ. ಅದೇ ಪ್ರೀತಿಯಿಂದ ನಡೆದುಕೊಂಡರು. ಸಾಕಷ್ಟು ಬರೆಯುವ ಶಕ್ತಿ ಇದ್ದರೂ ಹೆಚ್ಚು ಬರೆಯಲಿಲ್ಲ. ಆದರೆ ನೊಂದವರ, ದಮನಿತರ ದನಿಯಾಗಿದ್ದ ಅವರು ಇನ್ನೂ ಹೆಚ್ಚು ಕ್ರಿಯಾಶೀಲರಾಗಬಹುದಿತ್ತು. ಅಲ್ಲದೆ ಅಹಿಂದ ರಾಜಕಾರಣ ದಲಿತ ನಾಯಕತ್ವವನ್ನು ನಾಶಮಾಡುವ ಸಾಧ್ಯತೆಯನ್ನೂ ಅವರು ಮನಗಾಣಲಿಲ್ಲ.
ಈಗ ಬರಿ ನೆನಪಾಗಿರುವ ಅವರ ಬಗ್ಗೆ ಕಟು ಮಾತು ಆಡಲು ಇದು ಸಮಯವಲ್ಲ. ಅವರ ನೆನಪು ಸದಾ ಇರುತ್ತದೆ.

ಭೂಷಣ್ ಮಿಡಿಗೇಶಿ 

ಬಾಡು ತಿನ್ನಲು ಬಾರದ ಬಕಾಲ….
ಲೇ ಮಿಡ್ಗೇಶಿ…ಒಂದ್ಸಾರಿ ನಿಮ್ಮೂರ್ಗೆ ಹೋಗಿ ..ನಿಮ್ಮೊಲ್ದ ಹತ್ರಾನೆ ಬೆಳಿಗ್ಗೆಯಿಂದ ಬೈಗಾಗೋ ತನ್ಕ ಇದ್ದು ಬಾಡು ಬೇಸ್ಕಂಡು ಬಯಲಾಗೆ ಇದ್ದು ಬರ್ಬೇಕು…ನಿನ್ನ ಹಳ್ಳಿ ಸೊಗಡಿನ ಅಸೆಂಟ್ ನಲ್ಲಿ ಕನ್ನಡ ಕೇಳಕ್ಕೆ ಒಂಥರಾ ಮಜಾ…ಹೊಗ್ಬರಾನ ಅರೇಂಜ್ ಮಾಡ್ಕೊಳ್ಳೋ…ಎಂದು ಎಷ್ಟೋ ಸಾರಿ ಹೇಳಿ ಒಂದ್ಸಾರೀನೂ ಕಾಲ ಕೂಡಿ ಬರದೆ ನಮ್ಮನ್ನು ಬಿಟ್ಟು ಅಗಲಿದ ಬಕಾಲ..ಕೆಬಿಎಸ್ ಬಾರದ ಲೋಕಕ್ಕೆ ಹೋಗಿದ್ದು ದುರಂತ…very sad demise..ಅಂತಿಮ ನಮನಗಳು ಗುರುಗಳೇ…

‍ಲೇಖಕರು avadhi

18 October, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading